PPF Rules: ಪಿಪಿಎಫ್‌ ನಿಯಮಗಳಲ್ಲಿ ಬದಲಾವಣೆ! ಪ್ರತಿಯೊಬ್ಬರಿಗೂ ಅನ್ವಯ!

PPF Rules: ಅಕ್ಟೋಬರ್ 1, 2024 ರಿಂದ ಸಣ್ಣ ಉಳಿತಾಯ ಯೋಜನೆಯಲ್ಲಿ, ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯು ಪ್ರಮುಖ ಬದಲಾವಣೆಯನ್ನು ಮಾಡಿದೆ. ಹೊಸ ನಿಯಮಗಳ (PPF Rules) ಪ್ರಕಾರ, PPF ಖಾತೆಗಳನ್ನು ನಿರ್ವಹಿಸಲು, ಚಿಕ್ಕ ಖಾತೆದಾರರು, ಬಹು ಖಾತೆಗಳನ್ನು ಹೊಂದಿರುವವರು ಮತ್ತು NRI ಗಳಿಗೆ ಅನ್ವಯವಾಗುತ್ತದೆ.

 

ಮುಖ್ಯವಾಗಿ ಮಕ್ಕಳ ಹೆಸರಿನಲ್ಲಿ ತೆರೆಯಲಾದ ಪಿಪಿಎಫ್ ಖಾತೆಗಳ ಬಗ್ಗೆ ದೊಡ್ಡ ಅಪ್‌ಡೇಟ್ ಬಂದಿದೆ. ಹೊಸ ನಿಯಮದ ಪ್ರಕಾರ, ನೀವು ನಿಮ್ಮ ಮಗುವಿನ ಹೆಸರಿನಲ್ಲಿ PPF ಖಾತೆಯನ್ನು ತೆರೆದಿದ್ದರೆ, 18 ವರ್ಷ ವಯಸ್ಸಿನವರೆಗೆ ಬಡ್ಡಿಯನ್ನು ಸೇರಿಸಲಾಗುತ್ತದೆ. ಮಕ್ಕಳು ವಯಸ್ಕರಾದಾಗ ಪಿಪಿಎಫ್ ನಿಯಮದ ಪ್ರಕಾರ ಸಂಬಂಧಪಟ್ಟ ಖಾತೆಗೆ ಬಡ್ಡಿಯನ್ನು ನೀಡಲಾಗುತ್ತದೆ. ಆದ್ರೆ ಕೆಲವರು ತಮ್ಮ ಮಕ್ಕಳ ಹೆಸರಿನಲ್ಲಿ ಪ್ರತ್ಯೇಕ ಪಿಪಿಎಫ್ ಖಾತೆ ತೆರೆದಿರುವುದು ಸರ್ಕಾರದ ಗಮನಕ್ಕೆ ಬಂದಿರುವ ಹಿನ್ನಲೆ ಮಗು ವಯಸ್ಕನಾದ ದಿನದಿಂದ ಈ ಖಾತೆಗಳ ಮುಕ್ತಾಯ ಅವಧಿಯು ಪ್ರಾರಂಭವಾಗುತ್ತದೆ. ಇದರಿಂದಾಗಿ ಮಗುವಿನ PPF ಖಾತೆಯಲ್ಲಿ ಮೊದಲಿನಂತೆ ನಿಮಗೆ ಬಡ್ಡಿ ಸಿಗುವುದಿಲ್ಲ. ಪಿಪಿಎಫ್‌ನ ಬಡ್ಡಿ ದರವು ಶೇಕಡಾ 7.1 ಆಗಿದ್ದು, ಅದರ ಮೇಲೆ ಬಡ್ಡಿಯು ಈಗ ಉಳಿತಾಯ ಖಾತೆಯಂತೆ ಲಭ್ಯವಿರುತ್ತದೆ.

ಇನ್ನು ಕೆಲವರು ಒಂದಕ್ಕಿಂತ ಹೆಚ್ಚು PPF ಖಾತೆಗಳನ್ನು ನಿರ್ವಹಿಸುತ್ತಾರೆ. ಅಂದರೆ ಹಲವಾರು ಖಾತೆಗಳಲ್ಲಿ ವಾರ್ಷಿಕವಾಗಿ ತಲಾ 1.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡುತ್ತಾರೆ. ವರ್ಷಕ್ಕೆ 1.5 ಲಕ್ಷ ಹೂಡಿಕೆಯ ಮಿತಿಯೊಳಗೆ ಇರುವವರೆಗೆ ಬಹು ಖಾತೆಗಳ ಮೇಲೆ ಬಡ್ಡಿಯನ್ನು ಪಡೆಯುತ್ತೀರಿ ಎಂದು ಹೊಸ ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ. ಎಲ್ಲಾ ಖಾತೆಗಳ ಒಟ್ಟು ಬ್ಯಾಲೆನ್ಸ್ 1.5 ಲಕ್ಷಕ್ಕಿಂತ ಕಡಿಮೆ ಇದ್ದರೆ ಯಾವುದೇ ದ್ವಿತೀಯ ಖಾತೆಯ ಹೆಚ್ಚುವರಿ ಬ್ಯಾಲೆನ್ಸ್ ಅನ್ನು ಪ್ರಾಥಮಿಕ ಖಾತೆಗೆ ವಿಲೀನಗೊಳಿಸಲಾಗುತ್ತದೆ. ವಿಶೇಷವೆಂದರೆ ಪ್ರಾಥಮಿಕ ಮತ್ತು ಮಾಧ್ಯಮಿಕ ಖಾತೆಗಳನ್ನು ಹೊರತುಪಡಿಸಿ, ಯಾವುದೇ ಖಾತೆಗೆ ಯಾವುದೇ ಬಡ್ಡಿಯನ್ನು ನೀಡಲಾಗುವುದಿಲ್ಲ. ಇದರಿಂದಾಗಿ ಕೆಲವರು ಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆಗಳಲ್ಲಿ 1.5 ಲಕ್ಷಕ್ಕಿಂತ ಹೆಚ್ಚು ಹೂಡಿಕೆ ಮಾಡುತ್ತಾರೆ. ಇದರೊಂದಿಗೆ ಅವರು ಪ್ರತಿ ಖಾತೆಗೆ 7.1 ಶೇಕಡಾ ಬಡ್ಡಿಯನ್ನು ಪಡೆಯುತ್ತಿದ್ದರು. ಆದರೆ ಇದು ಇನ್ನುಮುಂದೆ ಸಾಧ್ಯವಿಲ್ಲ.

ಇನ್ನು ಈ ಹೊಸ ನಿಯಮಗಳು ಅಸ್ತಿತ್ವದಲ್ಲಿರುವ PPF ಖಾತೆಗಳನ್ನು ಹೊಂದಿರುವ NRI ಗಳಿಗೂ ಸಂಬಂಧಿಸಿವೆ. NRI ಖಾತೆದಾರರು ತಮ್ಮ ಖಾತೆಗಳನ್ನು ಮುಕ್ತಾಯದವರೆಗೆ ನಿರ್ವಹಿಸಬಹುದು. ಸೆಪ್ಟೆಂಬರ್ 30, 2024 ರವರೆಗೆ POSA ಬಡ್ಡಿಯನ್ನು ಮಾತ್ರ ಪಡೆಯುತ್ತಾರೆ. ಈ ದಿನಾಂಕದ ನಂತರ ಈ ಖಾತೆಗಳು ಫಾರ್ಮ್ H ನಲ್ಲಿ ನೀಡಲಾದ ನಿರ್ದಿಷ್ಟ ನಿವಾಸ ಮಾನದಂಡಗಳನ್ನು ಪೂರೈಸದೆ ಇದ್ದಲ್ಲಿ ಯಾವುದೇ ಬಡ್ಡಿಯನ್ನು ಗಳಿಸುವುದಿಲ್ಲ. ಇದರಿಂದ ಪ್ರಸ್ತುತ ಭಾರತಕ್ಕೆ ಭೇಟಿ ನೀಡುವ ಮತ್ತು PPF ಖಾತೆ ಹೊಂದಿರುವ ಜನರು ಸೆಪ್ಟೆಂಬರ್ 30, 2024 ರವರೆಗೆ ಬಡ್ಡಿಯನ್ನು ಪಡೆಯುತ್ತಾರೆ. ಇದರ ನಂತರ ಅವರು ನಿಯಮಗಳ ಪ್ರಕಾರ ಫಾರ್ಮ್ H ನಲ್ಲಿ ನೀಡಲಾದ ಮಾನದಂಡಗಳನ್ನು ಫಾಲೋ ಮಾಡಬೇಕು.

Leave A Reply

Your email address will not be published.