Ashwini puneeth rajkumar: ಇನ್ನು ಮುಂದೆ ಈ ವಿಷಯದಲ್ಲಿ ಸಂಪೂರ್ಣ ನಿರ್ಧಾರ ನನ್ನದು! ಅಶ್ವಿನಿ ಪುನೀತ್ ರಾಜ್‌ಕುಮಾರ್

Ashwini puneeth rajkumar: ಇನ್ನು ಮುಂದೆ ಸಿನಿಮಾ ವಿಷಯದಲ್ಲಿ ಸಂಪೂರ್ಣ ನಿರ್ಧಾರ ನನ್ನದು ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini puneeth rajkumar) ತಮ್ಮ ಜವಾಬ್ದಾರಿ ಕುರಿತು ಹೇಳಿದ್ದಾರೆ. ಹೌದು, ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಡಾ. ಪುನೀತ್ ರಾಜ್‌ಕುಮಾರ್ ಮರಣ ನಂತರ ಅವರು ನಡೆಸಿಕೊಂಡು ಬಂದಿರುವ ಕೆಲಸಗಳನ್ನು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

 

ಈಗಾಗಲೇ ‘ನಾನು ಸಿಕ್ಕಾಪಟ್ಟೆ ಬ್ಯುಸಿಯಾಗಿರುವೆ..ಬ್ಯುಸಿಯಾಗಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಏಕೆಂದರೆ ಒಂದಲ್ಲ ಒಂದು ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತೀನಿ’ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದಾರೆ. ‘ಪ್ರಸ್ತುತ ಪ್ರತಿ ದಿನವೂ ಹೊಸತನ ಕಲಿಯುತ್ತೀನಿ ಹೊಸ ಚಾಲೆಂಜ್‌ಗಳನ್ನು ಎದುರಿಸುತ್ತೀನಿ. ನಿಜ ಹೇಳಬೇಕು ಅಂದರೆ , ನನ್ನ ಕೆಲಸವನ್ನು ನಾನು ಎಂಜಾಯ್ ಮಾಡುತ್ತಿರುವೆ. ಈಗ ಜೀವನ ಒಳ್ಳೆಯ ಹಂತದಲ್ಲಿದೆ’ ಎಂದು ಸಂದರ್ಶನದಲ್ಲಿ ಅಶ್ವಿನಿ ಮಾತನಾಡಿದ್ದಾರೆ.

ಇದುವರೆಗೂ ಪಿಆರ್‌ಕೆ ಸಂಸ್ಥೆ ನಿರ್ಮಾಣ ಮಾಡಿರುವ ಪ್ರತಿಯೊಂದು ಚಿತ್ರಕ್ಕೂ ಅಪ್ಪು ಒಪ್ಪಿಗೆ ಮತ್ತು ಪ್ಲ್ಯಾನ್ ಇತ್ತಂತೆ. ಕಳೆದ ಎರಡು ವರ್ಷಗಳಿಂದ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಲು ಧೈರ್ಯ ಹೆಚ್ಚಾಗಿದೆ ಎಂದಿದ್ದಾರೆ. ‘ಈಗ ನಾವು ನಮ್ಮ ಬ್ಯಾನರ್‌ನಲ್ಲಿ ಬರಲಿರುವ ದೊಡ್ಡ ಬಜೆಟ್ ಕಮರ್ಷಿಯಲ್ ಚಿತ್ರಕ್ಕೆ ಪ್ಲ್ಯಾನ್ ನಡೆಯುತ್ತಿದೆ. ಈ ನಿರ್ಧಾರದ ಬಗ್ಗೆ ಖುಷಿ ಇದೆ ಆದರೆ ಅಷ್ಟೇ ಚಿಂತೆ ಇದೆ ಏಕೆಂದರೆ ಪ್ರತಿ ಹಂತದಲ್ಲೂ ನಿರ್ಧಾರ ತೆಗೆದುಕೊಳ್ಳುವುದು ತುಂಬಾ ಕಷ್ಟವಿದೆ’ ಎಂದಿದ್ದಾರೆ ಅಶ್ವಿನಿ.

‘ಮೊದಲ ದಿನದಿಂದ ನಮ್ಮೊಟ್ಟಿಗೆ ಕೆಲಸ ಮಾಡುತ್ತಿರುವವರೂ ಈಗಲೂ ಇದ್ದಾರೆ ಆದರೆ ಅಂತಿಮ ನಿರ್ಧಾರ ನನ್ನ ಕೈಯಲ್ಲಿ ಇರುವ ಕಾರಣ ಅದೊಂದು ದೊಡ್ಡ ಚಾಲೆಂಜ್ ಆಗಲಿದೆ. ಇದುವರೆಗೂ ರಿಲೀಸ್ ಆಗಿರುವ ಸಿನಿಮಾಗಳ ನಿರ್ಧಾರವನ್ನು ಅಪ್ಪು ತೆಗೆದುಕೊಂಡಿದ್ದರು. ಇನ್ನು ಮುಂದೆ ರಿಲೀಸ್ ಆಗಲಿರುವ ಸಿನಿಮಾಗಳ ನಿರ್ಧಾರವನ್ನು ನಾನು ತೆಗೆದುಕೊಳ್ಳುತ್ತಿರುವೆ. ಸದ್ಯಕ್ಕೆ ಯುವ ಚಿತ್ರದ ತಯಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮಾಡಲು ಒಳ್ಳೆಯ ಕಥೆಗಳನ್ನು ಹುಡುಕುತ್ತಿರುವೆ, ವಾರದಲ್ಲಿ ಮೂರ್ನಾಲ್ಕು ಕಥೆಗಳನ್ನು ಕೇಳುತ್ತಿರುವೆ…ವರ್ಷದಲ್ಲಿ ಎರಡು ಮೂರು ಸಿನಿಮಾ ರಿಲೀಸ್ ಮಾಡಬೇಕು ಅನ್ನೋ ನನ್ನ ಆಸೆ’ ಎಂದು ಅಶ್ವಿನಿ ಪುನೀತ್ ಹೇಳಿಕೊಂಡಿದ್ದಾರೆ.

Leave A Reply

Your email address will not be published.