Navaratri special: ದಸರಾ ಹಬ್ಬದ ಪ್ರಯುಕ್ತ ನೈರುತ್ಯ ರೈಲ್ವೆಯಿಂದ ವಿಶೇಷ ರೈಲು ಸೇವೆ: ನಿಲ್ದಾಣಗಳಲ್ಲಿ ನವರಾತ್ರಿ ಸ್ಪೆಷಲ್ ಥಾಲಿ

Share the Article

Navaratri special: ದಸರಾ ಹಬ್ಬದ(Dasara festival) ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ತಪ್ಪಿಸಲು ಹೆಚ್ಚುವರಿ ರೈಲು ಸೇವೆಯನ್ನು(Train) ಅಕ್ಟೋಬರ್ 10 ರಿಂದ 13ರ ವರೆಗೆ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿ-ಯಶವಂತಪುರ, ಯಶವಂತಪುರ-ಬೆಳಗಾವಿ,ಬೆಳಗಾವಿ-ಮೈಸೂರಿಗೆ ಎಕ್ಸ್ ಪ್ರೆಸ್ ರೈಲು ಸೇವೆ ಆರಂಭಿಸಲಾಗಿದೆ.

ಮೈಸೂರು-ಕೆಎಸ್ಆರ್ ಬೆಂಗಳೂರು, ಮೈಸೂರು-ಚಾಮರಾಜನಗರಕ್ಕೆ ಕಾಯ್ದಿರಿಸದ ವಿಶೇಷ ರೈಲು ವ್ಯವಸ್ಥೆ ಕೂಡ ಇದೆ. ಅಕ್ಟೋಬರ್ 9, 10, 11, 12 ಮತ್ತು 13ರ ವರೆಗೂ ವಿಶೇಷ ರೈಲು ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ನವರಾತ್ರಿ ಹಿನ್ನೆಲೆ ಭಾರತೀಯ ರೈಲ್ವೆ ನಿಲ್ದಾಣಗಳಲ್ಲಿ ವಿಭಿನ್ನ ಆಚರಣೆಯನ್ನು ಪ್ರಯಾಣಿಕರಿಗಾಗಿ ಮಾಡಲಾಗಿತ್ತಿದೆ. ಭಾರತೀಯ ರೈಲ್ವೆ ನಿಲ್ದಾಣಗಳಲ್ಲಿ ನವರಾತ್ರಿ ಸ್ಪೆಷಲ್ ಥಾಲಿ ತಯಾರು ಮಾಡಲಾಗಿದೆ. 150ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ನವರಾತ್ರಿ ಥಾಲಿ ದೊರೆಯಲಿದೆ. ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ಸೈಟ್ ಮೂಲಕ ಆನ್ ಲೈನ್ ನಲ್ಲಿ ಆರ್ಡರ್ ಮಾಡಬಹುದು. ಐಆರ್ ಸಿಟಿಸಿ ಅಪ್ಲಿಕೇಶನ್ ನಲ್ಲಿ ತಮ್ಮ ಪಿಎನ್ಆರ್ ಸಂಖ್ಯೆಯನ್ನು ನಮೂದಿಸುವ ಮೂಲಕ ಅಥವಾ ಐಆರ್ ಸಿಟಿಸಿ ಇ-ಕ್ಯಾಟರಿಂಗ್ ನಲ್ಲಿ ಥಾಲಿ ಬುಕ್ ಮಾಡಬಹುದಾಗಿದೆ.

ಮುಂಬೈ ಸೆಂಟ್ರಲ್, ದೆಹಲಿ ಜಂಕ್ಷನ್, ಸೂರತ್, ಜೈಪುರ, ಲಕ್ನೋ, ಪಾಟ್ನಾ ಜಂಕ್ಷನ್, ಲುಧಿಯಾನ, ದುರ್ಗ್, ಚೆನ್ನೈ ಸೆಂಟ್ರಲ್, ಸಿಕಂದರಾಬಾದ್, ಅಮರಾವತಿ, ಹೈದರಾಬಾದ್, ತಿರುಪತಿ, ಜಲಂಧರ್ ಸಿಟಿ, ಉದಯಪುರ ಸಿಟಿ, ಬೆಂಗಳೂರು ಕಂಟೋನ್ಮೆಂಟ್, ನವದೆಹಲಿ, ಥಾಣೆ, ಪುಣೆ, ಮಂಗಳೂರು ಸೆಂಟ್ರಲ್ ನಿಲ್ದಾಣ ಸೇರಿದಂತೆ 150 ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ನವರಾತ್ರಿ ವಿಶೇಷ ಥಾಲಿ ದೊರೆಯಲಿದೆ.

Leave A Reply

Your email address will not be published.