Madiekri: ಮಡಿಕೇರಿಯಲ್ಲಿ ಕೋಳಿ ವಿಷಯಕ್ಕೆ ಕೋಳಿ ಜಗಳ: ಏರ್ ಗನ್ ಎತ್ತಿ ಶೂಟ್!

Madikeri: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬರಿಗೆ ಏರ್ ಗನ್ ನಿಂದ(air gun) ಗುಂಡು ಹಾರಿಸಿ ಗಾಯಗೊಳಿಸಿದ ಘಟನೆ ಸುಂಟಿಕೊಪ್ಪ ವ್ಯಾಪ್ತಿಯ ಗದ್ದೆಹಳ್ಳದ ನಾರ್ಗಾಣೆ ಗ್ರಾಮದ ಗಿರಿಯಪ್ಪ ಮನೆ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ. ಗಿರಿಯಪ್ಪನ ಮನೆ ನಿವಾಸಿ ಸುಬ್ರಮಣಿ(45) ಗಾಯಗೊಂಡವರು‌.

 

ಗದ್ದೆಹಳ್ಳ ಗಿರಿಯಪ್ಪ ಮನೆ ನಿವಾಸಿ ಶ್ರೀರಾಮ್ ಎಂಬಾತನಿಗೆ ತಮ್ಮ ಮನೆಯ ಅನತಿ ದೂರದಲ್ಲಿರುವ ಸುಬ್ರಮಣಿ ಎಂಬಾತನೊಂದಿಗೆ ಕೋಳಿ ವಿಚಾರವಾಗಿ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ತಿರುಗಿದ್ದು, ಆಕ್ರೋಶಿತನಾದ ಶ್ರೀರಾಮ್ ತನ್ನ ಮನೆಯಲ್ಲಿ ಇರಿಸಿದ್ದ ಏರ್‌ಗನ್ ತಂದು ಏಕಾಏಕಿ ಸುಬ್ರಮಣಿಗೆ ಹೊಟ್ಟೆಯ ಭಾಗಕ್ಕೆ ಗುಂಡು ಹಾರಿಸಿದ್ದಾನೆ.

ಗಾಯಗೊಂಡಿದ್ದ ಸುಬ್ರಮಣಿಯನ್ನು ಕೂಡಲೇ ಸ್ಥಳೀಯರು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಸುಂಟಿಕೊಪ್ಪ ಪೊಲೀಸರು ಪ್ರಕರಣದ ಆರೋಪಿ ಶ್ರೀರಾಮ್‌ನನ್ನು ವಶಕ್ಕೆ ಪಡೆದುಕೊಂಡು ದೂರು ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.