Bigg boss: ಬಿಗ್ ಬಾಸ್ ಮನೆಯಲ್ಲಿ ಮೊದಲ ಎಲಿಮಿನೇಷನ್: ಸ್ಟ್ರಾಂಗ್ ಕಾಂಟೆಸ್ಟೆಂಟ್ ಔಟ್!?

Bigg boss: ಕನ್ನಡದಲ್ಲಿ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ 11ರ (Bigg Boss Kannada 11) ಶುರುವಾಗಿ 1 ವಾರ ಕಳೆದಿದೆ. 17 ಸ್ಪರ್ಧಿಗಳ ರಿಯಲ್ ಗೇಮ್ ಶುರು ಆಗಿದೆ. ಹೀಗಿರುವಾಗ ದೊಡ್ಮನೆಯ ಮೊದಲ ಎಲಿಮಿನೇಷನ್‌ನಲ್ಲಿ ಪ್ರಬಲ ಸ್ಪರ್ಧಿಯೇ ಔಟ್ ಆಗಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

 

ಬಿಗ್ ಬಾಸ್ ನಿಯಮ ಪ್ರಕಾರ, ವಾರಾಂತ್ಯದ ಪಂಚಾಯಿತಿಯಲ್ಲಿ ಒಬ್ಬ ಸ್ಪರ್ಧಿಯ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತದೆ. ಅದರಂತೆ ದೊಡ್ಮನೆಯ ಮೊದಲ ವಾರ ಯಾರು ಊಹಿಸಿರದ ವ್ಯಕ್ತಿ ಯಮುನಾ ಶ್ರೀನಿಧಿ (Yamuna Srinidhi) ಔಟ್ ಆಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣ ಅತೀ ಕಡಿಮೆ ವೋಟ್ ಪಡೆದಿದ್ದಾರೆ ಎನ್ನಲಾಗ್ತಿದೆ.

ನಿನ್ನೆ ಶನಿವಾರ (ಸೆ.5) ಸಂಚಿಕೆಯಲ್ಲಿ ಭವ್ಯಾ, ಗೌತಮಿ ಜಾದವ್, ಮಾನಸಾ ಸೇಫ್ ಆಗಿದ್ದಾರೆ. ಆದ್ರೆ ಕಾನ್ಫಿಡೆನ್ಸ್ ಇದ್ದ, ಸ್ಟ್ರಾಂಗ್ ಸ್ಪರ್ಧಿ ಎಂದು ಗುರುತಿಸಿಕೊಂಡಿದ್ದ ಯಮುನಾ ಎಲಿಮಿನೇಟ್ ಆಗಿದ್ದಾರೆ ಎನ್ನಲಾದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಎಂಬುದನ್ನು ಭಾನುವಾರದ (ಸೆ.6) ಸಂಚಿಕೆಯಲ್ಲಿ ಉತ್ತರ ಸಿಗಲಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ.

Leave A Reply

Your email address will not be published.