MUDA Scam: ಮುಡಾ ಪ್ರಕರಣ ಮೊದಲ ಹಂತದ ತನಿಖೆ ಮುಕ್ತಾಯ: 75 ವರ್ಷಗಳ ಎಲ್ಲಾ ದಾಖಲೆ ಸೀಜ್‌

Share the Article

MUDA Scam: ಮುಖ್ಯಮಂತ್ರಿಗಳ ಮೂಡ ಪ್ರಕರಣ ಎಲ್ಲಿಂದಲೋ ಎಲ್ಲಿಗೋ ತಿರುವು ಪಡೆಯುತ್ತಿದೆ. ಇದೀಗ ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಲೋಕಾಯುಕ್ತದ (Lokayukta) ಮೊದಲ ಹಂತದ ತನಿಖೆ ಮುಕ್ತಾಯಗೊಂಡಿದ್ದು, 75 ವರ್ಷಗಳ ಎಲ್ಲಾ ದಾಖಲೆಗಳನ್ನು ಸೀಜ್‌ ಮಾಡಿದೆ. ಹೌದು, 1935 ರಿಂದ 2010ರ ವರೆಗಿನ ಎಲ್ಲಾ ದಾಖಲೆಗಳನ್ನು ಸೀಜ್‌ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ನಿನ್ನೆ ಗುರುವಾರ ಲೋಕಾಯುಕ್ತ ತಂಡ ಇಬ್ಬರು ಆರೋಪಿಗಳನ್ನ ಸುದೀರ್ಘ 10 ಗಂಟೆ ವಿಚಾರಣೆಗೆ ಒಳಪಡಿಸಿತ್ತು. ಇಬ್ಬರು ಆರೋಪಿಗಳಿಂದ 1935 ರಿಂದ 2010ರ ವರೆಗಿನ ಎಲ್ಲಾ ವ್ಯವಹಾರದ ಬಗ್ಗೆ ಮಾಹಿತಿ ಪಡೆದುಕೊಂಡಿತ್ತು. ಇದೇ ವೇಳೆ ಸರ್ವೆ ನಂಬರ್‌ 426ರ ಮೂರುಕಾಲು ಎಕರೆ ಭೂಮಿಯ ವಾರಸುದಾರಿಕೆ ಕುರಿತು ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಪ್ರಕರಣದ ಎ4 ಆರೋಪಿ ದೇವರಾಜು ಹಲವು ದಾಖಲೆಗಳನ್ನು ಸಲ್ಲಿಸಿದರು.

ಮೊದಲ ಹಂತದ ತನಿಖೆ ಪೂರ್ಣಗೊಳಿಸಿರುವ ಲೋಕಾಯುಕ್ತ ತಂಡ ಅಕ್ಟೋಬರ್‌ 14ರಿಂದ 2ನೇ ಹಂತದ ತನಿಖೆ ನಡೆಸಲಿದೆ. ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮುಂದಿನ 10 ದಿನಗಳಲ್ಲಿ ನೋಟಿಸ್‌ ಕೊಡುವ ಸಾಧ್ಯತೆಗಳಿವೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ. ಪಾರ್ವತಮ್ಮ ವಿಚಾರಣೆ ಬಳಿಕ ಅವರು ನೀಡುವ ಹೇಳಿಕೆಗಳ ಆಧರಿಸಿ ಸಿಎಂಗೆ ನೋಟಿಸ್ ಕೊಡಬೇಕೋ ಬೇಡವೋ ಅನ್ನೋದನ್ನು ತೀರ್ಮಾನ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Leave A Reply