BBK-11: ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಈ ಸ್ಪರ್ಧಿ ಔಟ್ !! ಕಾರಣ ಹೀಗಿದೆ

Share the Article

BBK-11: ಕನ್ನಡ ಕಿರುತೆರಯ ಜನಪ್ರಿಯ ರಿಯಾಲಿಟಿ ಶೋ ಬಿಗ್​​​ಬಾಸ್​ (Bigg Boss) 11ನೇ ಆವೃತ್ತಿ (11th Season) ಆರಂಭವಾಗಿ ಎರಡು ವಾರಗಳು ಕಳೆಯುತ್ತಾ ಬಂದಿದೆ. ಇದರೆಡೆಯಲ್ಲಿ ಸ್ಫರ್ಧಿಗಳ ನಡುವಿನ ಕಿತ್ತಾಟ ಜೋರಾಗಿಯೇ ಇದೆ. ಈ ಬೆನ್ನಲ್ಲೇ ಶೋ ನಡುವಲ್ಲೇ ಮನೆಯಿಂದ ಈ ಸ್ಪರ್ಧಿ ಔಟ್ ಆಗಿದ್ದಾರೆ.

ಹೌದು, ಬಿಗ್ ಬಾಸ್ ಮನೆಯಲ್ಲಿ ಸ್ಫರ್ಧಿಗಳ ನಡುವೆ ಕಾಂಪಿಟೇಷನ್​ (Competition) ಜೋರಾಗುತ್ತಿದ್ದು, ಎಲ್ಲರೂ ತಾವು ಗೆಲ್ಲಬೇಕೆಂಬ ನಿಟ್ಟಿನಲ್ಲಿ ಆಟ ಆಡುತ್ತಿದ್ದು, ಇದು ಅವರಿಗೆ ಮುಳುವಾದಂತೆ ಕಾಣುತ್ತಿದೆ. ಟಾಸ್ಟ್​ ಆಡುವ ವೇಳೆ ತುಕಾಲಿ ಸಂತೋಷ್​ ಅವರ ಪತ್ನಿ ಮಾನಸ ಕಾಲಿಗೆ ಪೆಟ್ಟಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಾಸ್ಕ್​ (Task)​ ಆಡುವ ವೇಳೆ ಮಾನಸ ಕಾಲಿಗೆ ಪೆಟ್ಟಾಗಿದ್ದು, ಅವರನ್ನು ಮನೆಯ ಸ್ಫರ್ಧಿಗಳು ಕೆಲವು ಟಾಸ್ಕ್​ಗಳಿಗೆ ಆಯ್ಕೆ ಮಾಡದಿರುವುದಕ್ಕೆ ಇದು ಪ್ರಮುಖ ಕಾರಣವಾಗಿದೆ. ಅವರಿಗೆ ಓಡಾಡುವುದಕ್ಕೂ ಕಷ್ಟವಾಗಿದ್ದು, ಕಾಲನ್ನು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬೇಕಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಅವರು ಗುಣಮುಖರಾಗುವುದಕ್ಕೆ ಸಮಯ ಹಿಡಿಯುತ್ತದೆ ಎಂದು ಹೇಳಲಾಗಿದ್ದು, ಅವರು ಸ್ಫರ್ಧೆಯಿಂದ ಅರ್ಧಕ್ಕೆ ಹೊರನಡೆದಿದ್ದಾರೆ ಎಂದು ವರದಿಯಾಗಿದೆ.

Leave A Reply