Devaragudda Karnika: ಮುಂದಿನ ಸಿಎಂ ಬಗ್ಗೆ ಅಚ್ಚರಿ ಕಾರ್ಣಿಕ ನುಡಿದ ದೇವರಗುಡ್ಡ ಗೊರವಯ್ಯ !!

Devaragudda Karnika: ಮೈಲಾರಲಿಂಗೇಶ್ವರ ಕಾರ್ಣಿಕದಷ್ಟೇ ಖ್ಯಾತಿ ಪಡೆದಿರುವ ಪಕ್ಕದ ದೇವರಗುಡ್ಡದ ಮಾಲತೇಶ ಕಾರ್ಣಿಕಕ್ಕೆ(Devaragudda Karnika) ತನ್ನದೇ ಆದ ಮಹತ್ವವಿದೆ. ಈ ಕಾರ್ಣಿಕ ಶುಕ್ರವಾರ ಜರುಗಿದೆ. ‘ಆಕಾಶದತ್ತ ಚಿಗುರಿತಲೇ, ಬೇರು ಮುದ್ದಾತಲೇ’ ಪರಾಕ್ ಎಂದು ಗೊರವಯ್ಯನ ಕಾರ್ಣಿಕ ನುಡಿದಿದ್ದಾರೆ. ಇದರೊಂದಿಗೆಯೇ ಗೊರವಯ್ಯ ಮುಂದಿನ ಸಿಎಂ ಬಗ್ಗೆ ಅಚ್ಚರಿ ಭವಿಷ್ಯ ನುಡಿದಿದೆ.

ಹೌದು, ರಾಜ್ಯದ ಐತಿಹಾಸಿಕ ಶ್ರೀ ಕ್ಷೇತ್ರ ದೇವರಗುಡ್ಡದ ಮಾಲತೇಶಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಹಬ್ಬದ ವೇಳೆ ನಡೆಯುವ ಕಾರ್ಣಿಕೋತ್ಸವದಲ್ಲಿ ಗೊರವಪ್ಪ “ಆಕಾಶನ ಚಿಗುರೀತಲೇ ಬೇರೆಲ್ಲಾ ಮುತ್ತಾಯಿತಲೇ ಪರಾಕ್” ಎಂದು ಭವಿಷ್ಯವಾಣಿ ನುಡಿದಿದ್ದಾರೆ. ಈ ಬೆನ್ನಲ್ಲೇ ದೇವರಗುಡ್ಡದಲ್ಲಿ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ್ ಭಟ್ ಗುರೂಜಿ ಮಾಧ್ಯಮ ಗೊರವಯ್ಯನ ಕಾರ್ಣಿಕ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ಗೊರವಯ್ಯನವರು 9 ದಿನ ಉಪವಾಸ ಇದ್ದು ಬಿಲ್ಲನ್ನೇರಿ ಕಾರ್ಣೀಕ ನುಡೀತಾರೆ, ಆಕಾಶದತ್ತ ಚಿಗುರಿತಲೇ ಅಂದರೆ, ಒಳ್ಳೆ ಮಳೆ ಆಗುತ್ತೆ, ಬೇರು ಮುದ್ದಾಯಿತಲೇ ಅಂದರೆ ರೈತರಿಗೆ, ಒಳ್ಳೆ ಬೆಳೆ ಬರುತ್ತೆ, ಅದನ್ನ ತೆಗೆದುಕೊಳ್ಳೋ ಫಲಾನುಭವಿಗಳಿಗೂ ಒಳ್ಳೆದಾಗುತ್ತೆ ಅಂತ ವಿಶ್ಲೇಷಣೆ ಮಾಡಬಹುದು ಎಂದಿದ್ದಾರೆ.

ಅಲ್ಲದೆ ರಾಜಕೀಯವಾಗಿ ಹೇಳುವುದಾದರೆ, ಆಕಾಶದತ್ತ ಚಿಗುರೀತಲೇ , ಅಂದರೆ ಈಗಿರುವ ನಾಯಕತ್ವ ಆಕಾಶದತ್ತ ಚಿಗುರಿಬಿಟ್ಟಿದೆ. ಬೇರು ಮುದ್ದಾಯಿತಲೇ ಅಂದರೆ ಅವರಿಗೆಲ್ಲಾ ಬೆನ್ನೆಲುಬಾಗಿ ನಿಂತಿರೋದು ನೀವೆಲ್ಲಾ ನೋಡಿರಬಹುದು. ಕಾನೂನು ವ್ಯವಸ್ಥೆಯಲ್ಲಿ ಏನು ಬದಲಾವಣೆ ಆದರೂ ಕೂಡಾ ಈಗಿರುವ ನಾಯಕತ್ವ ಹೇಳಿದಂಗೆ ಅವರು ಒಪ್ಪಿಕೊಳ್ತಾರೆ. ಅಂತಾ ಬೇರುಗಳೆಲ್ಲಾ ಮುದ್ದಾಯಿತಲೇ ಅಂದರೆ ಆಕಾಶತ್ತ ಚಿಗುರಿರೋ ಗಿಡ ಹೇಳಿದಂಗೆ ಬೇರುಗಳು‌ ಒಪ್ಪಿಕೊಳ್ತಾವೆ ಅಂತ ಅರ್ಥ. ಅಂದರ ಒಟ್ಟಾರೆ ಹೇಳವದಾದರೆ ಸಿಎಂ ಸಿದ್ದರಾಮಯ್ಯನವರು ಹೇಳಿದವರೇ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂದು ಗೊರವಯ್ಯ ಭವಿಷ್ಯ ನುಡಿದಿದ್ದಾರೆ. ಇದನ್ನು ಹೀಗೂ ರಾಜಕೀಯವಾಗಿ ವಿಶ್ಲೇಷಣೆ ಮಾಡಬಹುದು ” ಎಂದು ಸಂತೋಷ ಭಟ್ಟ ಗುರೂಜಿ ಹೇಳಿದ್ದಾರೆ.

Leave A Reply

Your email address will not be published.