Jio recharge offer: ಜಿಯೋ ಗ್ರಾಹಕರು ಬೇರೆ ನೆಟ್ವರ್ಕ್ ಜಂಪ್ ಆಗದಂತೆ ತಡೆಯಲು ಮುಕೇಶ್ ಅಂಬಾನಿ ಹೊಸ ಪ್ಲಾನ್!

Jio recharge offer: ಜಿಯೋ ಗ್ರಾಹಕರು ಬೇರೆ ನೆಟ್ವರ್ಕ್ ಜಂಪ್ ಆಗದಂತೆ ತಡೆಯಲು ಮುಕೇಶ್ ಅಂಬಾನಿ ಹೊಸ ಪ್ಲಾನ್ ಒಂದು ಪರಿಚಯಿಸಿದ್ದಾರೆ. ಹೌದು, ರಿಲಯನ್ಸ್ ಜಿಯೋ ತನ್ನ ಬಳಕೆದಾರರನ್ನು ಉಳಿಸಿಕೊಳ್ಳಲು ಹೊಸ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ.

ಈಗಾಗಲೇ ರಿಲಯನ್ಸ್ ಜಿಯೋ ಮೂರು ತಿಂಗಳಲ್ಲಿ 10 ಲಕ್ಷಕ್ಕೂ ಅಧಿಕ ಬಳಕೆದಾರರನ್ನು ಕಳೆದುಕೊಂಡಿದೆ. ಮುಖ್ಯವಾಗಿ ಎಂಎನ್‌ಪಿ ಪೋರ್ಟ್ ಮೂಲಕ ಬಳಕೆದಾರರು ಬೇರೊಂದು ನೆಟ್‌ವರ್ಕ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನಲೆ ರಿಲಯನ್ಸ್ ಜಿಯೋ ಮುಖ್ಯಸ್ಥ ಮುಕೇಶ್ ಅಂಬಾನಿ ಹೊಸ ಪ್ಲಾನ್ (Jio recharge offer) ರೆಡಿ ಮಾಡಿದ್ದಾರೆ.

ಹೊಸ ಪ್ಲಾನ್ ಪ್ರಕಾರ, ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಬಳಕೆದಾರರು 1,029 ರೂಪಾಯಿಯ ರೀಚಾರ್ಜ್ ಮಾಡಿಕೊಳ್ಳಬಹುದು. ಅನ್‌ಲಿಮಿಟೆಡ್ ಕಾಲ್ ಮತ್ತು ಉಚಿತ ಎಸ್ಎಂಎಸ್ ಜೊತೆ ಹಲವು ಸೌಲಭ್ಯಗಳು ಗ್ರಾಹಕರಿಗೆ ಸಿಗಲಿವೆ.

ಹೌದು, 1,029 ರೂಪಾಯಿ ರೀಚಾರ್ಜ್ ಪ್ಲಾನ್ ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಅನ್‌ಲಿಮಿಟೆಡ್ ಕಾಲ್ ಹಾಗೂ ಪ್ರತಿದಿನ 100 ಎಸ್‌ಎಂಎಸ್ ಫ್ರೀ. ಈ 1,029 ರೂ. ಪ್ಲಾನ್‌ನಲ್ಲಿ ದಿನಕ್ಕೆ 2 ಜಿಬಿ ಯಂತೆ ಒಟ್ಟು 168GB ಹೈಸ್ಪೀಡ್ ಡೇಟಾ ಲಭ್ಯವಾಗುತ್ತದೆ. ಈ ಪ್ಲಾನ್ ಮತ್ತೊಂದು ವಿಶೇಷತೆ ಏನಂದ್ರೆ ಇದರಲ್ಲಿ 5G ಇಂಟರ್‌ನೆಟ್ ಸೇವೆ ಒಳಗೊಂಡಿದೆ. ಒಂದು ವೇಳೆ ದಿನದ ಲಿಮಿಟ್ ಅಂತ್ಯವಾದ ಕೂಡಲೇ ಇಂಟರ್‌ನೆಟ್ ಸ್ಪೀಡ್ 64Kbpsಗೆ ಇಳಿಮುಖವಾಗುತ್ತದೆ.

ಇನ್ನು ಇಲ್ಲಿ ಒಟಿಟಿ ಪ್ಲಾಟ್‌ಫಾರಂಗಳಲ್ಲಿ ಸಿನಿಮಾ ಮತ್ತು ವೆಬ್‌ ಸಿರೀಸ್ ನೋಡುತ್ತಿದ್ರೆ ಇದೇ ಪ್ಲಾನ್‌ನಲ್ಲಿ ಗ್ರಾಹಕರಿಗೆ ಅಮೆಜಾನ್ ಲೈಟ್ ಸಬ್‌ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ. ಈ ಮೊದಲು ಇದೇ ಪ್ಲಾನ್‌ನಲ್ಲಿ ಅಮೆಜಾನ್ ಪ್ರೈಮ್ ಆಫರ್ ಕೊಡಲಾಗುತ್ತಿತ್ತು. ಇದೀಗ ಅಮೆಜಾನ್ ಪ್ರೈಮ್ ಲೈಟ್‌ ಜೊತೆ ಎರಡು ಡಿವೈಸ್ (ಟಿವಿ ಅಥವಾ ಮೊಬೈಲ್) ನಲ್ಲಿ ಹೆಚ್‌ಡಿ ಕ್ವಾಲಿಟಿ ವಿಡಿಯೋ ನೋಡಬಹುದಾಗಿದೆ.

Leave A Reply

Your email address will not be published.