Udupi: ಉಡುಪಿಯಲ್ಲೊಂದು ದಾರುಣ ಘಟನೆ; ಕಲುಷಿತ ನೀರು ಸೇವನೆ 1000ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Udupi: ಕಲುಷಿತ ನೀರು ಸೇವನೆ ಮಾಡಿ 1000ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪಂದ ಗ್ರಾಮ ಪಂಚಾಯತ್‌ನಲ್ಲಿ ಈ ಘಟನೆ ನಡೆದಿದ್ದು, ಕರ್ಕಿಹಳ್ಳಿ ಹಾಗೂ ಮೆಡಿಕಲ್‌ ಗ್ರಾಮದ ಜನ ಅಸ್ವಸ್ಥಗೊಂಡಿದ್ದಾರೆ.

 

ಕರ್ಕಿಹಳ್ಳಿಯಲ್ಲಿ ಸುಮಾರು 500 ಮಂದಿ ಹಾಗೂ ಮೆಡಿಕಲ್‌ನಲ್ಲಿ 600 ಜನ ಅಸ್ವಸ್ಥಗೊಂಡಿದ್ದು, ಈ ಘಟನೆಯಲ್ಲಿ 80ವರ್ಷದ ವೃದ್ಧರೊಬ್ಬರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ. ಇವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಘಟನೆಯಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.

ಟ್ಯಾಂಕ್‌ನಿಂದ ಪೂರೈಕೆಗೊಂಡ ಕಲುಷಿತ ನೀತು ಸೇವಿಸಿ ಜನರು ಅಸ್ವಸ್ಥರಾಗಿರುವುದಾಗಿ ವರದಿಯಾಗಿದೆ.

Leave A Reply

Your email address will not be published.