DL Rules : ವಾಹನ ಚಲಾವಣೆ ನಿಯಮದಲ್ಲಿ ಬದಲಾವಣೆ: ಇನ್ಮುಂದೆ ಅಪ್ರಾಪ್ತರಿಗೂ ಇ-ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ!
DL Rules: ವಾಹನ ಚಲಾವಣೆ ನಿಯಮದಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಮುಖ್ಯವಾಗಿ ಅಪ್ರಾಪ್ತ ವಯಸ್ಸಿನವರು ಕೂಡ ಇ-ದ್ವಿಚಕ್ರವಾಹನ ಚಲಾಯಿಸಲು ಅವಕಾಶ ನೀಡಲು ನಿರ್ಧರಿಸಿದೆ.
ಈ ಮೊದಲು ಸಾಮಾನ್ಯವಾಗಿ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ವಾಹನ ಚಲಾಯಿಸಲು ಲೈಸನ್ಸ್ (DL Rules) ಪಡೆಯಲು ಅವಕಾಶನೀಡಲಗುತ್ತದೆ. ಆದರೆ ಈ ನಿಯಮದಲ್ಲಿ ಕೇದ್ರ ಸರ್ಕಾರ ಬದಲಾವಣೆ ಮಾಡಲು ನಿರ್ಧರಿಸಿದೆ.
ಇನ್ಮುಂದೆ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 16 ವರ್ಷಪೂರ್ಣಗೊಂಡವರಿಗೂ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಲಾಗುತ್ತದೆ. ಆದರೆ ಇ-ವಾಹನದ ಗರಿಷ್ಠ ವೇಗದ ಮಿತಿ 25 ಕಿ.ಮೀ ಸ್ಕೂಟರ್ ಸಾಮರ್ಥ್ಯ 50 ಸಿಸಿ ಮೋಟಾರ್ ಶಕ್ತಿ ಗರಿಷ್ಟ 1500 ವ್ಯಾಟ್ ಗೆ ಸೀಮಿತವಾಗಿರಬೇಕು ಎಂದು ಕೇಂದ್ರ ರಸ್ತೆಸಾರಿಗೆ ಸಚಿವಾಲಯ ನಿಗದಿಪಡಿಸಿದೆ. ಈ ಮೂಲಕ ರಸ್ತೆ ಸಾರಿಗೆ ನಿಯಮಗಳಲ್ಲಿ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.
ಆದ್ದರಿಂದ ಇನ್ಮುಂದೆ ಶಾಲಾ-ಕಾಲೇಜು, ಟ್ಯೂಷನ್ ಗೆ ತೆರಳಲು 16 ವರ್ಷ ಮೇಲ್ಪಟ್ಟ ಹಾಗೂ 18ವರ್ಷದೊಳಗಿನ ಯುವಕ-ಯುವತಿಯರೂ ಇ-ವಾಹನ ಚಲಾಯಿಸಬಹುದಾಗಿದೆ. ಈ ಕುರಿತ ಆದೇಶವನ್ನು ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
great articletoto slot Terpercaya