Filter Water: ಮನೆಯಲ್ಲಿ ದಿನವೂ ಫಿಲ್ಟರ್ ನೀರು ಕುಡಿಯುತ್ತೀರಾ? ಈ ಗಂಭೀರ ಖಾಯಿಲೆ ತುತ್ತಾಗಬಹುದು ಹುಷಾರ್ !!

Filter Water: ಹಿಂದೆಲ್ಲ ಕುಡಿಯುವ ನೀರಿಗೆ ಬಾವಿ, ನದಿ, ಕೆರೆ, ತೊರೆಗಳೇ ಆಸರೆ. ಇವೆಲ್ಲದರ ನೀರು ಅಮೃತಕ್ಕೆ ಸಮ ಎನ್ನಲಾಗುತ್ತಿತ್ತು. ನಂತರ ಕೆಲವೆಡೆ ಬೋರ್ ವೆಲ್ ಗಳೂ ಬೆಳಕಿಗೆ ಬಂದವು. ನಂತರ ಪ್ಲಾಸ್ಟಿಕ್ ಬಾಟೆಲಿಯ ನೀರು ಅಸ್ತಿತ್ವ ಪಡೆದವು. ಇದೀಗ ಇವುಗಳೆಲ್ಲದರ ಸ್ಥಾನವನ್ನು ಫಿಲ್ಟರ್ ನೀರು ಆವರಿಸಿಕೊಂಡಿದೆ. ಅಮೃತಕ್ಕೆ ಸಮನಾದ ಬಾವಿ, ಕೆರೆ, ನೀರನ್ನೂ ಜನ ಫಿಲ್ಟರ್ ಮಾಡಿ ಕುಡಿಯುತ್ತಿದ್ದಾರೆ. ಫಿಲ್ಟರ್ ನೀರಿಲ್ಲದ ಮನೆಗಳೇ ಇಲ್ಲ ಎನ್ನಬಹುದು.

ಫಿಲ್ಟರ್ ನೀರು(Filter Water) ಕುಡಿಯುವ ಜನರು ನಾವು ಅತೀ ಪರಿಶುದ್ಧವಾದ ನೀರನ್ನು ಕುಡಿಯುತ್ತಿದ್ದೇವೆ. ನಾವು ತುಂಬಾ ಆರೋಗ್ಯವಂತರಾಗಿದ್ದೇವೆ ಎಂದೆಲ್ಲಾ ಆಲೋಚಿಸುತ್ತಾರೆ. ಇತರರೊಂದಿಗೆ ಮಾತನಾಡುತ್ತಾರೆ. ಆದರೆ ಇವರಿಗೆ ತಾವು ಫಿಲ್ಟರ್ ನೀರು ಕುಡಿದು ಬದುಕಿನ ಡೇಂಜರಸ್ ಸ್ಥಾನ ತಲುಪುತಿದ್ದೇವೆ ಎಂಬ ನಿಜ ಸಂಗತಿ ಗೊತ್ತಿಲ್ಲ. ಹೌದು, ನೀವು ಪ್ರತೀದಿನವೂ ನೀವು ಫಿಲ್ಟರ್ ನೀರು ಕುಡಿಯುತ್ತಿದ್ದರೆ ಮುಂದೊಂದು ದಿನ ಗಂಭೀರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ನೀರು ಬಾಯಾರಿಕೆಯನ್ನು ತಣಿಸುವುದು ಮಾತ್ರವಲ್ಲ, ಎಲ್ಲಾ ಅಂಗಗಳ ಸರಿಯಾದ ಕಾರ್ಯನಿರ್ವಹಣೆ ಮತ್ತು ದೇಹಕ್ಕೆ ಪ್ರಾಥಮಿಕ ಹಂತದಲ್ಲಿ ಶಕ್ತಿ ನೀಡಲು ಮುಖ್ಯವಾಗಿದೆ. ಆದರೆ ಶುದ್ಧೀಕರಿಸಿದ ನೀರಿನ ಮುಖ್ಯ ಸಮಸ್ಯೆಯೆಂದರೆ ಅದು ತುಂಬಾ ಸ್ವಚ್ಛವಾಗಿರುವುದು. ಶುದ್ಧೀಕರಿಸಿದ ನೀರಿನಲ್ಲಿ ಬಹಳಷ್ಟು ವಿಷಕಾರಿ ಅಂಶಗಳು ಮತ್ತು ಲೋಹಗಳು ಇದ್ದರೂ ಸಹ ಅದು ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳಿಂದ ತುಂಬಿರುತ್ತದೆ. ಇದು ದೇಹದಲ್ಲಿ ಅತಿಯಾದ ಸೋಡಿಯಂ ಅನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಮೂಳೆಗಳ ಹಾನಿ ಮತ್ತು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಫಿಲ್ಟರ್ ಮಾಡಿರುವ ನೀರು ಕೆಲವು ಗಂಭೀರ ಅಡ್ಡಪರಿಣಾಮಗಳು ಒಳಗೊಂಡಿರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಅಲ್ಲದೆ ಫಿಲ್ಟರ್ ನೀರಿನಿಂದ ಮೆಗ್ನೀಸಿಯಮ್ ಕೊರತೆ ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ. ಈ ಕೊರತೆಯು ಮಾನವ ನರಮಂಡಲದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ, ಮಧುಮೇಹವು ಇಸ್ಕೀಮಿಕ್ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ನೈಸರ್ಗಿಕ ನೀರಿನಲ್ಲಿ ಹತ್ತರಿಂದ 20% ಮೆಗ್ನೀಸಿಯಮ್ ಇರುತ್ತದೆ. ಆದ್ರೆ, ಇಸ್ರೇಲಿ ಸಂಶೋಧಕರು ನಡೆಸಿದ ಇತ್ತೀಚಿನ ಅಧ್ಯಯನವು ಇಂದು ಬಳಸಲಾಗುವ ಸಂಸ್ಕರಿಸಿದ ಅಥವಾ ಮಿನರಲ್ ವಾಟರ್’ನಲ್ಲಿರುವ ಎಲ್ಲಾ ಖನಿಜಗಳನ್ನು ತೆಗೆದುಹಾಕಲಾಗಿದೆ ಎಂದು ತೋರಿಸಿದೆ. ಈ ಕಾರಣದಿಂದಾಗಿ, ಮಾನವರು ನೀರಿನ ಮೂಲಕ ಮೆಗ್ನೀಸಿಯಮ್ ಪಡೆಯುವುದಿಲ್ಲ. ಆದರೆ ಫಿಲ್ಟರ್ ನೀರು ಸತ್ತ ನೀರಿಗೆ ಸಮ ಎಂದು ತಜ್ಞರು ಹೇಳುತ್ತಾರೆ.

ಫಿಲ್ಟರ್ ನೀರಿನಿಂದ ಬರುವ ಸಮಸ್ಯೆಗಳು :
ಸುಸ್ತು, ದೌರ್ಬಲ್ಯ, ತಲೆನೋವು, ತೀವ್ರವಾದ ಸ್ನಾಯು ಸೆಳೆತ, ದುರ್ಬಲಗೊಂಡ ಹೃದಯ ಬಡಿತ, ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಗ್ಯಾಸ್ಟ್ರಿಕ್ ಮತ್ತು ಡ್ಯುವೋಡೆನಲ್ ಅಲ್ಸರ್, ದೀರ್ಘಕಾಲದ ಜಠರದುರಿತ, ಗಂಟಲು ಊತ, ಗರ್ಭಾವಸ್ಥೆಯ ತೊಡಕುಗಳು

1 Comment
  1. Tyrone Eilbert says

    WONDERFUL Post.thanks for share..extra wait .. …

Leave A Reply

Your email address will not be published.