Mailaringeshwar Karnika: “ಇಟ್ಟ ರಾಮನ ಬಾಣ ಹುಸಿಯಲ್ಲ”- ಬೀರೂರು ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ

Mailaringeshwar Karnika: ಇತಿಹಾಸ ಪ್ರಸಿದ್ಧ ಮೈಲಾರಲಿಂಗೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ರವಿವಾರ (ಇಂದು) ನಸುಕಿನ ಜಾವದಲ್ಲಿ ಮೈಲಾರಲಿಂಗ ಸ್ವಾಮಿಯು ಕಾರ್ಣಿಕ ನುಡಿದಿದ್ದಾರೆ. ಸ್ವಾಮಿಯ ಕಾರ್ಣಿಕ ಕೇಳಲು ಸ್ಥಳದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಭಕ್ತಾಧಿಗಳು ಆಗಮನಿಸಿದ್ದರು. ನಸುಕಿನ ಜಾವ (ಅ.13) 4.45 ರಂದು ಸುಮಾರಿಗೆ ಕಾರ್ಣಿಕ ನುಡಿಯಲಾಗಿದ್ದು, ” ಇಟ್ಟ ರಾಮನ ಬಾಣ ಹುಸಿಯಲ್ಲ, ನ್ಯಾಯದ ತಕ್ಕಡಿ ಜರುಗಿತು, ಜ್ಞಾನದ ಹಣತೆ ಹಚ್ಚಿದರು, ಜೀವ ರಾಶಿಗೆ ಸಂಪಾಯಿತಲೇ ಪರಾಕ್‌” ಎಂದು ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ನುಡಿದರು.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಮೈಲಾರಲಿಂಗೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಈ ಕಾರ್ಣಿಕ ನುಡಿಯಲಾಗಿದೆ. ಮೈಲಾರಲಿಂಗ ಸ್ವಾಮಿಯ ಕಾರ್ಣಿಕ ಹಲವು ಬಾರಿ ನಿಜವಾಗಿದೆ.

ಕಾರ್ಣಿಕ ಅರ್ಥ;
ನ್ಯಾಯದ ತಕ್ಕಡಿ ಜರುಗಿತ್ತು: ರಾಜ್ಯದಲ್ಲಿ ನ್ಯಾಯಕ್ಕೆ ಜಯವಿಲ್ಲ. ಅನ್ಯಾಯಕ್ಕೆ ಜಯವಾಗುತ್ತದೆ. ಅನ್ಯಾಯದ ದಾರಿಯಲ್ಲಿದ್ದವರಿಗೆ ಜಯ ದೊರಕುತ್ತದೆ.

ಜ್ಞಾನದ ಹಣತೆ ಹಚ್ಚಿದರು: ಜ್ಞಾನಿಗಳು ರಾಜ್ಯದಲ್ಲಿ ನಡೆಯುವಂತಹ ಘಟನೆ ಕುರಿತು ಮೊದಲೇ ಮುನ್ಸೂಚನೆ ನೀಡುತ್ತಾರೆ.

ಜೀವ ರಾಶಿಗೆ ಸಂಪಾಯಿತಲೇ ಪರಾಕ್‌ ; ಉತ್ತಮ ಮಳೆಯಾಗಿ ರಾಜ್ಯದಲ್ಲಿ ಸಕಲ ಜೀವ ರಾಶಿಗಳು ಸಂಪಾಗಿರುತ್ತದೆ.

Leave A Reply

Your email address will not be published.