Congress Rally: ಚುನಾವಣೆ ರ್‍ಯಾಲಿ ವೇಳೆ ಕಾರ್ಯಕರ್ತೆ ಮೇಲೆ ಕಾಮ ತೃಷೆ ತೀರಿಸಿಕೊಂಡ ಕಾಂಗ್ರೆಸ್ ನಾಯಕ! ವಿಡಿಯೋ ವೈರಲ್!

Congress Rally: ಚುನಾವಣೆ ರ್‍ಯಾಲಿ ವೇಳೆ ಹರ್ಯಾಣದಲ್ಲಿ ವೇದಿಕೆ ಮೇಲೆ ತನ್ನ ಪಕ್ಷದ ಮಹಿಳಾ ಕಾರ್ಯಕರ್ತೆಯೊಂದಿಗೆ (Congress Rally)ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್ ನಾಯಕನ ವಿಡಿಯೋ ವೈರಲ್ ಆಗಿದೆ. ಹೌದು, ವೇದಿಕೆ ಮೇಲೆ ತನ್ನ ಪಕ್ಷದ ಮಹಿಳಾ ಕಾರ್ಯಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್ ನಾಯಕರು ಆಕೆಗೆ ಕಿರುಕುಳ ನೀಡಿದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ತಮ್ಮ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕಾಗಿ ಆಯೋಜಿಸಿದ್ದ ಸಭೆಯೊಂದರಲ್ಲಿ ದೀಪೇಂದರ್ ಅವರನ್ನು ಸನ್ಮಾನಿಸಲು ವೇದಿಕೆ ಮೇಲೆ ಬಂದಿದ್ದ ಮಹಿಳಾ ಕಾರ್ಯಕರ್ತೆಯೊಂದಿಗೆ ನಾಯಕರು ಅನುಚಿತವಾಗಿ ವರ್ತಿಸಿದ್ದಲ್ಲದೇ, ಅವರಿಗೆ ಕಿರುಕುಳ ನೀಡಿದ್ದಾರೆ. ಈ ಸಂಬಂಧ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ. ಇದೀಗ ತನ್ನ ಪಕ್ಷದ ನಾಯಕರ ವಿರುದ್ಧ ಕಠಿಣ ಕೈಗೊಳ್ಳಬೇಕೆಂದು ಸಂಸದೆ ಕುಮಾರಿ ಸಲ್ಜಾ ಅವರು ಆಗ್ರಹಿಸಿದ್ದಾರೆ.
ಹಗಲಲ್ಲೇ ಸಾರ್ವಜನಿಕ ವೇದಿಕೆಗಳಲ್ಲಿ ಕಾಂಗ್ರೆಸ್ ನ ಮಹಿಳೆಯರು ಸುರಕ್ಷಿತವಾಗಿಲ್ಲದಿದ್ದರೆ ರಾಜ್ಯದ ಮಹಿಳೆಯರು ಎಷ್ಟು ಸುರಕ್ಷಿತ ಎಂದು ಪ್ರಶ್ನಿಸಿದ್ದು, ‘ಈ ಘಟನೆ ಕಾಂಗ್ರೆಸ್‌ನ ಮಹಿಳಾ ವಿರೋಧಿ ಮನಸ್ಥಿತಿಯನ್ನು ಸೂಚಿಸುತ್ತದೆ” ಎಂದು ಒತ್ತಿ ಹೇಳಿದ ಪೂನಾವಾಲಾ, ಮಹಿಳಾ ನಾಯಕಿಯೊರ್ವಳು ಸಾರ್ವಜನಿಕ ವೇದಿಕೆಯಲ್ಲೇ ಕಾಂಗ್ರೆಸ್ ಮುಖಂಡರಿಂದ ಕಿರುಕುಳಕ್ಕೊಳಗಾಗಿರುವುದು ಅವರು ಅನುಭವಿಸಿದ ಅಸ್ವಸ್ಥತೆ, ಮುಜುಗರ ವೀಡಿಯೊದಲ್ಲಿ ಕಾಣಿಸುತ್ತದೆ ಎಂದಿದ್ದಾರೆ.
ಕಿರುಕುಳ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ‘ಕಾಂಗ್ರೆಸ್ ಪುರುಷರ ದುರ್ವರ್ತನೆಯಿಂದಾಗಿ ಕಾಂಗ್ರೆಸ್‌ನ ಹಲವು ಮಹಿಳಾ ಮುಖಂಡರು ಪಕ್ಷ ತೊರೆದಿದ್ದಾರೆ. ಆದರೂ ಮಹಿಳಾ ಸಬಲೀಕರಣದ ಬಗ್ಗೆ ಮಾಡುವ ಪ್ರಿಯಾಂಕಾ ವಾದ್ರಾ ಯಾಕೆ ಮೌನವಾಗಿದ್ದಾರೆ ಎಂದಿದ್ದಾರೆ.