Bigg Boss : ಬಿಗ್ ಬಾಸ್ ಮನೆಯಿಂದ ಕಿಚ್ಚ ಸುದೀಪ್ ಔಟ್ – ರೂಪೇಶ್ ರಾಜಣ್ಣನಿಂದ ಕಾರಣ ಬಹಿರಂಗ !! ತಮಿಳು, ಮರಾಠಿ ಬಿಗ್ ಬಾಸ್’ಗೂ ಇದಕ್ಕೂ ಇದೆಯಾ ಸಂಬಂಧ?
Bigg Boss: ಬಿಗ್ ಬಾಸ್ ಕನ್ನಡ ಶೋ ಅಂದ್ರೆ ಯಾರು ನೆನಪಾಗುತ್ತಾರೋ ಇಲ್ಲ ಗೊತ್ತಿಲ್ಲ. ಆದರೆ ಥಟ್ ಅಂತ ನೆನಪಾಗುವುದೇ ಕಿಚ್ಚ ಸುದೀಪ್(Kiccha Sudeep). ಕಳೆದ ಹತ್ತು ವರ್ಷದಿಂದ ಅವರು ಬಿಗ್ ಬಾಸ್ ಜರ್ನಿಯಲ್ಲಿ ಮುಂದುವರೆದಿದ್ದಾರೆ. ಆದರೀಗ ಇದೆಲ್ಲದರ ನಡುವೆಯೇ ಕಿಚ್ಚ ಸುದೀಪ್ ಬಿಗ್ಬಾಸ್ಗೆ ವಿದಾಯ ಹೇಳಿದ್ದಾರೆ. ಕಿಚ್ಚನ ಈ ನಿರ್ಧಾರಕ್ಕೆ ಇದೀಗ ಕಾರಣ ಬಹಿರಂಗವಾಗಿದೆ.
ಹೌದು, ಕಿಚ್ಚ ಸುದೀಪ್ ಅವರು ಏಕಾಏಕಿ ‘ಬಿಗ್ ಬಾಸ್'(Bigg Boss) ನಿರೂಪಣೆಯಿಂದ ಕೆಳಕ್ಕೆ ಇಳಿಯೋ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಈ ಘೋಷಣೆಯ ಹಿಂದೆ ಯಾವುದೋ ಒಂದು ಬಲವಾದ ಕಾರಣವೇ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಟ್ವೀಟ್ ಮಾಡಿದ್ದಾರೆ.
‘ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳೆ ನಿಮ್ಮ ಆಟಕ್ಕೆ ಸುದೀಪ್ ನಿರೂಪಣೆ ನಿಲ್ಲಿಸಬೇಕಾಯಿತು. ಅವರಿಗೆ ಮಾಡಿದ ಅವಮಾನ ಸಹಿಸುವುದಿಲ್ಲ. ಮುಂಬೈ ಮರಾಠಿ ಹಾಗೂ ತಮಿಳು ನಿರ್ದೇಶಕರೇ ಮೊದಲು ಬಿಗ್ ಬಾಸ್ ಬಿಡಿ, ಇಲ್ಲ ಬಿಗ್ ಬಾಸ್ ನಿಲ್ಲಬೇಕು. ಅಸಲಿ ವಿಷಯ ನಾಳೆ ಮಾತಾಡ್ತೀನಿ’ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.
ಅಂದಹಾಗೆ ರೂಪೇಶ್ ರಾಜಣ್ಣ ಅವರು ಕನ್ನಡ ಪರ ಹೋರಾಟಗಾರ. ಕನ್ನಡದ ಪರವಾಗಿ ಅವರು ಧ್ವನಿ ಎತ್ತುತ್ತಾರೆ. ಅವರು ಈ ಮೊದಲು ಬಿಗ್ ಬಾಸ್ಗೂ ಹೋಗಿ ಬಂದಿದ್ದಾರೆ. ಹೀಗಾಗಿ, ಅವರ ಜನಪ್ರಿಯತೆ ಹೆಚ್ಚಿದೆ. ಅಸಲಿಗೆ ಬಿಗ್ ಬಾಸ್ನಲ್ಲಿ ಏನಾಯ್ತು? ಅಲ್ಲಿ ನಡೆದ ಘಟನೆ ಏನು ಎನ್ನುವ ಬಗ್ಗೆ ಕುತೂಹಲ ಮೂಡಿದೆ. ಇಂದು (ಅಕ್ಟೋಬರ್ 14) ರೂಪೇಶ್ ರಾಜಣ್ಣ ಈ ಬಗ್ಗೆ ಘೋಷಣೆ ಮಾಡೋ ಸಾಧ್ಯತೆ ಇದೆ.
ಸುದೀಪ್ ಟ್ವೀಟ್ ಏನು?
ಬಿಗ್ ಬಾಸ್ (Bigg Boss) ಕನ್ನಡ 11 ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆಲ್ಲ ಧನ್ಯವಾಗಳು. ಸಿಕ್ಕಿರುವ ಟಿಆರ್ಪಿ ನೋಡಿದರೆ ನನ್ನ ಬಗ್ಗೆ ಮತ್ತು ಈ ಶೋ ಬಗ್ಗೆ ನೀವು ತೋರಿಸಿ ಪ್ರೀತಿ ಏನೆಂಬುದು ತಿಳಿಯುತ್ತದೆ. ಈ 10 ಪ್ಲಸ್ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಚೆನ್ನಾಗಿತ್ತು. ಈಗ ನಾನು ಬೇರೆ ಕಡೆಗೆ ಗಮನ ಹರಿಸುವ ಸಮಯ ಬಂದಿದೆ.
ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ
ಕೆಲವು ಕನ್ನಡ ದ್ರೋಹಿಗಳ
ನಿಮ್ಮ ಕಿತ್ತೋದ್ ಆಟಕ್ಕೆ @KicchaSudeep ಬಿಗ್ ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ.
ಅವರಿಗೆ ಮಾಡಿದ ಅವಮಾನ ಸಹಿಸೋಲ್ಲ
ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ ಇಲ್ಲ ಬಿಗ್ ಬಾಸ್ ನಿಲ್ಲಬೇಕು
ಅಸಲಿ ವಿಷಯ ನಾಳೆ ಮಾತಾಡ್ತೀನಿ.@Chakravarthy_dj— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) October 13, 2024
ನಿರೂಪಕನಾಗಿ ಇದು ನನ್ನ ಕೊನೆಯ ಬಿಗ್ ಬಾಸ್ (Bigg Boss). ಇಷ್ಟು ವರ್ಷಗಳ ಕಾಲ ಬಿಗ್ ಬಾಸ್ (Bigg Boss) ಕಾರ್ಯಕ್ರಮವನ್ನು ನೋಡಿ ನೀವು ಮತ್ತು ಕಲರ್ಸ್ನವರು ನನ್ನ ನಿರ್ಧಾರವನ್ನು ಗೌರವಿಸುತ್ತೀರಿ ಎಂದು ನಂಬಿದ್ದೇನೆ. ಈ ನಿರ್ಧಾರ ಅತ್ಯುತ್ತಮ ಆಗುವಂತೆ ಮಾಡೋಣ. ನಿಮ್ಮೆಲ್ಲರನ್ನೂ ನಿಮ್ಮನ್ನು ಮನರಂಜಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.