Tea Benefits: ನಿಮಗೆ ಟೀ ಇಷ್ಟಾನ? ಹಾಗಿದ್ರೆ ಶೇಕಡಾ 99 ಜನರಿಗೆ ತಿಳಿಯದ ಸೀಕ್ರೆಟ್ ಹೇಳ್ತಿವಿ ಕೇಳಿ!
Tea Benefits: ಬಹುತೇಕರಿಗೆ ಹಸಿವಾದಾಗ ಊಟ ಇಲ್ಲ ಅಂದ್ರೂ ನಡಿಯುತ್ತೆ ಆದ್ರೆ ಟೀ ಇಲ್ಲದೆ ಇರಲು ಸಾಧ್ಯವಿಲ್ಲ ಅನ್ನುವವರಿಗೆ ಇಲ್ಲೊಂದು ಸೀಕ್ರೆಟ್ ವಿಷ್ಯ ಇದೆ. ಒಂದು ವೇಳೆ ಟೀ ಇಲ್ಲ ಅಂದ್ರೆ ಕೆಲವರಿಗೆ ದಿನವೇ ಆರಂಭ ಆಗಲ್ಲ. ಹಾಗಿರುವಾಗ ಟೀ ಕುಡಿಯದೇ ಇದ್ದರೆ ಅವರು ಏನೋ ಕಳೆದು ಕೊಂಡಂತೆ ವರ್ತಿಸುತ್ತಾರೆ. ಮುಖ್ಯವಾಗಿ ಈ ಕೆಲಸದ ಒತ್ತಡದ (Work Stress) ಮಧ್ಯೆ ಮಾನಸಿಕ ವಿಶ್ರಾಂತಿಗಾಗಿ ಟೀ ಕುಡಿಯುತ್ತಾರೆ. ಇನ್ನು ಹಲವರು ತಲೆ ನೋವು ಕಾಣಿಸಿಕೊಳ್ಳುತ್ತಿದ್ದರೆ ಟೀ ಕುಡಿದು ಸುಧಾರಿಸಕೊಳ್ಳುತ್ತಾರೆ. ಹಾಗಾದ್ರೆ ಇದಕ್ಕೆಲ್ಲಾ ಕಾರಣ ಏನು? ಈ ಅಭ್ಯಾಸ ಯಾಕೆ ಆಗುತ್ತೆ ಅನ್ನೋದು ಇಲ್ಲಿದೆ ನೋಡಿ.
ಮಾಹಿತಿ ಪ್ರಕಾರ, ಟೀ ಸೇವನೆಯಿಂದ ನಮ್ಮ ದೇಹಕ್ಕೆ ವಿವಿಧ ಪ್ರಯೋಜನಗಳು ಇದೆ ಜೊತೆಗೆ ಕೆಲ ಸಮಸ್ಯೆಗಳು ಇದೆ. ಸಾಮಾನ್ಯವಾಗಿ ಒಂದು ನಿಗದಿತ ಸಮಯದಲ್ಲಿ ಟೀ ಕುಡಿಯುವುದು ಉತ್ತಮ. ಆದ್ರೆ ಫ್ರೀ ಇದ್ದಾಗಲೆಲ್ಲ ಟೀ ಕುಡಿದರೆ ನಿಮ್ಮ ಆರೋಗ್ಯ ಕೆಡುವುದು ಗ್ಯಾರಂಟಿ.
ಇನ್ನು ಟೀ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಅಂದರೆ, ಟೀ ಸೇವನೆಯಿಂದ ತಲೆ ನೋವು ಕಡಿಮೆ ಆಗಲ್ಲ. ಅದರಲ್ಲೂ ಅತೀಯಾದ ಟೀ ಸೇವನೆ ಹಾನಿಕಾರಕ. ಟೀ ಸೇವಿಸುವುದರಿಂದ ತಲೆ ನೋವಿಗೆ ಸಂಬಂಧಿಸಿ ಯಾವ ಪರಿಣಾಮವೂ ಬೀರಲ್ಲ ಎಂದು ವೈದ್ಯರು ಹೇಳುತ್ತಾರೆ. ಟೀನಲ್ಲಿ ಹಲವು ವಿಧವಿದೆ. ಅದರಲ್ಲೂ ಬ್ಲ್ಯಾಕ್ ಮತ್ತು ಗ್ರೀನ್ ಟೀ ಕುಡಿದರೆ ಹಲವು ಪ್ರಯೋಜನಗಳಿವೆ.
ಬ್ಲ್ಯಾಕ್ ಟೀ ಹೆಚ್ಚು ಕೆಫೀನ್ ಅನ್ನು ಹೊಂದಿರುತ್ತದೆ, ಇದು ನಿಮಗೆ ತಲೆನೋವಿಗೆ ಸಹಾಯ ಮಾಡುತ್ತದೆ. ಹಾಗೂ ಕೆಫೀನ್ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ, ವಿಶೇಷವಾಗಿ ಕೆಫೀನ್ ಅನ್ನು ತಲೆನೋವು ಅನುಭವಿಸುವವರು ಸ್ವೀಕರಿಸುತ್ತಾರೆ.
ಇನ್ನು ಮಸಾಲಾ ಟೀ ನಲ್ಲಿ ಬಳಸುವ ಶುಂಠಿ, ಏಲಕ್ಕಿ ಮತ್ತು ದಾಲ್ಚಿನ್ನಿಗಳಂತಹ ಮಸಾಲೆಗಳು ಹಲವು ಬಗೆಯ ಉತ್ತಮ ಗುಣಲಕ್ಷಣಗಳನ್ನು ಹೊಂದಿದ್ದು ಇದು ತಲೆ ನೋವು ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ ಮೈಗ್ರೇನ್ ರೋಗಿಗಳಿಗೆ ಚಿಕಿತ್ಸೆ ನೀಡಲು ಶುಂಠಿ ಪರಿಣಾಮಕಾರಿ ಎಂದು ವೈದ್ಯರು ದೃಢಪಡಿಸಿದ್ದಾರೆ.
ಇನ್ನು ಐಸಿಎಂಆರ್ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳಲ್ಲಿ ಊಟಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಮತ್ತು ನಂತರ ಚಹಾ ಸೇವಿಸಬಾರದು ಎನ್ನಲಾಗಿದೆ. ಏಕೆಂದರೆ ಇದರಲ್ಲಿ ಟ್ಯಾನಿನ್ ಎಂಬ ಅಂಶವು ಕೆಫೀನ್‌ನಂತೆ ಇರುತ್ತದೆ. ಈ ಟ್ಯಾನಿನ್‌ಗಳು ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯ ಮೇಲೆ ಅಡ್ಡಿ ಪರಿಣಾಮಪಡಿಸಬಹುದು. ದೇಹದಲ್ಲಿ ಕಬ್ಬಿಣದ ಕೊರತೆ ಮತ್ತು ರಕ್ತಹೀನತೆಯಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.