Snake viral video: ಎಂಟೆದೆ ಗುಂಡಿಗೆ ಅಂದ್ರೆ ಇದೇ ನೋಡಿ! ಪ್ಯಾಂಟ್ ಒಳಗೆ ಸೇರಿದ ನಾಗಪ್ಪನನ್ನು ಹೊರಗೆ ತೆಗೆದಿದ್ದೇ ಭಯಾನಕ

Share the Article

Snake viral video: ಹಾವು ಎಂದರೆ ಬಹುತೇಕರಿಗೆ ಎಲ್ಲಿಲ್ಲದ ಭಯ ಇರುತ್ತೆ. ಆದ್ರೆ ಇಲ್ಲೊಬ್ಬ ಶಾಲಾ ಶಿಕ್ಷಕನ ಪ್ಯಾಂಟಿನೊಳಗೆ ವಿಷ ಹಾವು ಸೇರಿದ್ದು, ಪ್ಯಾಂಟಿನಿಂದ ಹಾವು ಹೊರ ತೆಗೆಯುವ ವಿಡಿಯೋ ಸೋಶೀಯಲ್ ಮೀಡಿಯಾದಲ್ಲಿ ವೈರಲ್ (Snake viral video) ಆಗುತ್ತಿದೆ.

ಹೌದು, ವೈರಲ್ ಆಗಿರುವ ವಿಡಿಯೋದಲ್ಲಿ ಶಿಕ್ಷಕನ ಪ್ಯಾಂಟ್‌ನಿಂದ ಹಾವನ್ನು ತೆಗೆಯುವುದನ್ನು ನೋಡಬಹುದು. ಇಬ್ಬರು ಉರಗತಜ್ಞರು ಅತ್ಯಂತ ತಾಳ್ಮೆಯಿಂದ ಶಿಕ್ಷಕನಿಗೆ ಯಾವುದೇ ಅಪಾಯವಾಗದಂತೆ ಹಾವಿಗೂ ನೋವಾಗದಂತೆ ಹಾವನ್ನು ಪ್ಯಾಂಟ್‌ನಿಂದ ಹೊರಗೆ ತೆಗೆದು ರಕ್ಷಣೆ ಮಾಡಿದ್ದಾರೆ. ಸ್ವಲ್ಪ ವ್ಯತ್ಯಾಸವಾದ್ರೂ ಹಾವು ಶಿಕ್ಷಕನಿಗೆ ಕಚ್ಚುವ ಸಾಧ್ಯತೆಗಳಿದ್ದವು. ಒಟ್ಟಿನಲ್ಲಿ ಈ ಶಿಕ್ಷಕನ ಗುಂಡಿಗೆ ಗಟ್ಟಿಯಾಗಿದೆ

ಶಾಲಾ ಕಾರ್ಯಕ್ರಮದಿಂದ ಹೊರ ಬಂದ ಶಿಕ್ಷಕ ಪ್ಯಾಂಟ್ ಬಿಚ್ಚಿದಾಗ ಹಾವು ಆತನ ಕಾಲಡಿಯಲ್ಲಿ ಸಿಲುಕಿದೆ. ಹಾವು ನಿಧಾನಕ್ಕೆ ಮೇಲೆ ಬಂದು ಮುಖ ಹೊರಗೆ ಹಾಕಿ ಬುಸುಗುಟ್ಟುತ್ತಿದೆ. ಹಾವು ಮೇಲೆ-ಕೆಳಗೆ ಓಡಾಡುತ್ತಿದ್ರೆ ಶಿಕ್ಷಕ ಮಾತ್ರ ಕದಲದೇ ತಟಸ್ಥವಾಗಿ ನಿಂತಿದ್ದನು. ಕೊಂಚ ಅಲುಗಾಡಿದರೂ ಹಾವು ಭಯಗೊಂಡು ಕಚ್ಚುವ ಸಾಧ್ಯತೆ ಇತ್ತು. ಆದ್ದರಿಂದ ಶಿಕ್ಷಕ ಗೊಂಬೆಯಂತೆಯೇ ನಿಂತಿದ್ದನು. ಸದ್ಯ ಇಬ್ಬರು ಯುವಕರು ನಿಧಾನವಾಗಿ ಹಾವನ್ನು ಹೊರಗಡೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.ಇಂತಹ ಪರಿಸ್ಥಿತಿಯನ್ನು ಎದುರಿಸಲು ಅನುಭವಿ ಉರಗತಜ್ಞರಿಂದ ಮಾತ್ರ ಸಾಧ್ಯವಾಗುತ್ತದೆ.

ಮುಖ್ಯವಾಗಿ ಥೈಲ್ಯಾಂಡ್‌ನಲ್ಲಿ ಪ್ರತಿವರ್ಷ ಸುಮಾರು 70 ಸಾವಿರಕ್ಕೂ ಅಧಿಕ ಜನರು ಹಾವು ಕಡಿತಕ್ಕೆ ಒಳಗಾಗುತ್ತಾರೆ. ಇದರಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಆದ್ರಿಂದ ಥೈಲ್ಯಾಂಡ್ ಸರ್ಕಾರ ಹಾವುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತದೆ.

Leave A Reply