Dasasa Elephant: ಬೆದರಿದ ದಸರಾ ಆನೆ! ಮನಸ್ಸೋ ಇಚ್ಛೆ ಅಡ್ಡಾದಿಡ್ಡಿ ಓಡಿದ ಗಜರಾಜ ಹಿರಣ್ಯ

Share the Article

Dasasa Elephant: ದಸರಾ ಆನೆ ಬೆದರಿ, ಮನಸ್ಸೋ ಇಚ್ಛೆ ಅಡ್ಡಾದಿಡ್ಡಿ ಓಡಲು ಶುರು ಮಾಡಿದ ಘಟನೆ ಮಂಡ್ಯದ(Mandya) ಶ್ರೀರಂಗಪಟ್ಟಣ ದಸರಾ ಮಹೋತ್ಸವದಲ್ಲಿ ನಡೆದಿದೆ. ಹಿರಣ್ಯ ಆನೆಯ ರಂಪಾಟಕ್ಕೆ ದಿಕ್ಕಾಪಾಲಾಗಿ ಜನರು ಓಡಿದ್ದಾರೆ. ಮಾವುತರು, ಕಾವಾಡಿಗರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ನಿನ್ನೆಯಷ್ಟೇ ಶ್ರೀರಂಗಪಟ್ಟಣ(Shri Rangapattana) ದಸರಾ ಮಹೋತ್ಸವಕ್ಕೆ 3 ದಸರಾ ಆನೆಗಳು ಆಗಮಿಸಿದ್ದವು.

ಇಂದು ಬನ್ನಿಮಂಟಪ ಬಳಿ ತೆರಳುವಾಗ ಹಿರಣ್ಯ ಆನೆ ಬೆದರಿದೆ. ಶ್ರೀರಂಗಪಟ್ಟಣ ಮಿನಿ ವಿಧಾನಸೌಧದ ಬಳಿ ಈ ಘಟನೆ ಸಂಭವಿಸಿದೆ. ಬನ್ನಿ ಮಂಟಪದಿಂದ ರಂಗನಾಥ ಮೈದಾನದವರೆಗೆ ಅಂಬಾರಿ ಜೊತೆ ಹಿರಣ್ಯ ಆನೆ ಹೆಜ್ಜೆ ಹಾಕಲಿದೆ. ಮರದ ಅಂಬಾರಿಯನ್ನು ಮಹೇಂದ್ರ ಆನೆ ಹೊತ್ತು ಸಾಗಿದರೆ, ಮಹೇಂದ್ರ ಆನೆಗೆ ಕುಮ್ಕಿ ಆನೆಯಾಗಿ ಲಕ್ಷ್ಮೀ, ಹಿರಣ್ಯ ಅದರ ಜೊತೆಗೆ ಸಾಗಲಿದೆ.

ಆನೆಗಳಿಗೆ ಚಿತ್ರಾಲಂಕಾರ ಮಾಡಿದ ಬಳಿಕ ಹಿರಣ್ಯ ಆನೆ ಬೆದರಿ, ಅಡ್ಡಾದಿಡ್ಡಿ ಓಡಾಡಿ ಕೆಲ ಕಾಲ ಆತಂಕ ಸೃಷ್ಟಿಸಿತು. ತಕ್ಷಣ ಎಚ್ಚೆತ್ತ ಮಾವುತರು, ಕಾವಾಡಿಗರಿಂದ ಭಾರೀ ಅನಾಹುತ ತಪ್ಪಿಸಿದ್ದಾರೆ. ಆನೆಯ ರಂಪಾಟಕ್ಕೆ ಜನರು ದಿಕ್ಕಾಪಾಲಾಗಿ ಓಡಿದ್ದರು. ಯಾವುದೇ ಅಹಿತರಕರ ಘಟನೆ ಸಂಭವಿಸದಂತೆ ಮಾವುತ ಎಚ್ಚರ ವಹಿಸಿ ಆನೆಯನ್ನು ಸಮಾಧಾನ ಪಡಿಸಿ ನಿಲ್ಲಿಸಿದ್ದಾರೆ.

Leave A Reply