Darshan: ಪತ್ನಿ ಹೇಳಿದರೂ ಅದೊಂದು ವಿಷಯಕ್ಕೆ ಬಿಲ್ ಕುಲ್ ಒಪ್ಪದ ದರ್ಶನ್ !! ಭಾರೀ ಬೇಸರ ವ್ಯಕ್ತಪಡಿಸಿದ ವಿಜಯಲಕ್ಷ್ಮೀ !!

Share the Article

Darshan: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಯಾರ ಮಾತನ್ನೂ ಕೇಳ್ತಿಲ್ಲ. ಅದೊಂದು ವಿಷಯಕ್ಕೆ ಪತ್ನಿ ವಿಜಯಲಕ್ಷ್ಮಿ ಹೇಳಿದರೂ ಬಿಲ್ ಕುಲ್ ಒಪ್ಪದೆ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ ಇದು ಸಾಧ್ಯವೇ ಇಲ್ಲ ಎಂದು ಹಟ ಹಿಡಿದು ಕುಳಿತಿದ್ದಾರಂತೆ.

ಹೌದು, ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್(Darshan) ಗೆ ಬೆನ್ನು ನೋವು ಕಾಡುತ್ತಿದೆ. ತೀವ್ರ ಬೆನ್ನು ನೋವಿನಿಂದಾಗಿ ಅವರು ನಿನ್ನೆ ಬ್ಯಾಗ್ ಎತ್ತಿಕೊಳ್ಳಲೂ ಕಷ್ಟಪಟ್ಟಿದ್ದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿತ್ತು. ನಿಲ್ಲಲೂ ಆಗದೇ ಕೂರಲೂ ಆಗದೇ ಜೈಲು ಕೋಣೆಯಲ್ಲಿ ದರ್ಶನ್ ಕಷ್ಟ ಅನುಭವಿಸುತ್ತಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು ಸ್ಕ್ಯಾನಿಂಗ್ ಮಾಡಿಸಿ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಆದರೆ ಬಳ್ಳಾರಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ದರ್ಶನ್ ಬಿಲ್ ಕುಲ್ ಒಪ್ಪುತ್ತಿಲ್ಲ. ಏನೇ ಮಾಡಿದರೂ ಬೆಂಗಳೂರಿಗೆ ಹೋದ ಮೇಲೆಯೇ ಚಿಕಿತ್ಸೆಎ ಪಡೆದುಕೊಳ್ಳುತ್ತೇನೆ ಎನ್ನುತ್ತಿದ್ದಾರೆ.

ಯಸ್, ಪತಿಯ ನೋವು ನೋಡಲಾರದೇ ನಿನ್ನೆ ಜೈಲಿಗೆ ಭೇಟಿ ನೀಡಿದ್ದ ವಿಜಯಲಕ್ಷ್ಮಿ(Vijaya Lakshmi) ಇಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ ಪತ್ನಿ ಮಾತಿಗೂ ಕಿವಿಗೊಡದೇ ದರ್ಶನ್ ಜಾಮೀನು ಸಿಕ್ಕ ಮೇಲೆ ಬೆಂಗಳೂರಿನಲ್ಲೇ ಚಿಕಿತ್ಸೆ ಪಡೆದುಕೊಳ್ಳುವುದಾಗಿ ಹಠ ಹಿಡಿದು ಕುಳಿತಿದ್ದಾರಂತೆ !! ಹೀಗಾಗಿ ಪತ್ನಿ ವಿಜಯಲಕ್ಷ್ಮೀ ಭಾರೀ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Leave A Reply