Camphor Bath: ನೀರಲ್ಲಿ ಕರ್ಪೂರ ಹಾಕಿ ಸ್ನಾನ ಮಾಡಿದರೆ ಆಗೋ ಪ್ರಯೋಜನಗಳೇನು? ಗೊತ್ತಾದ್ರೆ ದಿನವೂ ಹಾಕಿ ಮಾಡ್ತೀರಾ !!

Camphor Bath: ಕರ್ಪೂರವನ್ನು‌ ದೇವರ ಪೂಜೆಯಲ್ಲಿ ಆರತಿಯನ್ನು ಬೆಳಗಲು ಉಪಯೋಗಿಸುತ್ತೇವೆ. ಪೂಜೆ ಮಾಡುವಾಗ ಇದರ ಪರಿಮಳವನ್ನು ಆಸ್ವಾದಿಸಿದರೆ ಮನಸ್ಸಿಗೆ ಅದೆಷ್ಟೋ‌ ತೃಪ್ತಿ ಸಿಗುತ್ತದೆ. ಅಲ್ಲದೆ ಕೆಲವು ದೇವಾಲಯಗಳಲ್ಲಿ ತೀರ್ಥಕ್ಕೂ ಇದನ್ನು ಹಾಕಿ ಕೊಡೋದನ್ನು ನಾವು ನೋಡಿದ್ದೇವೆ. ಯಾಕೆಂದರೆ ಇದರಲ್ಲಿ ಔಷಧೀಯ ಗುಣಗಳೂ ಇವೆ. ಪ್ರಾಚೀನ ಕಾಲದಿಂದಲೂ, ಕರ್ಪೂರವನ್ನು ಆರೋಗ್ಯ ಸುಧಾರಣೆಗಾಗಿ ಬಳಸಲಾಗುತ್ತಿದೆ.

ಹೌದು, ಕರ್ಪೂರ ಕೇವಲ ದೇವರ ಪೂಜೆಗೆ ಯೂಸ್ ಆಗಲ್ಲ. ಅದರಲ್ಲಿ ಔಷಧದ ಗುಣಗಳಿವೆ. ಚಿಟಿಕೆಯಷ್ಟು‌ ಪಚ್ಚೆ ಕರ್ಪೂರವನ್ನು ಪ್ರತಿ ದಿನವೂ ತೆಗೆದುಕೊಂಡರೆ ಇದು ರಕ್ತದೊತ್ತಡವನ್ನು ಕಡಿಮೆ‌ ಮಾಡುವುದಲ್ಲದೇ ಸೋಂಕನ್ನು ಕೂಡ ಕಡಿಮೆ‌ ಮಾಡುತ್ತದೆ. ಸ್ವಲ್ಪ ಪಚ್ಚೆ ಕರ್ಪೂರ‌ವನ್ನು ಗಂಧದ ಜೊತೆ ಸೇರಿಸಿ ಸೇವಿಸಿದರೆ ಮೂತ್ರಕ್ಕೆ‌ ಸಂಬಂಧ‌ ಪಟ್ಟ ರೋಗಗಳನ್ನು ನಿವಾರಿಸಬಹುದು. ಇದರೊಂದಿಗೆ ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ‌ ಕರ್ಪೂರವನ್ನು ಹಾಕಿ ಸ್ನಾನ ಮಾಡಿದರೆ( Camphor Bath) ಇನ್ನೂ ಸಾಕಷ್ಟು ಪ್ರಯೋಜನಗಳಿವೆ. ಹಾಗಿದ್ರೆ ಏನೆಲ್ಲಾ ಉಪಯೋಗಗಳಿವೆ? ನೋಡೋಣ.

ನೀರಿನಲ್ಲಿ ಕರ್ಪೂರ ಹಾಕಿ ಸ್ನಾನ ಮಾಡಿದ್ರೆ ಏನಾಗುತ್ತೆ?
* ಕರ್ಪೂರದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಯಂಟಿ ಬಯೋಟಿಕ್ ಗುಣಗಳಿವೆ. ಇದನ್ನು ನೀರಿಗೆ ಹಾಕಿ ಸ್ನಾನ ಮಾಡಿದರೆ ತುರಿಕೆ, ದದ್ದು, ಮೊಡವೆ ಮತ್ತಿತರ ತ್ವಚೆ ಸಮಸ್ಯೆ ದೂರವಾಗುತ್ತದೆ.
* ಚರ್ಮವು ಪ್ರಕಾಶಮಾನವಾಗಿ ಹೊಳೆಯುತ್ತದೆ. ನೈಸರ್ಗಿಕ ಸೌಂದರ್ಯವರ್ಧಕ ಉತ್ಪನ್ನವಾಗಿ ಕಾರ್ಯನಿರ್ವಹಿಸುತ್ತದೆ.
* ಸ್ನಾನ ಮಾಡುವಾಗ ಕರ್ಪೂರದ ವಾಸನೆಯು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.
* ತಲೆನೋವು ಮತ್ತು ಬೆನ್ನುನೋವು ಕೂಡ ಕಡಿಮೆಯಾಗುತ್ತದೆ.

* ಕೀಲು ನೋವು ಮತ್ತು ಹುಣ್ಣುಗಳಿಂದ ಬಳಲುತ್ತಿರುವವರು ನಿತ್ಯ ಕರ್ಪೂರ ಸ್ನಾನ ಮಾಡಿದರೆ ಉತ್ತಮ ಉಪಶಮನ ದೊರೆಯುತ್ತದೆ.
* ಉಗುರು ಬೆಚ್ಚಗಿನ ನೀರಿನಲ್ಲಿ ಕರ್ಪೂರ ಹಾಕಿ ಸ್ನಾನ ಮಾಡಿದರೆ ಸುಸ್ತು, ನಿಶ್ಯಕ್ತಿ ಕಡಿಮೆಯಾಗುತ್ತದೆ.
* ಕ್ರಿಯಾಶೀಲರಾಗುತ್ತೀರಿ. ಇದು ನವಚೈತನ್ಯ, ನವ ಶಕ್ತಿ ತುಂಬುತ್ತದೆ.
* ಈ ನೀರಿನಿಂದ ಒಳ್ಳೆಯ ಪರಿಮಳ ಬರುತ್ತಿದ್ದಂತೆ.. ಮನಸ್ಸು ಪ್ರಶಾಂತವಾಗುತ್ತದೆ/ ಪ್ರಫುಲ್ಲವಾಗುತ್ತದೆ.
* ರಾತ್ರಿ ವೇಳೆ ಹೀಗೆ ಕರ್ಪೂರ ಸ್ನಾನ ಮಾಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ.

Leave A Reply

Your email address will not be published.