Love Marriage: ವಿಚಿತ್ರ ಲವ್ ಸ್ಟೋರಿ! ಮದುವೆ ಮಾಡಲು ಒಪ್ಪಲಿಲ್ಲವೆಂದು ಎರಡು ಕುಟುಂಬಗಳ ಸೈಲೆಂಟ್ ಕೊಲೆ!
Love Marriage: ಪ್ರೀತಿ ಅನ್ನೋದೇ ಮಾಯೆ. ಹಾಗಿರುವಾಗ ಪ್ರೀತಿ ಯಾವಾಗ ಹೇಗೆ ಒಬ್ಬರನ್ನು ಬದಲಿಸುತ್ತೆ ಅನ್ನೋದು ಊಹಿಸಲು ಕೂಡಾ ಸಾಧ್ಯವಿಲ್ಲ. ಅಂತೆಯೇ ಇಲ್ಲೊಬ್ಬಳು ಪ್ರೀತಿಗಾಗಿ (Love) ಕುಟುಂಬದವರ ಪ್ರಾಣವನ್ನೇ ತೆಗೆದಿದ್ದಾಳೆ.
ಹೌದು, ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಖೈರ್ಪುರ್ ಜಿಲ್ಲೆಯಲ್ಲಿ ಒಂದೇ ಕುಟುಂಬದ 13 ಮಂದಿ ಸಾವಿಗೀಡಾಗಿದ್ದು, ಈ ಘಟನೆ ತನಿಖೆ ಕೈಗೊಂಡ ಪೊಲೀಸರಿಗೆ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಅಘಾತಕಾತಿ ಸಂಗತಿ ಏನೆಂದರೆ, ಮೃತ ಕುಟುಂಬದ ಸದಸ್ಯರಲ್ಲಿ ಒಬ್ಬಳು. ಲವ್ ಮ್ಯಾರೇಜ್ ( Love Marriage ) ಮಾಡಿಕೊಳ್ಳಲು ಒಪ್ಪದಿದ್ದಕ್ಕೆ ಇಡೀ ಕುಟುಂಬಕ್ಕೆ ವಿಷವುಣಿಸಿ ಕೊಲೆ ಮಾಡಿದ್ದು, ಈ ಕೃತ್ಯಕ್ಕೆ ಸಾಥ್ ನೀಡಿದ ಆಕೆಯ ಪ್ರಿಯಕರ ಅಮಿರ್ ಬಕ್ಷ್ ಬ್ರೋಹಿ ಎಂಬಾತನನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ.
ಇದೀಗ ಪ್ರೇಮಿಗಳಾದ ಶಾಯಿಸ್ತಾ ಮತ್ತು ಅಮಿರ್ ಬಕ್ಷ್ ಬ್ರೋಹಿ ಸೇರಿ ಆಹಾರದಲ್ಲಿ ವಿಷ ಬೆರೆಸಿ ಕೊಲೆ ಮಾಡಿರುವುದಾಗಿ ಬಂಧಿತ ಆರೋಪಿಗಳಿಬ್ಬರು ಒಪ್ಪಿಕೊಂಡಿದ್ದಾರೆ. ನಮ್ಮಿಬ್ಬರ ಪ್ರೀತಿಗೆ ಎರಡೂ ಕುಟುಂಬದಿಂದ ವಿರೋಧವಿತ್ತು. ಹೀಗಾಗಿ ಈ ಕೃತ್ಯ ಎಸಗಿದೆವು ಎಂದು ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾರೆ.
ಈ ಭೀಕರ ಕೃತ್ಯ ಆಗಸ್ಟ್ 17 ರಂದು ಖೈರ್ಪುರ್ ಜಿಲ್ಲೆಯ ಪಿರ್ಜೋ ಗೋಥ್ ಪ್ರದೇಶದಲ್ಲಿ ನಡೆದಿದ್ದು, ಮೃತರು ವಿಷ ಸೇವಿಸಿರುವುದು ಮರಣೋತ್ತರ ಪರೀಕ್ಷಾ ವರದಿಯಲ್ಲೂ ದೃಢಪಟ್ಟಿದೆ. ಇದೀಗ ಶಾಯಿಸ್ತಾ ಮತ್ತು ಅಮೀರ್ ಭಕ್ಷ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.