Mysore Kingdom: ಮೈಸೂರು ಅರಮನೆಯಲ್ಲಿ ಸಂಭ್ರಮ, ಮಹಾರಾಜರಿಗೆ ಇನ್ಮುಂದೆ ಇರೋಲ್ಲಾ ಅಲಮೇಲ್ಲಮ್ಮನ ಶಾಪ ?! ಕಾರಣ ಹೀಗಿದೆ
Mysore Kingdom: ಮೈಸೂರು ಮಹಾರಾಜರಿಗೆ ಅಲಮೇಲಮ್ಮನ(Alamelamma)ಶಾಪವಿದೆ, ಈ ಶಾಪದಿಂದಲೇ ಅವರಿಗೆ ಮಕ್ಕಳಾಗುವುದಿಲ್ಲ ಎಂಬುದು ಜಗಜ್ಜನಿತವಾದ ಮಾತು. ಇದು ನಿಜವೆಂಬುದಕ್ಕೆ ಹಲವು ನಿದರ್ಶನಗಳನ್ನು ನಾವು ರಾಜಮನೆತನಗಳಲ್ಲಿ ನೋಡಬಹುದು. ಆದರೀಗ ಇನ್ಮುಂದೆ ಮೈಸೂರು ಮಹಾರಾಜರಿಗೆ ಈ ಶಾಪ ಇರೋದಿಲ್ಲ ಎಂದು ಹೇಳಲಾಗುತ್ತಿದೆ. ಅದಕ್ಕೆ ಕಾರಣ ಹೀಗಿದೆ ನೋಡಿ.
ಹೌದು, ʼʼಮೈಸೂರು ಅರಸರಿಗೆ(Mysore Kingdom ) ಮಕ್ಕಳಾಗದಿರಲಿ” ಅನ್ನುವುದು ಶಾಪದ ನುಡಿ. ಅದು ಇಲ್ಲಿಯವರೆಗೂ ಸುಳ್ಳಾದುದೇ ಇಲ್ಲ. ಅದಕ್ಕಾಗಿಯೇ ಇಲ್ಲಿ ಸಂತಾನವಿಲ್ಲದ ತಲೆಮಾರಿನಲ್ಲಿ ದತ್ತು ತೆಗೆದುಕೊಳ್ಳಲಾಗುತ್ತದೆ. ಆದರೆ ಅರಮನೆಯಲ್ಲಿಯೇ ಜನಿಸಿದ ಮಕ್ಕಳಿಗೆ ಮಕ್ಕಳಾಗುವುದಿಲ್ಲ. ಅಂದರೆ, ಈ ಹಿಂದಿನ ಶ್ರೀಕಂಠದತ್ತ ಅರಸಿಂಹರಾಜ ಒಡೆಯರ್ ಅವರು ಸ್ವತಃ ಅರಮನೆಯಲ್ಲೇ ಜನಿಸಿದ ಕುಡಿ. ಅವರಿಗೆ ಮಕ್ಕಳಾಗಲಿಲ್ಲ. ಅದಕ್ಕಾಗಿಯೇ ಯದುವೀರರನ್ನು ದತ್ತು ತೆಗೆದುಕೊಳ್ಳಲಾಯಿತ. ದತ್ತುಮಕ್ಕಳಿಗೆ ಮಕ್ಕಳಾಗದಿರಲಿ ಎಂದೇನೂ ಅಲಮೇಲಮ್ಮನ ಶಾಪ ಇಲ್ಲವಲ್ಲ? ಹೀಗಾಗಿ ಯದುವೀರರಿಗೆ ಮಕ್ಕಳಾಗಲು ಯಾವ ಅಭ್ಯಂತರವೂ ಇಲ್ಲ. ಆದರೀಗ ಈ ಶಾಪ ಮುಂದಿನ ರಾಜ ಪೀಳಿಗೆಗೆ ಇರುವುದಿಲ್ಲವೇನೋ? ಎಂಬ ಗುಮಾನಿ ಮೂಡಿದೆ. ಕಾರಣವೇನೆಂದರೆ ಯದುವೀರ್ ಅವರ ಪತ್ನಿ, ಮೈಸೂರು ಮಹಾರಾಣಿ ತ್ರಿಷಿಕಾ ಈಗ ಮತ್ತೆ ಗರ್ಭಿಣಿಯಾಗಿದ್ದಾರೆ.
ಯಸ್, ಮೈಸೂರು ಸಂಸದ ಯದುವೀರ ಶ್ರೀಕಂಠದತ್ತ ಒಡೆಯರ್ ವೈಭವದ ಖಾಸಗಿ ದರ್ಬಾರ್ ನಡೆಸಿಕೊಟ್ಟಿದ್ದಾರೆ. ಈ ವೇಳೆ ಗಮನ ಸೆಳೆದ ವಿಷಯ ಅಂದ್ರೆ ರಾಣಿ ತ್ರಿಶಿಕಾ ಕುಮಾರಿ. ಎಲ್ಲ ಅಲಂಕಾರ ಮಾಡಿಕೊಂಡಿದ್ದ ತ್ರಿಶಿಕಾ ಕುಮಾರಿ, ಹೊಟ್ಟೆಯನ್ನು ಮಾತ್ರ ಕವರ್ ಮಾಡಿಕೊಂಡಿದ್ದರು. ಸ್ವಲ್ಪ ಗಮನಿಸಿದರೆ, ತ್ರಿಶಿಕಾ ಕುಮಾರಿ ಮತ್ತೆ ಗರ್ಭಿಣಿಯಾಗಿದ್ದಾರೆ ಎಂದು ಎಂಥವರೂ ಹೇಳಬಹುದಾಗಿತ್ತು.
ಇದು ಸಾಮಾನ್ಯರಿಗೆ ಅಚ್ಚರಿ ಅನಿಸದಿದ್ದರೂ ಮೈಸೂರು ಮನೆತನದ ಇತಿಹಾಸ ತಿಳಿದವರಿಗೆ ಖಂಡಿತವಾಗಿಯೂ ಅಚ್ಚರಿ ಅನಿಸುತ್ತೆ. ಯಾಕೆಂದರೆ ಯಾಕೆಂದರೆ ಇಬ್ಬಿಬ್ಬರು ಮಕ್ಕಳನ್ನು ಯಾವ ರಾಜರೂ ಇದುವರೆಗೆ ಹೊಂದಿಲ್ಲ. ಅರಮನೆಯ ಹಿಂದಿನ ಹಿಸ್ಟರಿ ತೆಗೆದು ನೋಡಿದರೆ, ಎಲ್ಲ ಒಂದೊಂದೇ ಮಕ್ಕಳು. ಎರಡು ಮಕ್ಕಳು ಇರುವುದು ಅತ್ಯಪರೂಪ. ಯದುವೀರರಿಗೆ ಈಗಾಗಲೇ ಮುಂದಿನ ಅರಸು ಕುಡಿ ಆದ್ಯವೀರನ ರೂಪದಲ್ಲಿ ಬಂದಾಗಿದೆ. ಆದರೂ ಇನ್ನೊಂದು ಮಗು- ಹೆಣ್ಣಾದರೆ ಒಳ್ಳೆಯದು, ಇರಲಿ- ಅಂತ ಅಂದುಕೊಂಡಿರಬಹುದೋ ಏನೋ. ಒಟ್ಟಿನಲ್ಲಿ ಇದನ್ನು ಗಮನಿಸಿದರೆ ಅಲಮೇಲಮ್ಮನ ಶಾಪ ನಿಂತಿತೋ ಎಂದು ಜನ ಮಾತನಾಡುತ್ತಿದ್ದಾರೆ.
ಅರಮನೆಗೆ ಆಪ್ತರಾದ ಜ್ಯೋತಿಷಿಗಳೊಬ್ಬರು ಈ ಬಗ್ಗೆ ಮಾತನಾಡಿ ‘ಮುಂದಿನ ತಲೆಮಾರಿನಲ್ಲಿ, ಒಬ್ಬರಲ್ಲಾ ಒಬ್ಬ ಮಕ್ಕಳಿಗೆ ಮಕ್ಕಳು ಆಗುವ ಚಾನ್ಸ್ ಇದ್ದೇ ಇರುತ್ತದಲ್ಲವೇ? ಒಂದು ವೇಳೆ ಪಟ್ಟವೇರಿದವರಿಗೆ ಮಗುವಾಗಲಿಲ್ಲ ಎಂದಿಟ್ಟುಕೊಂಡರೂ, ಇನ್ನೊಬ್ಬರಿಗೆ ಆಗಲೇಬೇಕಲ್ಲವೇ? ಇಂಥ ಲೆಕ್ಕಾಚಾರದಿಂದಲೇ ಎರಡನೇ ಮಗು ಜನಿಸಲಿದೆ’ ಎಂದಿದ್ದಾರೆ.