Biggboss kannada: ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಮೂಲಭೂತ ಹಕ್ಕುಗಳ ಉಲ್ಲಂಘನೆ: ಮಹಿಳಾ ಆಯೋಗದಿಂದ ಪರಿಶೀಲನೆಗೆ ಸೂಚನೆ
Biggboss kannada: ಕರ್ನಾಟಕ ರಾಜ್ಯ ಮಹಿಳಾ ಆಯೋಗ(State women commission) ಅಧ್ಯಕ್ಷೆಯಾದ ಡಾ| ನಾಗಲಕ್ಷ್ಮೀ ಚೌಧರಿ, ಅವರಿಗೆ ಶ್ರೀಮತಿ ರಕ್ಷಿತಾ ಪಿ ಸಿಂಗ್ ಹಾಗೂ ಶ್ರೀಮತಿ ಎಂ ನಾಗಮಣಿ ಅವರು ಬಿಗ್ ಬಾಸ್ 11Big boss 11) ಕಾರ್ಯಕ್ರಮ ವಿಚಾರವಾಗಿ ಅವರಿಗೆ ಪತ್ರ ಬರೆದಿರುತ್ತಾರೆ. ಈ ಹಿನ್ನೆಲೆಯಲ್ಲಿ ರಾಮನಗರ ಎಸ್ಪಿಗೆ(Ramanagara SP) ಮಹಿಳಾ ಆಯೋಗದಿಂದ ಪತ್ರ ಬರೆಯಲಾಗಿದ್ದು, ಪರಿಶೀಲನೆ ಮಾಡಿ 5 ದಿನದೊಳಗೆ ವರದಿ ಕೊಡುವಂತೆ ಸೂಚನೆ ನೀಡಲಾಗಿದೆ.
ಶ್ರೀಮತಿ ರಕ್ಷಿತಾ ಪಿ ಸಿಂಗ್ ಹಾಗೂ ಶ್ರೀಮತಿ ಎಂ ನಾಗಮಣಿ, ಇವರು ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್-11 ಕಾರ್ಯಕ್ರಮದಲ್ಲಿ ಮಹಿಳೆಯರನ್ನು ಅಕ್ರಮ ಬಂಧನದಲ್ಲಿಟ್ಟು, ಅವರಿಗೆ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿಲ್ಲ. ಹಾಗೂ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಿಕೊಡದೇ ಮಹಿಳೆಯರ ಮೂಲಭೂತ ಹಕ್ಕುಗಳನ್ನು ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರು ಉಲ್ಲಂಘಿಸುತ್ತಿರುವುದಾಗಿ ತಿಳಿಸುತ್ತಾ, ಸದರಿಯವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗಕ್ಕೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು.
ಇದೀಗ ಅರ್ಜಿದಾರರ ಅರ್ಜಿಯನ್ನು ನಿಯಮಾನುಸಾರ ಪರಿಶೀಲಿಸಿ, ಅರ್ಜಿದಾರರ ಮನವಿಗೆ ಸೂಕ್ತ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ವರದಿಯನ್ನು 05 ದಿನಗಳೊಳಗಾಗಿ ಆಯೋಗಕ್ಕೆ ಕಳುಹಿಸಿಕೊಡುವಂತೆ ಮಹಿಳಾ ಆಯೋಗ ರಾಮನಗರ ಎಸ್ ಪಿ ಅವರಿಗೆ ಕೋರಿದೆ.