Big boss Kannada: ಮಹಿಳಾ ಆಯೋಗದ ನೋಟಿಸ್ ಗೆ ಬೆಚ್ಚಿಬಿದ್ದ ಬಿಗ್ ಬಾಸ್: ಸ್ವರ್ಗ ನರಕ ಆಟಕ್ಕೆ ಬಿಗ್ ಬ್ರೇಕ್

Share the Article

Bigboss Kannada: ಸ್ವರ್ಗ – ನರಕ ಹೆಸರಿನಲ್ಲಿ ಸ್ಪರ್ಧಿಗಳ( contestants) ಸಾಮಾಜಿಕ ನ್ಯಾಯಕ್ಕೆ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಧಕ್ಕೆ ಆಗುತ್ತಿರೋದಾಗಿ ಮಹಿಳಾ ಆಯೋಗಕ್ಕೆ( Women commission) ದೂರು ದಾಖಲಾಗಿತ್ತು. ಮಹಿಳೆಯರ ಖಾಸಗಿ ತನ್ನಕ್ಕೆ ಧಕ್ಕೆಯಾಗುತ್ತಿದ್ದು, ಊಟ ಹಾಗೂ ಶೌಚಾಲಯದ ವಿಚಾರವಾಗಿ ನರಕ ವಾಸಿಗಳ ಮೇಲೆ ದೌರ್ಜನ್ಯ ನಡೆಯುತ್ತಿರೋದಾಗಿ ದೂರುಗಳು(Complaint) ದಾಖಲಾದ ಹಿನ್ನೆಲೆ, ಮಹಿಳಾ ಆಯೋಗ ಬಿಗ್ ಕಾರ್ಯಕ್ರಮ ಆಯೋಜಕರು ಹಾಗೂ ಕಲರ್ಸ್ ವಾಹಿನಿಗೆ ಕಾರಣ ಕೇಳಿ ನೋಟಿಸ್( Notice) ಜಾರಿ ಮಾಡಲಾಗಿತ್ತು.

ಜೊತೆಗೆ ದೂರಿನ ಅನ್ವಯ ತನಿಳೆ ನಡೆಸಿ ವರದಿ ನೀಡುವಂತೆ ರಾಮನಗರ ಪೊಲೀಸರಿಗೆ ಮಹಿಳಾ ಆಯೋಗ ಪತ್ರದ ಮೂಲಕ ಸೂಚನೆ ನೀಡಿತ್ತು. ಈ ಎಲ್ಲ ಬೆಳವಣಿಗೆಯಿಂದ ಎಚ್ಚೆತ್ತ ಬಿಗ್ ಬಾಸ್ ಕಾರ್ಯ ಆಯೋಜಕರು, ಬಿಗ್ ಕಾರ್ಯಕ್ರಮದ ಸ್ವರ್ಗ ನರಕ ಕಾನ್ಸೆಪ್ಟ್ ಕೊನೆಗಾಣಿಸಿದ್ದಾರೆ.

ಸ್ಪರ್ದಿಗಳಿಗೆ ಸೂಚನೆ ಸಿಗದಂತೆ ಸ್ವರ್ಗ – ನರಕವಾಗಿ ಇಬ್ಬಾಗವಾಗಿದ್ದ ಮನೆಯನ್ನು ಒಂದೇ ಮನೆಯಾಗಿಸಿದ್ದಾರೆ. ಬಿಗ್ ಬಾಸ್ ಮನೆಯ ಮಧ್ಯಭಾಗದಲ್ಲಿದ್ದ ಕಬ್ಬಿಣದ ಸರಳನ್ನು ತೆರವುಗೊಳಿಸಿದ್ದಾರೆ.

Leave A Reply