kitchen tips: ಕೊತ್ತಂಬರಿ ಸೊಪ್ಪು ಬೇಗನೆ ಕೊಳೆತು ಹೋಗುತ್ತದೆಯೇ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ

Share the Article

kitchen Tips: ಅಡುಗೆಯಲ್ಲಿ ಪ್ರತಿಯೊಬ್ಬರೂ ಕೊತ್ತಂಬರಿ ಸೊಪ್ಪನ್ನು ಬಳಸುವುದು ಸಾಮಾನ್ಯ. ಇನ್ನು ಬಹುತೇಕರಿಗೆ ಕೊತ್ತಂಬರಿ ಸೊಪ್ಪನ್ನು ಹಾಕದ ಅಡುಗೆ ಪರಿಪೂರ್ಣ ಅನ್ನಿಸುವುದಿಲ್ಲ. ಯಾಕೆಂದರೆ ಕೊತ್ತಂಬರಿ ಸೊಪ್ಪನ್ನು ಆಹಾರಕ್ಕೆ ಸೇರಿಸುವುದರಿಂದ ಆಹಾರಕ್ಕೆ ಸುವಾಸನೆ ದೊರೆಯುತ್ತೆ. ಆದರೆ ಈ ಕೊತ್ತಂಬರಿ ಸೊಪ್ಪು ಎರಡು ಮೂರು ದಿನಗಳಲ್ಲಿ ಹಾಳಾಗಿ ಬಿಡುತ್ತದೆ ಇನ್ನು ಕೊತ್ತಂಬರಿ ಸೊಪ್ಪು ತರಲು ಪದೇ ಪದೇ ಮಾರ್ಕೆಟ್ ಹೋಗಬೇಕು ಅನ್ನೋದೇ ಎಲ್ಲರ ಸಮಸ್ಯೆ ಆಗಿದೆ.

ಹೌದು, ಈ ಕೊತ್ತಂಬರಿ ಸೊಪ್ಪು ಕೆಲವೊಮ್ಮೆ ಫ್ರಿಡ್ಜ್‌ನಲ್ಲಿಟ್ಟರೂ ಇದರ ತಾಜಾತನ ಉಳಿಯುವುದಿಲ್ಲ. ಹೀಗಿರೋವಾಗ, ಕೊತ್ತಂಬರಿ ಸೊಪ್ಪನ್ನು ತಾಜಾ ಮತ್ತು ದೀರ್ಘಕಾಲ ಬಾಳಿಕೆ ಬರುವಂತೆ ಇಡೋದು ಹೇಗೆ ಎಂಬುದು ಬಹುತೇಕರ ಪ್ರಶ್ನೆ. ಅದಕ್ಕಾಗಿ ಇಲ್ಲಿದೆ ನೋಡಿ ಟಿಪ್ಸ್ (kitchen Tips).

ಮೊದಲಿಗೆ, ಕೊತ್ತಂಬರಿ ಸೊಪ್ಪನ್ನು ಕನಿಷ್ಠ ಮೂರು ಬಾರಿ ತೊಳೆಯಿರಿ. ಇದರಿಂದ ಸೊಪ್ಪಿನ ಎಲ್ಲಾ ಮಣ್ಣು ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ. ನಂತರ ಅದನ್ನು ಜರಡಿಗೆ ಹಾಕಿ ಮತ್ತು ನೀರನ್ನು ಚೆನ್ನಾಗಿ ಡ್ರೈ ಆಗುವಂತೆ ಮಾಡಿ. ಅದರ ಎಲ್ಲಾ ನೀರು ಒಣಗಿದ ನಂತರ, ಅದನ್ನು ಹತ್ತಿ ಬಟ್ಟೆ ಮೇಲೆ ಇರಿಸಿ ಮತ್ತು ಗಾಳಿಯಾಡದ ಪ್ರಿಡ್ಜ್ ಕಂಪಾರ್ಟ್ಮೆಂಟ್ನಲ್ಲಿ ಇರಿಸಿ.

ಕೊತ್ತಂಬರಿ ಸೊಪ್ಪನ್ನು ತಾಜಾವಾಗಿಡಲು, ಅದರ ಕಾಂಡಗಳನ್ನು ಕತ್ತರಿಸಿ, ಅದನ್ನು ಕಿಚನ್ ರೋಲ್ (kitchen role) ಅಥವಾ ಕ್ಲಿಂಗ್ ರ್ಯಾಪ್ ನಲ್ಲಿ ಸುತ್ತಿ ಮತ್ತು ಸ್ಟೀಲ್ ಗಾಳಿಯಾಡದ ಡಬ್ಬಿಯಲ್ಲಿ ಫ್ರಿಜ್ ನಲ್ಲಿ ಇರಿಸಿ. ಇದು ಕೊತ್ತಂಬರಿಯನ್ನು ಸುಮಾರು 10 ದಿನಗಳವರೆಗೆ ತಾಜಾವಾಗಿರಿಸುತ್ತದೆ.

ಅಥವಾ ಎರಡು ಮಸ್ಲಿನ್ ಬಟ್ಟೆಗಳನ್ನು (maslin cloths) ತೆಗೆದುಕೊಂಡು ಅದನ್ನು, ಒಂದು ಪೆಟ್ಟಿಗೆಯಲ್ಲಿ ಇರಿಸಿ, ಅದರ ಮೇಲೆ ಕೊತ್ತಂಬರಿಯನ್ನು ಇರಿಸಿ, ಅದರ ಮೇಲೆ ಮತ್ತೊಂದು ಮಸ್ಲಿನ್ ಬಟ್ಟೆಯನ್ನು ಇಡಿ, ನಂತರ ಅದನ್ನು ಮುಚ್ಚಿ ಫ್ರಿಡ್ಜ್ ನಲ್ಲಿ ಇರಿಸಿ. ಇದು ಅದನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸುತ್ತದೆ.

ಇದಲ್ಲದೆ, ಕೊತ್ತಂಬರಿಯನ್ನು ತಾಜಾವಾಗಿಡಲು, ನೀವು ಒಂದು ಗಾಜಿನ ಜಾರ್ ನಲ್ಲಿ ನೀರು ತುಂಬಿ. ಈಗ ಕೊತ್ತಂಬರಿಯನ್ನು ಕಾಂಡದಿಂದ ಹಾಕಿ ಮತ್ತು ಅದರ ಮೇಲೆ ಪಾಲಿಥಿನ್ ಅನ್ನು ಹಾಕಿ. ಇದು ಕೊತ್ತಂಬರಿಯನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸುತ್ತದೆ.

ಇನ್ನು ಕೊತ್ತಂಬರಿ ಸೊಪ್ಪನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಬಯಸಿದರೆ, ಅದು ಒಣಗುವವರೆಗೆ ಬಿಸಿಲಿನಲ್ಲಿ ಒಣಗಿಸಿ. ಈಗ ಅದನ್ನು ಫ್ರಿಡ್ಜ್ ನಲ್ಲಿರುವ (fridge) ಪೆಟ್ಟಿಗೆಯಲ್ಲಿ ಹಾಕಿ. ಈ ಕೊತ್ತಂಬರಿ ಸೊಪ್ಪನ್ನು ಹೊರತುಪಡಿಸಿ, ನೀವು ಪುದೀನಾ ಅಥವಾ ಮೆಂತ್ಯ ಎಲೆಗಳನ್ನು ಸಹ ಒಣಗಿಸಬಹುದು.

Leave A Reply

Your email address will not be published.