Dasara Holidays: ಶಾಲಾ ಮಕ್ಕಳ ದಸರಾ ರಜೆ ಕಡಿತ !!

Share the Article

Dasara Holidays: ಅಕ್ಟೋಬರ್ 3ರಿಂದ 20 ರ ವರೆಗೆ ಕರ್ನಾಟಕದಾದ್ಯಂತ ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹೀಗಾಗಿ ರಾಜ್ಯದಾದ್ಯಂತ ಶಾಲೆ ಮಕ್ಕಳಿಗೆ ದಸರಾ ರಜೆಯ(Dasara Holidays) ಸಂಭ್ರಮ. ಆದರೆ ಈ ಸಂಭ್ರಮ ಬರೀ ಸರ್ಕಾರಿ ಶಾಲೆಗಳ ಮಕ್ಕಳಿಗೆ ಮಾತ್ರ. ಖಾಸಗಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಈ ಸಂತಸ ಇಲ್ಲ. ಇದಕ್ಕೆ ಕಾರಣ ಖಾಸಗಿ ಮತ್ತು ಅನುದಾನಿತ ಶಾಲೆಗಳು ರಜೆಯಲ್ಲಿ ಕಡಿತ ಮಾಡುತ್ತಿದೆ.

ಹೌದು, ರಾಜ್ಯದಲ್ಲಿ ಕೆಲವು ಖಾಸಗಿ ಶಾಲೆಗಳು ಮಕ್ಕಳಿಗೆ ದಸರಾ ರಜೆಯನ್ನು ಕಡಿತಗೊಳಿಸಿವೆ. ಹೀಗಾಗಿ ದಸರಾ ರಜೆಗೆ ಸಂಬಂಧಿಸಿದಂತೆ ಕೆಲವು ಖಾಸಗಿ ಶಾಲೆಗಳು ಸರ್ಕಾರಿ ಶೈಕ್ಷಣಿಕ ಕ್ಯಾಲೆಂಡರ್‌ಗೆ ಬದ್ಧವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಸೋಸಿಯೇಟೆಡ್ ಮ್ಯಾನೇಜ್​ಮೆಂಟ್ ಆಫ್ ಪ್ರೈಮರಿ ಆಯಂಡ್ ಸೆಕೆಂಡರಿ ಸ್ಕೂಲ್ಸ್, ರಜೆಯನ್ನು ನಿರ್ಧರಿಸುವ ವಿವೇಚನಾ ಅಧಿಕಾರವನ್ನು ಖಾಸಗಿ ಶಾಲೆಗಳು ಹೊಂದಿವೆ ಎಂದಿದೆ. ಕ್ರಿಸ್‌ಮಸ್ ನಿಮಿತ್ತ ಡಿಸೆಂಬರ್‌ನಲ್ಲಿ ಮತ್ತೆ ರಜೆ ಘೋಷಿಸಬೇಕಾಗಿರುವುದರಿಂದ ಖಾಸಗಿ ಶಾಲೆಗಳು ದಸರಾ ರಜೆಯನ್ನು ಕಡಿತಗೊಳಿಸಿವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಅಲ್ಲದೆ ಕ್ರಿಸ್‌ಮಸ್ ಸಮಯದಲ್ಲಿ ನಾವು ಖಾಸಗಿ ಶಾಲೆಗಳಿಗೆ ಕನಿಷ್ಠ ಒಂದು ವಾರ ರಜೆ ಘೋಷಿಸಬೇಕು. ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಕ್ರಿಸ್‌ಮಸ್ ಸಮಯದಲ್ಲಿ ರಜೆ ನೀಡುವುದಿಲ್ಲ. ಈ ಕಾರಣದಿಂದ ನಾವು ದಸರಾ ರಜೆಯಲ್ಲಿ ಕಡಿತ ಮಾಡುತ್ತೇವೆ. ಇದು ನಮ್ಮ ವಿವೇಚನೆಯಾಗಿದೆ ಎಂದು ಅವರು ಹೇಳಿದ್ದಾರೆ.

Leave A Reply