Renukaswamy Murder Case: ನ್ಯಾಯಾಂಗ ಬಂಧನ ವಿಸ್ತರಣೆಯಾದರೆ ದರ್ಶನ್‌ ಬೆಂಗಳೂರಿಗೆ ಶಿಫ್ಟ್‌ ಸಾಧ್ಯತೆ!

Share the Article

Renukaswamy Murder Case: ದರ್ಶನ್‌ ಮತ್ತು ಗ್ಯಾಂಗ್‌ನಿಂದ ಬರ್ಬರವಾಗಿ ಹತ್ಯೆಗೊಂಡ ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಇವರ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಇದರ ಜೊತೆಗೆ ನ್ಯಾಯಾಂಗ ಬಂಧನದ ಅವಧಿ ಕೂಡಾ ಇಂದು ಪೂರ್ಣಗೊಳ್ಳಲಿದ್ದು, ಇಂದು ಕೂಡಾ ನ್ಯಾಯಾಂಗ ಬಂಧನ ವಿಸ್ತರಣೆಗೊಂಡರೆ ದರ್ಶನ್‌ ಬೆಂಗಳೂರಿಗೆ ಶಿಫ್ಟ್‌ ಆಗೋ ಸಾಧ್ಯತೆ ಇದೆ ಎನ್ನಲಾಗಿದೆ.

ದರ್ಶನ್‌ಗೆ ಈಗಾಗಲೇ ಬೆನ್ನುನೋವಿನ ಸಮಸ್ಯೆ ಉಂಟಾಗಿದ್ದು, ಬೆನ್ನಿನಲ್ಲಿ ಊತವಿದ್ದು, ವಿಮ್ಸ್‌ ವೈದ್ಯರು ಸ್ಕ್ಯಾನಿಂಗ್‌ ಸಲಹೆ ನೀಡಿದ್ದಾರೆ. ಆದರೆ ದರ್ಶನ್‌ ಅವರು ಬೆಂಗಳೂರಿನಲ್ಲಿಯೇ ತಪಾಸಣೆ ಮಾಡುವುದಾಗಿ ಹಠ ಹಿಡಿದಿದ್ದು, ಸದ್ಯಕ್ಕೆ ನೋವು ನಿವಾರಕ ಮಾತ್ರೆ ಕೊಡಿ ಎಂದು ದರ್ಶನ್‌ ಹೇಳಿದ್ದಾರೆ.

ಬೆನ್ನುಊತವೇನಾದರೂ ಹೆಚ್ಚಾದರರೆ ತೊಂದರೆ ಉಂಟಾಗಬಹುದು ಎಂದು ವಿಮ್ಸ್‌ ವೈದ್ಯರು ಹೇಳಿದ್ದು, 4-5 ದಿನಗಳಲ್ಲಿ ಬೆಂಗಳೂರಿಗೆ ಹೋಗುತ್ತೇನೆ ಎಂದು ದರ್ಶನ್‌ ಭರವಸೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಇಂದು ಜಾಮೀನು ವಿಚಾರಣೆ ಸಂದರ್ಭದಲ್ಲಿ ಜಾಮೀನು ಸಿಗದೆ ಹೋದರೆ ಅನಾರೋಗ್ಯದ ಕಾರಣ ನೀಡಿ ತಮ್ಮನ್ನು ಶಿಫ್ಟ್‌ ಮಾಡುವಂತೆ ಕೋರಿಕೆಯನ್ನು ಕೋರ್ಟ್‌ಮುಂದೆ ಇಡಬಹುದು ಎನ್ನಲಾಗಿದೆ.

Leave A Reply

Your email address will not be published.