BBK-11: ಬಿಗ್ ಬಾಸ್ ಮನೆಯೊಳಗೆ ನಡೆಯಿತು ಅವಘಡ – ಇಬ್ಬರು ಸ್ಪರ್ಧಿಗಳು ಆಸ್ಪತ್ರೆ ದಾಖಲು?!

BBK-11: ಬಿಗ್ ಬಾಸ್ ಸೀಸನ್ -11 ರ ಮೊದಲ ವಾರವೇ ಮನೆಯೊಳಗೆ ಮನಸ್ತಾಪ, ಜಗಳ, ಪ್ರೀತಿ, ಮಮತೆ ಎಲ್ಲವೂ ಹುಟ್ಟಿಕೊಂಡಿದೆ. ಆದರೂ ಎಲ್ಲರೂ ಸಂಬಾಳಿಸಿಕೊಂಡು ಹೋಗುತ್ತಿದ್ದಾರೆ. ಈ ನಡುವೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್ ನೀಡಿ ಆಡಿಸುತ್ತಿದೆ. ಆದರೆ ಈ ಟಾಸ್ಕ್ ವೇಳೆ ಕೆಲವು ಅವಘಡಗಳು ನಡೆದು ಸ್ಪರ್ಧಿಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

 

ಹೌದು, ಬಿಗ್ ಬಾಸ್(BBK-11) ಮನೆಯಲ್ಲಿ ಸ್ವರ್ಗ ಹಾಗೂ ನರಕ ಎನ್ನುವ ಕಾನ್ಸೆಪ್ಟ್ ಮಾಡಲಾಗಿದೆ. ಎರಡೂ ಗುಂಪಿಗೆ ಒಂದು ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ಆಡುವಾಗ ಅವಘಡ ಸಂಭವಿಸಿದೆ. ಟಾಸ್ಕ್ ಆಡುವಾಗ ತ್ರಿವಿಕ್ರಂಗೆ ಗಾಯ ಆಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಅವರು ಆಸ್ಪತ್ರೆಗೆ ಸೇರಿದ್ದಾರೆ ಎಂದು ವರದಿ ಆಗಿದೆ. ಟಾಸ್ಕ್ ವೇಳೆ ಆದ ಅವಘಡದಿಂದ ಇಡೀ ಬಿಗ್ ಬಾಸ್ ಮನೆ ಆತಂಕಕ್ಕೆ ಒಳಗಾಗಿದೆ ಎನ್ನಲಾಗಿದೆ.

ಟಾಸ್ಕ್ ಆಡುವಾಗ ಚೆಂಡು ಹಿಡಿದು ಓಡುತ್ತಿದ್ದ ತ್ರಿವಿಕ್ರಂ ಅವರು ಬಿದ್ದಿದ್ದಾರೆ. ಇದರಿಂದ ಅವರಿಗೆ ಪೆಟ್ಟಾಗಿದೆ. ಅವರನ್ನು ಕನ್ಫೆಷನ್​ ರೂಂಗೆ ಕರೆತರುವಂತೆ ಬಿಗ್ ಬಾಸ್ ಸೂಚನೆ ನೀಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಆಗಿದೆ. ಅವರು ಚಿಕಿತ್ಸೆ ಪಡೆದು ದೊಡ್ಮನೆ ಒಳಗೆ ಬಂದಿದ್ದಾರಂತೆ. ಅದೇ ರೀತಿ ಗೋಲ್ಡ್​ ಸುರೇಶ್​ಗೂ ಪೆಟ್ಟಾಗಿದೆ ಎಂದು ಹೇಳಲಾಗುತ್ತಿದೆ.

Leave A Reply

Your email address will not be published.