ONGC Apprentice Recruitment 2024: ONGC ಅಪ್ರೆಂಟಿಸ್ ನೇಮಕಾತಿ 2024: 2337 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ!
ONGC Apprentice Recruitment 2024: ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣ ಅವಕಾಶ ಇಲ್ಲಿದೆ. ಹೌದು, ಆಯಿಲ್ ಅಂಡ್ ನೈಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ONGC Apprentice Recruitment 2024) ಅಪ್ರೆಂಟಿಸ್‌ಗಳ 2237 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ONGCಯ ಅಧಿಕೃತ ವೆಬ್‌ಸೈಟ್ ongcindia.com ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ:
ಉತ್ತರ ವಲಯ: 161 ಹುದ್ದೆಗಳು
ಮುಂಬೈ ವಲಯ: 310 ಹುದ್ದೆಗಳು
ಪಶ್ಚಿಮ ವಲಯ: 547 ಹುದ್ದೆಗಳು
ಪೂರ್ವ ವಲಯ: 583 ಹುದ್ದೆಗಳು
ದಕ್ಷಿಣ ವಲಯ: 335 ಹುದ್ದೆಗಳು
ಕೇಂದ್ರ ವಲಯ: 249 ಹುದ್ದೆಗಳು
ಅರ್ಹತಾ ಮಾನದಂಡಗಳು:
ಅಭ್ಯರ್ಥಿಗಳ ವಯಸ್ಸು 18 ರಿಂದ 24 ವರ್ಷಗಳ ಮಧ್ಯೆ ಇರಬೇಕು. ಅಂದರೆ ನಿಮ್ಮ ಜನನ ದಿನಾಂಕ 25 ಅಕ್ಟೋಬರ್ 2000 ರಿಂದ 25 ಅಕ್ಟೋಬರ್ 2006 ರ ನಡುವೆ ಇರಬೇಕು. ಶೈಕ್ಷಣಿಕ ಅರ್ಹತೆಯ ಕುರಿತು
ಆಯ್ಕೆ ಪ್ರಕ್ರಿಯೆ:
ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸಮಾನ ಅಂಕಗಳನ್ನು ಗಳಿಸಿದರೆ, ಹೆಚ್ಚಿನ ವಯಸ್ಸಿನ ಅಭ್ಯರ್ಥಿಗೆ ಆದ್ಯತೆ ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ದಿನಾಂಕ ಮತ್ತು ಸಮಯವನ್ನು ಪ್ರಕಟಿಸಲಾಗುತ್ತದೆ.
ಪ್ರಮುಖ ದಿನಾಂಕಗಳು:
ಅರ್ಜಿ ಪ್ರಾರಂಭ ದಿನಾಂಕ: 5 ಅಕ್ಟೋಬರ್ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25 ಅಕ್ಟೋಬರ್ 2024
ಅಂತಿಮ ಪ್ರಕಟಣೆ: 15 ನವೆಂಬರ್ 2024
ಸ್ಟೈಫಂಡ್:
ಆಯಿಲ್ ಅಂಡ್ ನೈಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ONGC) ತನ್ನ ಅಪ್ರೆಂಟಿಸ್‌ಗಳಿಗೆ ಸ್ಟೈಫಂಡ್ ಅನ್ನು ನೀಡುತ್ತದೆ, ಇದು ಅಪ್ರೆಂಟಿಸ್ ಕಾಯ್ದೆಯ ಅಡಿಯಲ್ಲಿ ನಿಗದಿಪಡಿಸಲಾಗಿದೆ. ನಿಮ್ಮ ಅರ್ಹತೆಗಳನ್ನು ಆಧರಿಸಿ ನಿಮಗೆ ವಿಭಿನ್ನ ಸ್ಟೈಫಂಡ್ ನೀಡಲಾಗುತ್ತದೆ.
ಅಪ್ರೆಂಟಿಸ್ ವರ್ಗ ಸ್ಟೈಫಂಡ್:
ಪದವಿ ಅಪ್ರೆಂಟಿಸ್ ₹9,000/-
ಡಿಪ್ಲೊಮಾ ಅಪ್ರೆಂಟಿಸ್ ₹8,050/-
ಟ್ರೇಡ್ ಅಪ್ರೆಂಟಿಸ್ (1) ₹7,000/-
ಟ್ರೇಡ್ ಅಪ್ರೆಂಟಿಸ್ (2) ₹7,700/-
ಟ್ರೇಡ್ ಅಪ್ರೆಂಟಿಸ್ (3) ₹8,050/-