Facebook: ಇನ್ಮುಂದೆ Facebook ನಲ್ಲಿ ರೀಲ್ಸ್ ಹಾಕಿ ಸುಲಭವಾಗಿ ಆದಾಯ ಪಡೆಯಲು ಸಾಧ್ಯ! ಇಲ್ಲಿದೆ ನೋಡಿ ಮಾಹಿತಿ
Facebook: ಸೋಷಿಯಲ್ಇ ಮೀಡಿಯಾ ಮೂಲಕ ಜನರು ಹೆಚ್ಚು ಹೆಚ್ಚು ಗಳಿಸಲು ನಾನಾ ವಿಧಾನಗಳಿವೆ. ಅಂತೆಯೇ ಇನ್ಮುಂದೆ Facebook ನಲ್ಲಿ ರೀಲ್ಸ್ ಹಾಕಿ ಸುಲಭವಾಗಿ ಹೆಚ್ಚು ಆದಾಯ ಪಡೆಯಲು ಸಾಧ್ಯವಿದೆ. ಹೌದು, ಫೇಸ್‌ಬುಕ್‌ನಲ್ಲಿ ಹಣ ಸಂಪಾದಿಸುವ ವಿಧಾನವನ್ನು ಮೆಟಾ ಬದಲಾಯಿಸುತ್ತಿದೆ. ಈಗ, ಕ್ರಿಯೇಟರ್ಸ್ ಮೂರು ವಿಭಿನ್ನ ರೀತಿಯಲ್ಲಿ ಹಣ ಗಳಿಸುವ ಅಗತ್ಯವಿಲ್ಲ. ಕಂಪನಿಯು ಈ ಮೂರು ವಿಧಾನಗಳನ್ನು ಒಟ್ಟಾಗಿ ಸಂಯೋಜಿಸುತ್ತಿದೆ.
ಈ ಹಿಂದೆ, ಇನ್-ಸ್ಟ್ರೀಮ್ ಜಾಹೀರಾತುಗಳು,ರೀಲ್‌ಗಳಲ್ಲಿನ ಜಾಹೀರಾತುಗಳು ಮತ್ತು ಕಾರ್ಯಕ್ಷಮತೆಯ ಬೋನಸ್‌ಗಳ ಮೂಲಕ ಹಣ ಗಳಿಸಲು ಕ್ರಿಯೇಟರ್ಸ್ ಪ್ರತ್ಯೇಕವಾಗಿ ಮನವಿ ಸಲ್ಲಿಸಬೇಕಾಗಿತ್ತು. ಆದರೆ ಈಗ ಒಮ್ಮೆ ಮಾತ್ರ ಮನವಿ ಸಲ್ಲಿಸಿದರೆ ಸಾಕು.
ಇನ್ನು ಹೊಸ ವಿಧಾನವು ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತದೆ. ಕ್ರಿಯೇಟರ್ಸ್ ತಮ್ಮ ರೀಲ್‌ಗಳಲ್ಲಿನ ಜಾಹೀರಾತುಗಳು, ದೀರ್ಘ ವೀಡಿಯೊಗಳು, ಫೋಟೋಗಳು ಮತ್ತು ಪೋಸ್ಟ್‌ಗಳಿಂದ ಹಣವನ್ನು ಗಳಿಸುತ್ತಾರೆ. ಹೆಚ್ಚುವರಿಯಾಗಿ, Meta ಕ್ರಿಯೇಟರ್ಸ್ ತಮ್ಮ ರೀಲ್‌ಗಳು, ವೀಡಿಯೊಗಳು, ಫೋಟೋಗಳು ಮತ್ತು ಪೋಸ್ಟ್‌ಗಳಿಂದ ಎಷ್ಟು ಗಳಿಸುತ್ತಿದ್ದಾರೆ ಎಂಬುದನ್ನು ನೋಡಲು ಹೊಸ ಸಾಧನವನ್ನು ನೀಡುತ್ತದೆ. ಯಾವ ವೀಡಿಯೊಗಳು ಮತ್ತು ಪೋಸ್ಟ್‌ಗಳು ಹೆಚ್ಚು ಹಣವನ್ನು ಗಳಿಸುತ್ತಿವೆ ಎಂಬುದನ್ನು ಇದು ಕ್ರಿಯೇಟರ್ಸ್ ಗೆ ತಿಳಿಸುತ್ತದೆ.
ಹಾಗಿದ್ರೆ, ಅರ್ಜಿ ಸಲ್ಲಿಸುವುದು ಹೇಗೆ ಎಂದು ಇಲ್ಲಿ ತಿಳಿಸಲಾಗಿದೆ. ಸದ್ಯ ಹೊಸ ವಿಧಾನವು ಪ್ರಸ್ತುತ ಪ್ರಯೋಗದಲ್ಲಿದೆ. ಈ ವಾರ ಈ ಪ್ರಯೋಗಕ್ಕೆ ಸೇರಲು 10 ಲಕ್ಷ ಕ್ರಿಯೇಟರ್ಸ್ ಅನ್ನು Meta ಆಹ್ವಾನಿಸುತ್ತದೆ. ಈಗಾಗಲೇ ಫೇಸ್‌ಬುಕ್‌ನಲ್ಲಿ ಹಣ ಸಂಪಾದಿಸುತ್ತಿರುವ ಕ್ರಿಯೇಟರ್ಸ್ ಗೆ ಇನ್ವೈಟ್ ಮಾಡಿದೆ. ಆದರೆ ಹೊಸ ವಿಧಾನ ದಲ್ಲಿ ಪಾಲ್ಗೊಳ್ಳ ಬಯಸುವವರು ಫೇಸ್‌ಬುಕ್‌ನ ಹಳೆಯ ವಿಧಾನಗಳ ಮೂಲಕ ಹಣ ಸಂಪಾದಿಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಈ ಹೊಸ ವಿಧಾನವನ್ನು ಸೇರಲು ಬಯಸಿದ್ದು, ನಿಮಗೆ ಇನ್ನೂ ಇನ್ವೈಟ್ ಬಂದಿಲ್ಲ ಎಂದಾದರೆ Facebook ನ ಕಂಟೆಂಟ್ ಮೊನೆಟೈಜೇಶನ್ ಪೇಜ್ ಗೆ ಭೇಟಿ ನೀಡುವ ಮೂಲಕ ಆಸಕ್ತಿಯನ್ನು ವ್ಯಕ್ತಪಡಿಸಬಹುದು.