Bihar: ಮನೆ ಮುಂದೆ ಕುಳಿತಿದ್ದ ನವ ವಿವಾಹಿತೆಗೆ ಗುಂಡಿಕ್ಕಿ ಬರ್ಬರವಾಗಿ ಕೊಂದ ದುಷ್ಕರ್ಮಿಗಳು !!

Bihar: ನವ ವಿವಾಹಿತೆಯೊಬ್ಬಳು ತನ್ನ ಮನೆ ಮುಂದೆ ಕುಳಿತಿದ್ದಾಗಲೇ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಕೆಗೆ ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಿಹಾರದಲ್ಲಿ ನಡೆದಿದೆ.

23 ವರ್ಷದ ರೋಶನಿ(Roshani) ಹತ್ಯೆಯಾದ ಯುವತಿ. ಈಕೆ ಪೊಲೀಸ್ ಅಧಿಕಾರಿಯನ್ನು ಮದುವೆಯಾಗಿದ್ದಳು. ರೋಶನಿ, ಬಿಹಾರದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ತಿಕ್ ಮಂಡಲ್ ಎಂಬವರನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಇವರಿಬ್ಬರು 10 ದಿನಗಳ ಹಿಂದಷ್ಟೇ ವಿವಾಹವಾಗಿದ್ದರು.
ಈಕೆ ಬಿಹಾರದ(Bihar) ಕಥಿಹಾರ್ ಜಿಲ್ಲೆಯ ಪೋತಿಯಾದಲ್ಲಿರುವ ತನ್ನ ಪತಿ ಮನೆ ಮುಂದೆ ಕುಳಿತಿದ್ದಾಗ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ. ರೋಶನಿಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಅಂದಹಾಗೆ ಕಾರ್ತಿಕ್ ಮತ್ತು ರೋಶನಿ ಅವರು ಮದುವೆ ಆಗಿದದು,ಕಾರ್ತಿಕ್ ತಾಯಿಗೆ ಇಷ್ಟವಿರಲಿಲ್ಲವಂತೆ. ಜೊತೆಗೆ ಮದುವೆ ಸಂದರ್ಭದಲ್ಲಿ 5 ಲಕ್ಷ ರೂಪಾಯಿ ವರದಕ್ಷಣೆ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ಯುವತಿಯ ಕುಟುಂಬಸ್ಥರು ಆಕೆಯ ಅತ್ತೆಯ ಮೇಲೆ ಸಂಶಯ ವ್ಯಕ್ತಪಡಿಸಿದ್ದು, ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ