BBK-11: ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಗೆ ನುಗ್ಗಿದ ಮುಸುಕುಧಾರಿಗಳು – ಮನೆಯ ವಸ್ತುಗಳಲೆಲ್ಲ ಪೀಸ್, ಫೀಸ್, ನರಕ ಫುಲ್ ಧ್ವಂಸ !!

Share the Article

BBK-11: ಕನ್ನಡ ಕಿರುತೆರಯ ಜನಪ್ರಿಯ ರಿಯಾಲಿಟಿ ಶೋ ಬಿಗ್​​​ಬಾಸ್​ (Bigg Boss) 11ನೇ ಆವೃತ್ತಿ (11th Season) ಆರಂಭವಾಗಿ ಎರಡು ವಾರಗಳು ಕಳೆಯುತ್ತಾ ಬಂದಿದೆ. ಇದರೆಡೆಯಲ್ಲಿ ಸ್ಫರ್ಧಿಗಳ ನಡುವಿನ ಕಿತ್ತಾಟ ಜೋರಾಗಿಯೇ ಇದೆ. ಈ ಬೆನ್ನಲ್ಲೇ ಇದೀಗ ನರಕ ವಾಸಿಗಳು ಇರುವ ಪ್ರದೇಶಕ್ಕೆ ಕೆಲವು ಮುಸುಕುಧಾರಿಗಳು ಎಂಟ್ರಿ ಕೊಟ್ಟು ಎಲ್ಲವನ್ನು ಪುಡಿ ಪುಡಿ ಮಾಡಿದ್ದಾರೆ.

ಹೌದು, ಬಿಗ್ ಬಾಸ್​’ನಲ್ಲಿ(BBK -11) ಶಾಕಿಂಗ್ ಬೆಳವಣಿಗೆ ಒಂದು ನಡೆದಿದೆ. ಕ್ರೇನ್​ ಮೂಲಕ ಮನೆ ಒಳಗೆ ದಾಂಡಿಗರು ಎಂಟ್ರಿ ಕೊಟ್ಟಿದ್ದಾರೆ. ಇಷ್ಟೇ ಅಲ್ಲ, ಮನೆಯ ಒಳಗೆ ಬಂದ ಅವರು ನರಕದ ವಸ್ತುಗಳನ್ನೆಲ್ಲ ಪೀಸ್ ಪೀಸ್ ಮಾಡಿದ್ದಾರೆ! ಎಮರ್ಜೆನ್ಸಿ ಸೈರನ್ ಬಂದು ಮುಸುಕುಧಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ನರಕದ ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಚೇಯರ್, ಮೇಜು ಸೇರಿದಂತೆ ಸಿಕ್ಕ ಸಿಕ್ಕ ಎಲ್ಲಾ ಸಾಮಾಗ್ರಿಗಳನ್ನು ಪುಡಿ ಪುಡಿ ಮಾಡಿ, ಅಡ್ಡಲಾಗಿದ್ದ ನರಕದ ಮನೆಯನ್ನೇ ಧ್ವಂಸ ಮಾಡಿದ್ದಾರೆ

ಹಾಗಂತ ಭಯ ಪಡುವ ಅಗತ್ಯವಿಲ್ಲ. ನರಕ ಹಾಗೂ ಸ್ವರ್ಗದ ಕಾನ್ಸೆಪ್ಟ್ ಇಲ್ಲಿಗೆ ಪೂರ್ಣಗೊಂಡಿದೆ. ಎಲ್ಲರೂ ಇನ್ನು ಒಟ್ಟಾಗಿ ವಾಸಿಸೋಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಕಲರ್ಸ್ ಕನ್ನಡದಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ನರಕವನ್ನು ಮುಸುಕುಧಾರಿಗಳು ಪುಡಿ ಪುಡಿ ಮಾಡುವ ವಿಡಿಯೋ ಇದೆ. ಮುಂದೇನು ಆಗುತ್ತದೆ ಎನ್ನುವುದು ಇಂದಿನ ಎಪಿಸೋಡ್ ನಲ್ಲಿ ತಿಳಿಯಲಿದೆ.

Leave A Reply