Mangaluru: ಮಾಜಿ ಶಾಸಕ ಮೊಯ್ದೀನ್‌ ಬಾವಾ ಸೋದರ ನಾಪತ್ತೆ ಪ್ರಕರಣದಲ್ಲಿ ಮಹಿಳೆಯ ಕೈವಾಡ

Mangaluru: ಮಾಜಿ ಶಾಸಕ ಮೊಯಿದ್ದೀನ್‌ ಬಾವಾ ಸೋದರ ಮುಮ್ತಾಜ್‌ ಅಲಿ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಮಾಹಿತಿಯೊಂದು ವರದಿಯಾಗಿದೆ. ಈ ನಾಪತ್ತೆ ಪ್ರಕರಣದಲ್ಲಿ ಮಹಿಳೆಯ ಕೈವಾಡವಿದೆ ಎನ್ನಲಾಗುತ್ತಿದೆ ಎಂದು ವರದಿಯಾಗಿದೆ.

 

ಮಹಿಳೆಯಿಂದ ಮುಮ್ತಾಜ್‌ ಅಲಿ ಅವರಿಗೆ ನಿರಂತರ ಬ್ಲಾಕ್‌ಮೇಲ್‌ ಆಗುತ್ತಿತ್ತು. ಮದುವೆ ಆಗುವಂತೆ ಮಹಿಳೆ ಬ್ಲಾಕ್‌ ಮೇಲ್‌ ಮಾಡುತ್ತಿದ್ದು, ಸುರತ್ಕಲ್‌ನ ನಾಲ್ವರು ಇದಕ್ಕೆ ಸಹಕಾರ ನೀಡಿದ್ದರು ಎನ್ನಲಾಗಿದೆ. ಮಸೀದಿ ಕಮಿಟಿ ವಿಚಾರದಲ್ಲಿ ಆ ನಾಲ್ವರಿಗೂ ಮುಮ್ತಾಜ್‌ ಅಲಿಗೂ ಜಟಾಪಟಿಯಾಗಿತ್ತು. ಹೀಗಾಗಿ ನಾಲ್ವರು ಮಹಿಳೆಯ ಪರ ಇದ್ದರೆನ್ನಲಾಗಿದೆ. ಮಹಿಳೆ ಹಾಗೂ ನಾಲ್ವರು ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡುತ್ತಿದ್ದು, ಇದರಿಂದ ಬೇಸತ್ತು ಅಲಿ ಆತ್ಮಹತ್ಯೆಗೆ ಮುಂದಾಗಿದ್ದಾರೆಯೇ? ಎಂದು ವರದಿಯಾಗಿದೆ.

ಇದರ ಜೊತೆಗೆ ಬ್ಲಾಕ್‌ಮೇಲ್‌ ಮಾಡುತ್ತಿದ್ದ ಮಹಿಳೆ ಕೂಡಾ ನಾಪತ್ತೆಯಾಗಿದ್ದು, ಪೊಲೀಸರು ಆಕೆಯ ಮೊಬೈಲ್‌ ಟ್ರೇಸ್‌ ಮಾಡುತ್ತಿದ್ದಾರೆ. ಕೇರಳದವರೆಗೂ ಆ ಮಹಿಳೆಯ ಫೋನ್‌ ಆಗಿದ್ದು, ನಂತರ ಸ್ವಿಚ್ಡ್‌ ಆಫ್‌ ಆಗಿದೆ. ಸುರತ್ಕಲ್‌ನ ಕೃಷ್ಣಾಪುರ ನಿವಾಸಿಗಿರುವ ಈ ಮಹಿಳೆ ಮುಮ್ತಾಜ್‌ ಅಲಿ ಅವರು ನಾಪತ್ತೆಯಾಗುತ್ತಿದ್ದಂತೆ ಕೇರಳಕ್ಕೆ ಎಸ್ಕೇಪ್‌ ಆಗಿದ್ದಾಳೆ. ಇತ್ತ ಕಡೆ ಆ ನಾಲ್ವರು ಯುವಕರ ಮೇಲೆ ಕೂಡಾ ಪೊಲೀಸರು ನಿಗಾ ಇಟ್ಟಿದ್ದು, ಮುಮ್ತಾಜ್‌ ಅಲಿ ಅವರ ಸಾವು ದೃಢಪಟ್ಟರೆ ಇವರನ್ನು ಬಂಧನ ಮಾಡುವ ಸಾಧ್ಯತೆ ಇದೆ. ಇದಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ವರದಿಯಾಗಿದೆ.

Leave A Reply

Your email address will not be published.