Abhishek Bachchan and Aishwarya Rai : ಸಾರ್ವಜನಿಕ ಸ್ಥಳದಲ್ಲಿ ಕಿತ್ತಾಡಿಕೊಂಡ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ – ವಿಡಿಯೋ ವೈರಲ್!!

Abhishek Bachchan and Aishwarya Rai: ಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಡಿವೋರ್ಸ್ (Abhishek Bachchan and Aishwarya Rai Bachchan divorce) ಸದ್ಯ ಟ್ರೆಂಡ್ ನಲ್ಲಿರುವ ವಿಷ್ಯ. ಇಬ್ಬರು ವರ್ಷದ ಹಿಂದೆಯೇ ದೂರವಾಗಿದ್ದಾರೆ ಎನ್ನುವ ಸುದ್ದಿ ಇದೆ. ಅಭಿಷೇಕ್ ಮತ್ತು ಐಶ್ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡ್ತಿವೆ. ಈ ಬೆನ್ನಲ್ಲೇ ಜಂಗುಳಿಯ ನಡುವೆಯೇ ಐಶ್ವರ್ಯಾ ರೈ ಬಚ್ಚನ್​ ಮತ್ತು ಅಭಿಷೇಕ್​ ಬಚ್ಚನ್​ ಅವರು ಜಗಳ ಮಾಡಿಕೊಂಡಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ.

 

ಹೌದು, ಐಶ್ವರ್ಯಾ ರೈ ಬಚ್ಚನ್​ ಮತ್ತು ಅಭಿಷೇಕ್​ ಬಚ್ಚನ್ ಇಬ್ಬರು ಬೇರೆ ಬೇರೆ ವಾಸ ಶುರು ಮಾಡಿದ್ದು, ಯಾವುದೇ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲು ಇಷ್ಟಪಡ್ತಿಲ್ಲ. ಈ ಮಧ್ಯೆ ಅವರ ಮದುವೆ ಹಾಗೂ ಪ್ರೀತಿ- ಸಂಸಾರದ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಅವರ ಹಳೆಯ ವಿಡಿಯೋಗಳು ವೈರಲ್ ಆಗ್ತಿವೆ. ಅಲ್ಲದೆ ಒಂದಷ್ಟು ದಿನಗಳಿಂದ ಕೇಳಿಬರುತ್ತಿರುವ ವಿಚ್ಛೇದನದ ಮಾತಿಗೆ ಈಗ ವೈರಲ್ ಆದ ವಿಡಿಯೋದಿಂದ ಪುಷ್ಟಿ ಸಿಕ್ಕಂತೆ ಆಗಿದೆ.

ಯಸ್, ಹಳೇ ವಿಡಿಯೋ ಇಟ್ಟುಕೊಂಡು ನೆಟ್ಟಿಗರು ಚರ್ಚೆ ಶುರು ಮಾಡಿದ್ದಾರೆ. ಈ ವಿಡಿಯೋದಲ್ಲಿ ಐಶ್ವರ್ಯಾ ರೈ ಬಚ್ಚನ್​ ಮತ್ತು ಅಭಿಷೇಕ್​ ಬಚ್ಚನ್​ ಅವರು ಮಾತಿನ ಚಕಮಕಿ ನಡೆಸಿದ ದೃಶ್ಯ ಸೆರೆಯಾಗಿದೆ. ಪ್ರೋ ಕಬಡ್ಡಿ ಪಂದ್ಯ ನಡೆಯುವಾಗ ಐಶ್ವರ್ಯಾ ರೈ ಬಚ್ಚನ್​ ಅವರು ಫ್ಯಾಮಿಲಿ ಸಮೇತರಾಗಿ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದರು. ಅವರ ಜೊತೆ ಪತಿ ಅಭಿಷೇಕ್​ ಬಚ್ಚನ್​, ಮಗಳು ಆರಾಧ್ಯಾ ಬಚ್ಚನ್​, ಸೊಸೆ ನವ್ಯಾ ನವೇಲಿ ನಂದಾ ಮುಂತಾದವರು ಇದ್ದರು. ಈ ವೇಳೆ ಯಾವುದೋ ವಿಷಯಕ್ಕೆ ಐಶ್ವರ್ಯಾ ರೈ ಮತ್ತು ಅಭಿಷೇಕ್​ ಬಚ್ಚನ್​ ಅವರು ಜಗಳ ಮಾಡಿಕೊಂಡಿದ್ದಾರೆ. ಡಿವೋರ್ಸ್​ ಬಗ್ಗೆ ಸುದ್ದಿ ಹಬ್ಬಿದ ಬಳಿಕ ಈ ವಿಡಿಯೋಗೆ ಮರುಜೀವ ಬಂದಿದೆ. ಅಭಿಷೇಕ್​ ಬಚ್ಚನ್​ ಜೊತೆ ಗರಂ ಆಗಿ ಮಾತನಾಡಿದ ಬಳಿಕ ಐಶ್ವರ್ಯಾ ರೈ ಅವರು ಮುಖ ತಿರುಗಿಸಿಕೊಂಡರು. ಬಳಿಕ ನವ್ಯಾ ನವೇಲಿ ನಂದಾ ಕೂಡ ಏನನ್ನೋ ಹೇಳಲು ಪ್ರಯತ್ನಿಸಿ ಸುಮ್ಮನಾದರು. ಐಶ್ವರ್ಯಾ ಅವರ ವರ್ತನೆ ಕಂಡು ನವ್ಯಾಗೂ ಸರಿ ಎನಿಸಿಲ್ಲ. ಅವರ ನಡುವೆ ನಡೆದಿರಬಹುದಾದ ಸಂಭಾಷಣೆ ಏನು ಎಂಬುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ.

ಇಷ್ಟೇ ಅಲ್ಲದೆ ನಟಿ ಐಶ್ವರ್ಯಾ ರೈ ಅವರು ಕರಣ್ ಜೋಹರ್ ಅವರ ಚಾಟ್ ಶೋ ಕಾಫಿ ವಿತ್ ಕರಣ್‌ಗೆ ಬಂದಾಗ ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳಲಾಗಿತ್ತು. ಐಶ್ವರ್ಯಾ ರೈ ಬಚ್ಚನ್‌ ಅವರಿಗೆ ಕರಣ್ ಜೋಹರ್ ಬಾಲಿವುಡ್‌ನಲ್ಲಿರುವ ಖಾನ್‌ಗಳ ಬಗ್ಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಐಶ್ವರ್ಯ ರೈ ಬಚ್ಚನ್‌ ನಾನು ಬಚ್ಚನ್​ ಫ್ಯಾಮಿಲಿ, ಖಾನ್​ ಕುಟುಂಬದವಳ್ಳಲ್ಲ… ಎಂದು ಉತ್ತರ ನೀಡಿದ್ದರು. ಈ ವೀಡಿಯೋ ಕೂಡ ಇದೀಗ ಮತ್ತೆ ಕಾಣಿಸಿಕೊಂಡಿದೆ. ಸಿಕ್ಕಾಪಟ್ಟೆ ವೈರಲ್‌ ಕೂಡ ಆಗುತ್ತಿದೆ.

ಅಂದಹಾಗೆ ಐಶ್ವರ್ಯಾ ರೈ ಮತ್ತು ಅಭಿಷೇಕ್​ ಬಚ್ಚನ್​ ಅವರು 2007ರಲ್ಲಿ ಮದುವೆ ಆದರು. ಅವರು ದಾಂಪತ್ಯ ಜೀವನ ಆರಂಭಿಸಿ 17 ವರ್ಷ ಆಗಿದೆ. ಇಷ್ಟು ವರ್ಷ ಇಲ್ಲದ ಮನಸ್ತಾಪ ಈಗ ಯಾಕೆ ಬಂದಿದೆ ಎಂಬುದು ಸದ್ಯಕ್ಕಂತೂ ಬಹಿರಂಗ ಆಗಿಲ್ಲ. ಇತ್ತೀಚೆಗೆ ಅಭಿಷೇಕ್ ಬಚ್ಚನ್ ಅವರು ಒಂಟಿಯಾಗಿ ವಿದೇಶ ಪ್ರವಾಸ ಮಾಡಿದರು. ಪತ್ನಿಯನ್ನು ಬಿಟ್ಟು ಅವರು ಸುತ್ತಾಡಿದ್ದು ಕೂಡ ಅನುಮಾನ ಹೆಚ್ಚಲು ಕಾರಣ ಆಗಿದೆ.

2 Comments
  1. Terrance Sherrock says

    I genuinely enjoy examining on this web site, it holds fantastic content.

  2. ayuda TFM arquitectura says

    Very interesting info !Perfect just what I was searching for! “…obstacles do not exist to be surrendered to, but only to be broken.” by Adolf Hitler.

Leave A Reply

Your email address will not be published.