Coffee festival: ಮಂಜಿನ ನಗರಿಯಲ್ಲಿ ಕಾಫಿ ಉತ್ಸವಕ್ಕೆ ಚಾಲನೆ: ಪ್ರತಿಕ್ರಿಯೆ ಹೇಗಿದೆ?

Coffee festival: ಐತಿಹಾಸಿಕ ಮಡಿಕೇರಿ(Madikeri) ದಸರಾ ಉತ್ಸವ(Dasara festival) ಅಂಗವಾಗಿ, ಕೊಡಗಿನ(Kodagu) ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಶಾಸಕ ಡಾ.ಮಂತರ್ ಗೌಡ ರವರ ವಿಶೇಷ ಕಾಳಜಿಯೊಂದಿಗೆ ಆಯೋಜಿಸಲಾಗಿರುವ ಕಾಫಿ ದಸರಾ ಉತ್ಸವಕ್ಕೆ ಚಾಲನೆ ದೊರೆಯಿತು.

ಕಾಫಿ ದಸರಾಕ್ಕೆ ಕಾಫಿ ಮಂಡಳಿ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಸೇರಿದಂತೆ ಕಾಫಿ ವಲಯದಿಂದ ಉತ್ತಮ ಸ್ಪಂದನ ದೊರಕಿದೆ. ಈಗಾಗಲೇ 32 ಮಳಿಗೆಗಳು ಭರ್ತಿಯಾಗಿದ್ದು, ಕಾಫಿ, ಹೈನುಗಾರಿಕೆ, ಬಿದಿರು, ತೋಟಗಾರಿಕಾ ಬೆಳೆಗಳು, ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಈ ಮಳಿಗೆಗಳಲ್ಲಿ ದೊರಕಲಿದೆ.

ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಮೀನುಗಾರಿಕಾ ಇಲಾಖೆ, ಪಶುಪಾಲನಾ ಇಲಾಖೆ, ಚೆಟ್ಟಳ್ಳಿಯ ತೋಟಗಾರಿಕಾ ಸಂಶೋಧನಾ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳು ಕೈಜೋಡಿಸಿವೆ. ಕಾಫಿ ದಸರಾದಲ್ಲಿ 6 ಮತ್ತು 7 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಳಿಗೆಗಳು ತೆರೆದಿರುತ್ತವೆ.

ರಾಜ್ಯ ಸರ್ಕಾರದ ಕೃಷಿ ಸಚಿವರಾದ ಚಲುವರಾಯಸ್ವಾಮಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಎಸ್ ಪೊನ್ನಣ್ಣ ರವರ ಉಪಸ್ಥಿತಿಯಲ್ಲಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

Leave A Reply

Your email address will not be published.