Cauvery River: ಕಾವೇರಿ ನದಿ ಒತ್ತುವರಿ ತೆರವು ಸರ್ವೇ ಕೂಡಲೇ ಆರಂಭಿಸಿ: ಮಾಲಿನ್ಯ ನಿಯಂತ್ರಣ ಮಾಡದಿದ್ದರೆ ಕಾನೂನು ಹೋರಾಟ
Cauvery River: ಕಾವೇರಿ ನದಿ ಪುಣ್ಯ ಕ್ಷೇತ್ರ. ಇದನ್ನು ಮಾಲಿನ್ಯಗೊಳಿಸಿ(Pollution) ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರಬೇಡಿ ಎಂದು ಸೇವ್ ಕಾವೇರಿ ಸಮಿತಿ(Save Cauvery) ಎಚ್ಚರಿಕೆ ನೀಡಿದೆ. ನದಿ, ತೋಡು ಬದಿಯಲ್ಲಿನ ರೆಸಾರ್ಟ್(Resort), ಹೋಂ ಸ್ಟೇ(Home stay) ಗಳು ನದಿಗೆ ತ್ಯಾಜ್ಯ ನೀರು(Waste water) ಬಿಡುತ್ತಿದ್ದಾರೆ. ಇದರ ಬಗ್ಗೆ ಕ್ರಮ ಸೂಕ್ತ ಕ್ರಮ ಜಿಲ್ಲಾಡಳಿತದಿಂದ ಆಗಬೇಕು ಎಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿರಾಜಪೇಟೆ ಪಟ್ಟಣದ ರಾಜಕಾಲುವೆ ಒತ್ತುವರಿ ಕೂಡಲೇ ತೆರವು ಮಾಡಿ ಬಡವರಿಗೆ ಪರ್ಯಾಯ ವ್ಯವಸ್ಥೆಮಾಡಬೇಕು, ಸ್ಥಳೀಯ ಸಹಕಾರದೊಂದಿಗೆ ಕೂಡಲೇ ಸರ್ಕಾರ ಕಾರ್ಯಪ್ರವೃತ್ತ ಆಗಬೇಕು. ಬಲಾಡ್ಯಾರ ಒತ್ತುವರಿ ಕಟ್ಟಡ ಕಿತ್ತು ಬಿಸಾಕಿ ಎಂದು ನಾಗರೀಕ ಸೇವಾ ಸಮಿತಿಯ ಡಾ. ದುರ್ಗಾ ಪ್ರಸಾದ್, ಮಡಿಕೇರಿಯಲ್ಲಿ ಕರೆ ನೀಡಿದ್ದಾರೆ.
ಕರಡಿ ಗೋಡು, ನೆಲ್ಲಿದಿಕೇರಿ ಕಾವೇರಿ ನದಿ ಮಾಲಿನ್ಯದ ತವರು ಪ್ರದೇಶವಾಗಿ ಮಾರ್ಪಾಡಾಗಿದೆ. ಇಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛ ಗ್ರಾಮ ಯೋಜನೆ ಅನುಷ್ಠಾನವಾಗಿಲ್ಲ. ಸ್ವಚ್ಛತೆಗೆ ಜಿಲ್ಲಾಡಳಿತ ಹಾಗೂ ಗ್ರಾಮ ಪಂಚಾಯಿತಿ ಆಡಳಿತ ದವರು ಶ್ರಮಿಸುವಂತೆ ಚೇನoಡ ಮಿಥುನ್ ಹೇಳಿದರು.
ಇನ್ನು ಸೇವ್ ಕಾವೇರಿ ಜಿಲ್ಲಾ ಕಾರ್ಯದರ್ಶಿ ಚಟ್ಟೋಳ್ಳಿರ ಶರತ್ ಸೋಮಣ್ಣ ಮಾತನಾಡಿ, ವಿದ್ಯಾವಂತರೇ ಇರುವ ನಮ್ಮ ಜಿಲ್ಲೆಯಲ್ಲಿ ಈ ರೀತಿ ಒತ್ತುವರಿ, ಮಾಲಿನ್ಯ ಮಾಡಿದರೆ ಜಿಲ್ಲೆ, ರಾಜ್ಯಕ್ಕೆ ನದಿ ನೀರನ್ನು ಕಲುಷಿತ ಮಾಡಿ ಕಳುಹಿಸಿ ಕೊಡುವುದು ನಮ್ಮ ಜಿಲ್ಲೆಯ ಗೌರವಕೆ ಧಕ್ಕೆಯಾಗಿದೆ ಎಂದರು.