Mia Kalifa: ಪೋರ್ನ್ ಸ್ಟಾರ್ ಮಿಯಾ ಖಲೀಫಾ ಜೊತೆ ಖ್ಯಾತ ಕ್ರಿಕೆಟಿಗನ ವಿಡಿಯೋ ವೈರಲ್!!

Mia Kalifa: ಅವರ ವೃತ್ತಿಪರ ಜೀವನ ಮತ್ತು ವೈಯಕ್ತಿಕ ಜೀವನಕ್ಕಾಗಿ ಆಗಾಗ್ಗೆ ಸುದ್ದಿಯಲ್ಲಿರುವರ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ವಾಸಿಂ ಅಕ್ರಂ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದೂ ಕೂಡ ಪೋರ್ನ್ ಸ್ಟಾರ್ ಮೀಯಾ ಕಲೀಫಾ ವಿಚಾರವಾಗಿ.

ಹೌದು, ಪಾಕಿಸ್ತಾನದ ಮಾಜಿ ಆಟಗಾರ ವಾಸಿಂ ಅಕ್ರಮ್(Vasi Akram) ಇತ್ತೀಚೆಗೆ ಜಾಹೀರಾತು ಚಿತ್ರೀಕರಣಕ್ಕಾಗಿ ಮಿಯಾ ಖಲೀಫಾ(Mia Kalifa) ಅವರೊಂದಿಗೆ ಕಾಣಿಸಿಕೊಂಡಿದ್ದರು. ಇದೇ ಈಗ ವಿವಾದಕ್ಕೆ ಕಾರಣವಾಗಿದೆ. ಯಾಕೆಂದರೆ ವಾಸ್ತವವಾಗಿ, ಪಾಕಿಸ್ತಾನದಲ್ಲಿ(Pakistan) ಬೆಟ್ಟಿಂಗ್ ಕಂಪನಿಗಳ ಜಾಹೀರಾತುಗಳ ಮೇಲೆ ಕಟ್ಟುನಿಟ್ಟಾದ ನಿಷೇಧವಿದೆ. ವಾಸಿಂ ಇದೀಗ ದೇಶದಲ್ಲಿ ನಿಷೇಧಿತ ಕಂಪನಿಯನ್ನು ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ.
ಇಷ್ಟೇ ಅಲ್ಲದೆ ಬಳಿಕ ವಾಸಿಂ ಅಕ್ರಂ ಭಾರತೀಯ ಬೆಟ್ಟಿಂಗ್ ಕಂಪನಿ ‘ಬಾಜಿ’ಗೆ ಜಾಹೀರಾತನ್ನೂ ಚಿತ್ರೀಕರಿಸಿದ್ದಾರೆ. ವಾಸಿಂ ಇದರ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಬಾಜಿ’ ಕಂಪನಿಯ ಈ ಜಾಹೀರಾತಿನಿಂದಾಗಿ, ವಾಸಿಮ್ ಚರ್ಚೆಯ ಕೇಂದ್ರವಾಗಿದ್ದಾರೆ ಏಕೆಂದರೆ ಈ ಜಾಹೀರಾತಿನಲ್ಲಿ ಅಕ್ರಂ ಪೋರ್ನ್ ಸ್ಟಾರ್ ಮಿಯಾ ಖಲೀಫಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.
