Car Driving Tricks: ಕಾರ್ ನಿಲ್ಲಿಸುವಾಗ ಕ್ಲಚ್, ಬ್ರೇಕ್ ಯೂಸ್ ಮಾಡ್ತೀರಾ ಓಕೆ, ಆದ್ರೆ ಎಂಜಿನ್ ಬ್ರೇಕ್ ಯೂಸ್ ಮಾಡೋದು ಹೇಗೆ?
Car Driving Tricks: ಕಾರು ಓಡಿಸುವುದರಲ್ಲಿ ಇಂದು ಯುವಕ, ಯುವತಿಯರೆಲ್ಲರೂ ಪರಿಣತರಾಗಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರಿಗೆ ಕೆಲವು ಟ್ರಿಕ್ಸ್ ಗಳು ಗೊತ್ತೇ ಇರುವುದಿಲ್ಲ. ಒಟ್ಟಾರೆ ಕಾರು ಬಿಡುವುದು ಎಂದು ಮಾತ್ರ ತಿಳಿದಿರುತ್ತಾರೆ. ಕಾರ್ ನಿಲ್ಲಿಸುವಾಗ ಯಾವ ಸಂದರ್ಭದಲ್ಲಿ ಹೇಗೆ ಬ್ರೇಕ್ ಹಾಕಬೇಕು? ಪೆಟ್ರೋಲ್ ಉಳಿಸಲು ಯಾವ ಟ್ರಿಕ್ಸ್ ಯೂಸ್ ಮಾಡಬೇಕು ಎಂದು ಅವರು ತಿಳಿದಿರುವುದೇ ಇಲ್ಲ. ಹೀಗಾಗಿ ಕಾರ್ ನಿಲ್ಲಿಸಲು ಯಾವೆಲ್ಲಾ ರೀತಿ ಬ್ರೇಕ್ ಯೂಸ್ ಮಾಡಬೇಕೆಂದು ನಾವಿಲ್ಲಿ ತಿಳಿಸಿಕೊಡುತ್ತೇವೆ.
ನಿಧಾನವಾಗಿದ್ದರೆ ಮೊದಲು ಕ್ಲಚ್ ಒತ್ತಿ:
ನಿಮ್ಮ ಕಾರಿನ ವೇಗ ಕಡಿಮೆಯಿದ್ದರೆ, ಮೊದಲು ನೀವು ಕ್ಲಚ್ ಅನ್ನು ಒತ್ತಿ ಮತ್ತು ನಂತರ ಬ್ರೇಕ್ ಅನ್ನು ಬಳಸಬೇಕು. ಇದರಿಂದ ಎಂಜಿನ್ ನಿಲ್ಲುವುದಿಲ್ಲ ಮತ್ತು ವಾಹನಕ್ಕೆ ಯಾವುದೆ ಅಡಚಣೆಯಾಗದೆ ನಿಧಾನವಾಗಿ ನಿಲ್ಲುತ್ತದೆ.
ಹೆಚ್ಚಿನ ವೇಗದಲ್ಲಿ ಬ್ರೇಕ್:
ನಿಮ್ಮ ಕಾರು ವೇಗವಾಗಿ ಚಲಿಸುತ್ತಿದ್ದರೆ ಮೊದಲು ಕಾರಿನ ವೇಗವನ್ನು ಕಡಿಮೆ ಮಾಡಲು ಬ್ರೇಕ್ ಅನ್ನು ಒತ್ತಿ ಮತ್ತು ನಂತರ ಕ್ಲಚ್ ಬಳಸಿ.ಆಗ ಎಂಜಿನ್ ವೇಗ ಮತ್ತು ವಾಹನದ ವೇಗವು ಸಮಾನವಾಗಿರುತ್ತದೆ, ಇದು ನಿಮ್ಮ ಪೆಟ್ರೋಲ್ ಅನ್ನು ಉಳಿಸುತ್ತದೆ ಮತ್ತು ವಾಹನದ ಜೀವನವನ್ನು ಹೆಚ್ಚಿಸುತ್ತದೆ.
ಎಂಜಿನ್ ಬ್ರೇಕಿಂಗ್ನ ಉಪಯೋಗ:
ರಸ್ತೆ ಖಾಲಿಯಾಗಿರುವಾಗ ನೀವು ನಿಧಾನಗೊಳಿಸಲು ಬಯಸಿದರೆ, ಗೇರ್ ಉಪಯೋಗಿಸಿ. ಅಂದರೆ 4 ರಿಂದ 3 ನೇ ಗೇರ್‌ಗೆ ಬದಲಾಯಿಸಿ ವೇಗ ಕಡಿಮೆ ಮಾಡಿ. ಇದನ್ನು ಎಂಜಿನ್ ಬ್ರೇಕಿಂಗ್ ಎಂದು ಕರೆಯಲಾಗುತ್ತದೆ ಮತ್ತು ಇದು ಇಂಧನ ಬಳಕೆಯನ್ನು ಕಡಿಮೆ ಮಾಡುತ್ತದೆ.