Almonds : ಬಾದಾಮಿ ತಿನ್ನಲೂ ಇದೆ ಒಂದು ಸಮಯ, ಯಾವುದದು? ಇದವರೆಗೂ ಯಾರಿಗೂ ಗೊತ್ತಿಲ್ಲ ಈ ಸತ್ಯ !!
Almonds: ಆರೋಗ್ಯವನ್ನ ಕಾಪಾಡಿಕೊಳ್ಳಲು ಡ್ರೈ ಫ್ರೂಟ್ಸ್ ತಿನ್ನಲು ವೈದ್ಯಕೀಯ ತಜ್ಞರು ಸಲಹೆ ನೀಡುತ್ತಾರೆ. ಅದಲ್ಲಿ ಅನಂಕರಿಗೆ ಬಾದಾಮಿ(Almonds) ಅಂದರೆ ತುಂಬಾ ಇಷ್ಟ. ಯಾಕಂದ್ರೆ ಬಾದಾಮಿ ಒಂದ ಸೂಪರ್ ಫುಡ್. ನಿಯಮಿತವಾದ ಬಾದಾಮಿ ಸೇವನೆ ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳನ್ನ ಹೊಂದಿದೆ. ಹೀಗಾಗಿ ಅನೇಕರು, ಸದಾ ಇದನ್ನು ಸೇವಿಸುತ್ತಿರುತ್ತಾರೆ. ಆದ್ರೆ, ಇದರ ಸೇವನೆಗಾಗಿಯೇ ಒಂದು ಸರಿಯಾದ ಸಮಯವಿದೆ ಅನ್ನೋದು ನಿಮಗೆ ಗೊತ್ತಾ?
ಹೌದು, ಬಾದಾಮಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆಯಾದರೂ, ಸರಿಯಾದ ಸಮಯಕ್ಕೆ ತಿಂದರೆ ಮಾತ್ರ ದೇಹಕ್ಕೆ ಪೋಷಕಾಂಶಗಳು ಸಿಗುತ್ತವೆ ಎಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ. ಆದರೆ ಸರಿಯಾದ ರೀತಿಯಲ್ಲಿ ಬಾದಾಮಿ ತಿನ್ನುವುದು ಬಹಳ ಮುಖ್ಯ.
ಬಾದಾಮಿ ತಿನ್ನಲು ಇದು ಸರಿಯಾದ ಸಮಯ.!
ಬಾದಾಮಿ ತಿನ್ನಲು ಬೆಳಿಗ್ಗೆ ಅತ್ಯುತ್ತಮ ಸಮಯ ಎಂದು ಪರಿಗಣಿಸಲಾಗಿದೆ. ಪ್ರತಿದಿನ ಬೆಳಿಗ್ಗೆ ನೀರು ಕುಡಿದ ನಂತರ ಖಾಲಿ ಹೊಟ್ಟೆಯಲ್ಲಿ 3-4 ಬಾದಾಮಿಯನ್ನ ನೀರಿನಲ್ಲಿ ಅಥವಾ ಹಾಲಿನಲ್ಲಿ ನೆನೆಸಿಟ್ಟು ತಿನ್ನುವುದರಿಂದ ದೇಹವು ಎಲ್ಲಾ ಪೋಷಕಾಂಶಗಳನ್ನ ಉತ್ತಮವಾಗಿ ಹೀರಿಕೊಳ್ಳುತ್ತದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಅಲ್ಲದೆ ತೂಕ ನಷ್ಟ, ದೌರ್ಬಲ್ಯವನ್ನು ಹೋಗಲಾಡಿಸಲು, ಚರ್ಮದ ಕಾಂತಿ ಹೆಚ್ಚಿಸಲು ಇದು ತುಂಬಾ ಸಹಕಾರಿಯಾಗಿದೆ.