No roads: ಅತಿ ಹೆಚ್ಚು ಟ್ಯಾಕ್ಸ್ ಕಟ್ಟುವ ಏರಿಯಾ ಇದು: ಆದ್ರೆ ರಸ್ತೆಗಳ‌ ಸ್ಥಿತಿ ಮಾತ್ರ ಅದ್ವಾನ

No roads: 22 ವರ್ಷದಿಂದ ಟಾರ್(Tar) ಮುಖ ಕಾಣದ ರಸ್ತೆಗಳು(Roads) ದೇವರಿಗೇ ಪ್ರೀತಿ. ಈ ರಸ್ತೆಗಳು ಇರೋದು ರಾಜ್ಯದಲ್ಲಿ ಅತಿ ಹೆಚ್ಚು ಟ್ಯಾಕ್ಸ್ ಕಟ್ಟುವ ಕೈಗಾರಿಕಾ ಪ್ರದೇಶವಾದ( Industrial area) ಪೀಣ್ಯದಲ್ಲಿ(Peenya). ಆದರೆ ಈ ರಸ್ತೆಗಳ‌ ಸ್ಥಿತಿ ಮಾತ್ರ ಅದ್ವಾನವಾಗಿದೆ. ಈ ಏರಿಯಾದ ಸಾರ್ವಜನಿಕರಿಗೆ(Public) ಈ ರಸ್ತೆಗಳು ನರಕ ದರ್ಶನ ಮಾಡಿಸುತ್ತಿವೆ. ಈ ರಸ್ತೆಯಲ್ಲಿ ಓಡಾಡುವ ಉದ್ಯಮಿಗಳ ಮತ್ತು ಕಾರ್ಮಿಕರ ಪರದಾಟ ಹೇಳತೀರದು.

ಈ ಸಂಬಂಧ ಕಾರ್ಮಿಕರ ನೆರವಿಗೆ ನಿಲ್ಲುವಂತೆ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಸರ್ಕಾರಕ್ಕೆ ಹಲವು ಬಾರಿ ಆಗ್ರಹಿಸಿದ್ದಾರೆ. ಆದ್ರೂ ಆ ಸಮಸ್ಯೆಯಿಂದ ಈ ಭಾಗದ ಜನರಿಗೆ ಮುಕ್ತಿ ಸಿಕ್ಕಿಲ್ಲ. ಮಳೆ ಬಿದ್ದಿರುವುದರಿಂದ ಒಂದೊಂದು ರಸ್ತೆಯಲ್ಲಿ ಜವರಾಯನ ರೂಪದಲ್ಲಿ ನೂರಾರು ಗುಂಡಿಗಳು ಬಿದ್ದಿವೆ. ಕಾರ್ಮಿಕರು ಈ ಗುಂಡಿ ಗಂಡಾಂತರ ಗಳಿಂದ ರೋಸಿ ಹೋಗಿದ್ದಾರೆ.

ರಸ್ತೆ ಸರಿ ಮಾಡಿ ಕೊಡಲು ಪಾಲಿಕೆಗೆ ಪರಿ ಪರಿಯಾಗಿ ಕೇಳಿಕೊಂಡ್ರೂ ಯಾವುದೇ ಪ್ರಯೋಜನ ಆಗಿಲ್ಲ. ಈ ರಸ್ತೆಯಲ್ಲಿ ದಿನನಿತ್ಯ ಲಕ್ಷಾಂತರ ಜನ ಓಡಾಡುವುದಲ್ಲದೆ, ಸಾವಿರಾರು ವಾಹನಗಳು ಕೂಡ ಸಂಚಾರ ಮಾಡುತ್ತವೆ. ಇದೀಗ ಪೀಣ್ಯ ಕೈಗಾರಿಕಾ ಪ್ರದೇಶದ ರಸ್ತೆ ದುರಸ್ತಿ ಮಾಡಲು ಆಗ್ರಹ ಹೆಚ್ಚಿದೆ.

Leave A Reply

Your email address will not be published.