Vastu Tips: ನಿಮ್ಮ ಅಂಗೈ ನಲ್ಲಿ X ರೇಖೆ ಇದೆಯಾ? ಹಾಗಿದ್ರೆ ಈ ವಿಷ್ಯ ಖಂಡಿತಾ ತಿಳಿಯಿರಿ
Vastu Tips: ಹಸ್ತಸಾಮುದ್ರಿಕ ಶಾಸ್ತ್ರ ಮೂಲಕ (Vastu Tips) , ಕೆಲ ಜ್ಯೋತಿಷಿಗಳು ಕೈಯಲ್ಲಿರುವ ರೇಖೆಗಳನ್ನು ನೋಡಿಯೇ ಜಾತಕವನ್ನು ಹೇಳುತ್ತಾರೆ. ಹೌದು, ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ, ವಿವಿಧ ಅಂಗೈ ರೇಖೆಗಳ ಮೂಲಕ ಮದುವೆ, ಸಂತತಿ, ವೃತ್ತಿ, ಆರೋಗ್ಯ, ಯಶಸ್ಸು ಇತ್ಯಾದಿಗಳಂತಹ ಜೀವನದಲ್ಲಿ ಕೆಲವು ಘಟನೆಗಳ ಬಗ್ಗೆ ತಿಳಿದುಕೊಳ್ಳಬಹುದು.
ಅಂತೆಯೇ ಅಂಗೈ ಮಧ್ಯದಲ್ಲಿ ಕೆಲವರಿಗೆ ಆಂಗ್ಲ ಅಕ್ಷರ ‘x’ ಆಕಾರದಲ್ಲಿ ಗುರುತು ಕಾಣಿಸುತ್ತದೆ. ನಿಮ್ಮ ಕೈಯಲ್ಲಿ ಈ ಗುರುತು ಇದೆಯಾ ಒಮ್ಮೆ ಚೆಕ್ ಮಾಡಿಕೊಳ್ಳಿ. ಅಂಗೈಯಲ್ಲಿ ಈ x ಚಿಹ್ನೆ ಇದ್ದರೆ ಏನಾಗುತ್ತದೆ ಎಂಬುದನ್ನು ನಾವೀಗ ತಿಳಿಯೋಣ.
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೆಲವು ಅಪರೂಪದ ಗೀರುಗಳು ಕೆಲವೇ ಜನರ ಕೈಯಲ್ಲಿ ಕಂಡುಬರುತ್ತವೆ. ಈ ರೇಖೆಗಳನ್ನು ಹೊಂದಿರುವ ಜನರು ತಮ್ಮ ಜೀವನದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಾರೆ ಎಂದು ನಂಬಲಾಗಿದೆ.
ಅಂತೆಯೇ ಕೈಗಳ ಮೇಲಿನ ಎರಡು ರೇಖೆಗಳ ನಡುವೆ ಸ್ಪಷ್ಟವಾದ x ಆಕಾರದ ರೇಖೆಗಳನ್ನು ಹೊಂದಿರುವವರನ್ನು ಸಮಾಜದಲ್ಲಿ ಶಕ್ತಿ ಶಾಲಿ ವ್ಯಕ್ತಿಗಳು ಎಂದು ಕರೆಯಲಾಗುತ್ತದೆ. ಅವರು ಯೋಜನೆಗೆ ಮುಂದಾದರು ಅದು ಯಶಸ್ವಿಯಾಗುತ್ತೆ ಎಂದು ನಂಬಲಾಗಿದೆ. ಇನ್ನು ಅಂತಹ ಜನರು ತೀಕ್ಷ್ಣವಾದ ಮನಸ್ಸು ಮತ್ತು ಅತ್ಯುತ್ತಮ ಸ್ಮರಣೆಯನ್ನು ಹೊಂದಿರುತ್ತಾರೆ.
ಇದಲ್ಲದೆ, ಅವರು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಸ್ಥಾನದಲ್ಲಿ ಇರಲು ಸಾಧ್ಯವಾಗುತ್ತದೆ. ಇನ್ನು ಎರಡೂ ಅಂಗೈಗಳಲ್ಲಿ ಎಕ್ಸ್-ಆಕಾರದ ರೇಖೆಗಳನ್ನು ಹೊಂದಿರುವ ವ್ಯಕ್ತಿಯು ಸಮಾಜದಲ್ಲಿ ವಿಶೇಷ ಸ್ಥಾನವನ್ನು ಸೃಷ್ಟಿಸುತ್ತಾರೆ. ಅಂತಹ ವ್ಯಕ್ತಿ ಮರಣದ ನಂತರವೂ ಗುರುತಿಸಲ್ಪಡುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತೆ.