WhatsApp Feature: ವಾಟ್ಸ್ಆ್ಯಪ್ನಲ್ಲಿ ಹೊಸ ಫೀಚರ್: ಹೇಗೆ ಯೂಸ್ ಆಗುತ್ತೆ ಇಲ್ನೋಡಿ!
WhatsApp Feature: ಇತ್ತೀಚಿಗೆ ವಾಟ್ಸಾಪ್ ಯೂಸ್ ಮಾಡೋರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈಗಾಗಲೇ ಮೆಟಾ ಒಡೆತನದ ವಾಟ್ಸಪ್ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಫೀಚರ್ಗಳನ್ನು ಪರಿಚಯಿಸಿದ್ದು, ಇದೀಗ ಪ್ರಸ್ತುತ ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಫೀಚರ್ (WhatsApp Update) ಪರಿಚಯಿಸಲಿದ್ದು, ಈ ಹೊಸ ಫೀಚರ್ ಮೂಲಕ ನೀವು ನಿಮ್ಮ ವಾಟ್ಸ್ಆ್ಯಪ್ ಚಾಟ್‌ನಲ್ಲಿ ಪಡೆಯುವ ಫೋಟೋಗಳನ್ನು ಗೂಗಲ್ನಲ್ಲಿ ಹುಡುಕುವ ಅವಕಾಶ ನೀಡಲಿದೆ. ಬನ್ನಿ ಅದು ಹೇಗೆಂದು ನೋಡೋಣ.
ಈಗಾಗಲೇ ವಾಟ್ಸ್ಆ್ಯಪ್ ವೆಬ್‌ನಲ್ಲಿ ಸರ್ಚ್ ಫೋಟೋ ಎಂಬ ಹೊಸ ವೈಶಿಷ್ಟ್ಯವನ್ನು ತರುವಲ್ಲಿ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಈ ಹೊಸ ವೈಶಿಷ್ಟ್ಯದ ಸಹಾಯದಿಂದ ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಚಾಟ್‌ನಲ್ಲಿ ಪಡೆಯುವ ಫೋಟೋಗಳನ್ನು ಗೂಗಲ್ನಲ್ಲಿ ಹುಡುಕಬಹುದು.
ಯಾಕೆಂದರೆ ಇತ್ತೀಚಿಗೆ ನಕಲಿ ಫೋಟೋಗಳು ವಾಟ್ಸ್ಆ್ಯಪ್ನಲ್ಲಿ ಎಗ್ಗಿಲ್ಲದೆ ವೈರಲ್ ಆಗುತ್ತಿದೆ. ಹೀಗಾಗಿ ಅವುಗಳನ್ನು ಪರಿಶೀಲಿಸಲು ವಾಟ್ಸ್ಆ್ಯಪ್ ಈ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ಒಂದು ವೇಳೆ ನೀವು ಪಡೆದ ಫೋಟೋ ನಿಜವೇ? ಅಥವಾ ಎಡಿಟ್ ಮಾಡಿದ್ದೀರಾ? ಫೇಕ್ ಫೋಟೋ ವೇ?ಎಂದು ಈ ಮೂಲಕ ತಿಳಿಯಬಹುದು. ಅಲ್ಲದೇ ನೀವು ಫೋಟೋದ ಮೂಲವನ್ನು ಸಹ ನೋಡಬಹುದು.
ಮುಖ್ಯವಾಗಿ ಈ ವೈಶಿಷ್ಟ್ಯವು ತನ್ನ ಬಳಕೆದಾರರ ಗೌಪ್ಯತೆಗಾಗಿ ನೀಡಲಾಗುತ್ತಿದ್ದು, ಯಾವುದೇ ಬೆದರಿಕೆಯನ್ನು ಉಂಟುಮಾಡುವುದಿಲ್ಲ ಎಂದು ವಾಟ್ಸ್ಆ್ಯಪ್ ಹೇಳಿದೆ. ಪ್ರಸ್ತುತ ಅಭಿವೃದ್ಧಿ ಹಂತದಲ್ಲಿರುವ ಈ ವೈಶಿಷ್ಟ್ಯವನ್ನು ವಾಟ್ಸಾಪ್ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ.