Bigg Boss: ಬಿಗ್ ಬಾಸ್ ಮನೆಯಿಂದ ಮಧ್ಯರಾತ್ರಿ ಎಲಿಮಿನೇಟ್!

Bigg Boss: ಬಿಗ್‌ ಬಾಸ್‌ ಕನ್ನಡ ಸೀಸನ್ 11 ರ ಹವಾ ಜೋರಾಗಿಯೇ ಇದೆ. ಅಂತೆಯೇ ತೆಲುಗು ಬಿಗ್ ಬಾಸ್ (Bigg Boss)ಸೀಸನ್ 8 ರಲ್ಲಿ ಕನ್ನಡಿಗರು ಕೂಡಾ ಇದ್ದಾರೆ. ಸದ್ಯ ತೆಲುಗು ಬಿಗ್ ಬಾಸ್ ಶೋ ಇದೀಗ ಐದನೇ ವಾರದಲ್ಲಿ ಮಧ್ಯ ವಾರದ ಎಲಿಮಿನೇಷನ್ ಗೆ ರೆಡಿಯಾಗಿದೆ.

 

ಹೌದು, ನಿರೂಪಕ ನಾಗಾರ್ಜುನ ಅವರು ಕಳೆದ ವಾರದ ವಾರಾಂತ್ಯದ ಸಂಚಿಕೆಯಲ್ಲಿ ಈ ವಾರದ ಮಧ್ಯಭಾಗದಲ್ಲಿ ಸ್ಪರ್ಧಿಯೊಬ್ಬರು ಮನೆಯಿಂದ ಹೊರ ಹೋಗಬೇಕಾಗುತ್ತದೆ ಎಂದು ಪ್ರೇಕ್ಷಕರಿಗೆ ಹೇಳಿದ್ದರು. ಅಲ್ಲದೆ, ಈ ವಾರದ ಕೊನೆಯಲ್ಲಿ ಒಟ್ಟು 8 ವೈಲ್ಡ್ ಕಾರ್ಡ್ ಎಂಟ್ರಿ ಇವೆ. ಸದ್ಯ ಈಗ ಎಲಿಮಿನೆಟ್ ಯಾರು ಆಗ್ತಾರೆ ಅನ್ನೋದು ವೀಕ್ಷಕರಿಗೆ ದೊಡ್ಡ ಕುತೂಹಲಕ್ಕೆ ತೆರೆ ಬಿದ್ದಿದೆ.

ಇತ್ತೀಚಿಗೆ ಹೊಸದಾಗಿ ಬಿಡುಗಡೆಯಾದ ಎರಡನೇ ಪ್ರೋಮೋದಲ್ಲಿ, ಬಿಗ್ ಬಾಸ್ ಮಧ್ಯರಾತ್ರಿ ಎಲಿಮಿನೆಷನ್‌ ಎಚ್ಚರಿಸಿದ್ದಾರು, ಇಂದು ರಾತ್ರಿ ನಿಮ್ಮಲ್ಲಿ ಒಬ್ಬರು ಮನೆಯಿಂದ ಹೊರ ಹೋಗಲಿದ್ದಾರೆ ಎಂದು ಬಿಗ್ ಬಾಸ್ ಘೋಷಿಸಿದ್ದು, ಅದಾದ ನಂತರ ಬಿಗ್ ಬಾಸ್ ನಾಮಿನೇಷನ್ ನಲ್ಲಿರುವ ಆರು ಜನರಲ್ಲಿ ಕೊನೆಯ ಮೂವರಿಗೆ ನಿಮ್ಮ ಬ್ಯಾಗ್ ಗಳನ್ನೆಲ್ಲಾ ಪ್ಯಾಕ್ ಮಾಡಿ ಮನೆಯ ಸದಸ್ಯರಿಗೆ ವಿದಾಯ ಹೇಳಿ ರೆಡಿಯಾಗಿರಿ ಎಂದು ಹೇಳಲಾಗಿತ್ತು.

ಇದೀಗ ಆದಿತ್ಯ ಓಂ ಎಂದು ಬಿಗ್ ಬಾಸ್ ಎಲಿಮಿನೇಟ್ ಆಗುವ ಸ್ಪರ್ಧಿ ಎಂದು ಘೋಷಿಸಿದ್ದಾರೆ. ಹಾಗಾಗಿ ಆದಿತ್ಯ ಓಂ ಎಲಿಮಿನೇಟ್ ಆದರು. ಆದಿತ್ಯ ಓಂ ಎಲ್ಲರಿಗೂ ವಿದಾಯ ಹೇಳಿ ಮನೆಯಿಂದ ನಿರ್ಗಮಿಸಿದ್ದಾರೆ.

Leave A Reply

Your email address will not be published.