Karnataka Government: ಮಲೆನಾಡು ಭಾಗದಲ್ಲಿ ಗುಡ್ಡ, ಭೂಕುಸಿತಕ್ಕೆ ಕಾರಣ ಬಹಿರಂಗ; ವರದಿಯಲ್ಲೇನಿದೆ

Karnataka Government: ಕೇರಳದ ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತದ ನಂತರ ರಾಜ್ಯ ಸರಕಾರ ಮಲೆನಾಡು ಭಾಗದ ಅಪಾಯಕಾರಿ ಸ್ಥಳಗಳ ಪಟ್ಟಿ ನೀಡುವಂತೆ ಕೇಳಿದ್ದು, ಚಿಕ್ಕಮಗಳೂರು ಜಿಲ್ಲಾಡಳಿತ ಇದೀಗ 77 ಅಪಾಯಕಾರಿ ಸ್ಥಳಗಳನ್ನು ಗುರುತು ಮಾಡಿ ವರದಿ ಕಳುಹಿಸಿತ್ತು.

ನಂತರ ದತ್ತಪೀಠ, ಮುಳ್ಳಯ್ಯನಗಿರಿ, ಕವಿಕಲ್‌ ಗಂಡಿ ಸೇರಿ ಅನೇಕ ಭಾಗಗಳಲ್ಲಿ ಜಿಯೋಲಾಜಿಕಲ್‌ ಸರ್ವೆ ಮಾಡಿದ ಚಿಕ್ಕಮಗಳೂರು ಜಿಲ್ಲಾಡಳಿತ ಇದೀಗ ಸರಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ.

ಅವೈಜ್ಞಾನಿಕ ಕಾಮಗಾರಿ, ವಾಹನಗಳ ದಟ್ಟಣೆ, ಅತಿ ಹೆಚ್ಚು ಮಳೆಯ ಕಾರಣದಿಂದ ಭೂ ಕುಸಿತವಾಗುತ್ತಿದೆ ಎಂದು ಸರ್ವೆ ತಂಡ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಹಾಗಾಗಿ ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತದ ಸಾಲುಗಳಲ್ಲಿ ವಾಹನ ದಟ್ಟಣೆ ನಿಲ್ಲಿಸುವಂತೆ ಜಿಯೋಲಾಜಿಕಲ್‌ ಸರ್ವೆ ತಂಡ ಸೂಚನೆ ನೀಡಿದೆ.

ಸದ್ಯಕ್ಕೆ ಚಿಕ್ಕಮಗಳೂರು ಜಿಲ್ಲೆಯ 88 ಸ್ಥಳಗಳಲ್ಲಿ ಪರಿಶೀಲನೆ ಮಾಡಿ ವರದಿ ಸಲ್ಲಿಕೆ ಮಾಡಿದೆ. ಅವೈಜ್ಞಾನಿಕ ಕಾಮಗಾರಿಗಳಿಂದ ಗುಡ್ಡ, ಭೂ ಕುಸಿತಕ್ಕೆ ಮುಖ್ಯ ಕಾರಣ ಎನ್ನಲಾಗಿದ್ದು, ಅತಿ ಹೆಚ್ಚು ಕಾಮಗಾರಿಗಳಿಂದ ಪಶ್ಚಿಮ ಘಟ್ಟಗಳು ಹಾನಿಗೊಳಗಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ಗೆ ವರದಿ ಸಲ್ಲಿಕೆ ಮಾಡಲಾಗಿದೆ.

 

Leave A Reply

Your email address will not be published.