Crime: ಜೈಲಿನ ಕಂಬಿ ಮುರಿದು 20 ಅಡಿ ಕಾಂಪೌಂಡ್ ಹಾರಿ ಕೈದಿಗಳು ಎಸ್ಕೇಪ್ !
Crime: ಜೈಲಿನ ಕಂಬಿ ಮುರಿದು 20 ಅಡಿ ಕಾಂಪೌಂಡ್ ಹಾರಿ ಐವರು ವಿಚಾರಣಾಧೀನ ಕೈದಿಗಳು ಬೆಡ್ಶೀಟ್ಗಳು ಮತ್ತು ಲುಂಗಿಗಳನ್ನು ಬಳಸಿ ಪರಾರಿಯಾದ ಘಟನೆ (Crime) ಅಸ್ಸಾಂನಲ್ಲಿ (Assam) ನಡೆದಿದೆ.
ಶುಕ್ರವಾರ ರಾತ್ರಿ 1 ರಿಂದ 2 ಗಂಟೆಯ ವೇಲೆ ಮೋರಿಗಾಂವ್ ಜಿಲ್ಲಾ ಕಾರಾಗೃಹದಿಂದ ತಪ್ಪಿಸಿಕೊಂಡ ಕೈದಿಗಳನ್ನು ಸೈಫುದ್ದೀನ್, ಜಿಯಾರುಲ್ ಇಸ್ಲಾಂ, ನೂರ್ ಇಸ್ಲಾಂ, ಮಫಿದುಲ್ ಮತ್ತು ಅಬ್ದುಲ್ ರಶೀದ್ ಎಂದು ಗುರುತಿಸಲಾಗಿದೆ. ಬ್ಯಾರಕ್ಗಳ ರಾಡ್ಗಳನ್ನು ಮುರಿದು ಬಳಿಕ 20 ಅಡಿ ಕಾಂಪೌಂಡ್ ಇಳಿಯಲು ಕಂಬಳಿ, ಲುಂಗಿ ಮತ್ತು ಬೆಡ್ಶೀಟ್ಗಳನ್ನು ಕೈದಿಗಳು ಬಳಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೈಲಿಂದ ತಪ್ಪಿಸಿಕೊಂಡ ಐವರು ಪೋಕ್ಸೊ (POCSO) ಪ್ರಕರಣದಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದರು. ಪರಾರಿಯಾದವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಈ ಬಗ್ಗೆ ಕೆಲವು ಜೈಲಲ್ಲಿರುವ ಕೈದಿಗಳನ್ನು ವಿಚಾರಣೆ ಮಾಡುತ್ತೇವೆ. ಈ ಸಂಬಂಧ ಜೈಲರ್ ಪ್ರಶಾಂತ ಸೈಕಿಯಾ ಅವರನ್ನು ಅಮಾನತುಗೊಳಿಸಲಾಗಿದೆ. ಮತ್ತು ಕೈದಿಗಳು ಸೋನಿತ್ಪುರ ಜಿಲ್ಲೆಯ ತೇಜ್ಪುರ ಮತ್ತು ಮೊರಿಗಾಂವ್ ಜಿಲ್ಲೆಯ ಲಾಹೋರಿಘಾಟ್ ಮತ್ತು ಮೊಯಿರಾಬರಿ ನಿವಾಸಿಗಳು ಎಂದು ಮೊರಿಗಾಂವ್ ಜಿಲ್ಲಾಧಿಕಾರಿ ದೇವಾಶಿಸ್ ಶರ್ಮಾ ತಿಳಿಸಿದ್ದಾರೆ.
ತನಿಖೆಯಲ್ಲಿ ಎಲ್ಲವೂ ಹೊರಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತು ಶೀಘ್ರದಲಲ್ಲಿ ತಪ್ಪಿಸಿಕೊಂಡ ಕೈದಿಗಳನ್ನು ವಶಕ್ಕೆ ಪಡೆದು ಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ.