Laddu Mutya: ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಲಡ್ಡು ಮುತ್ಯಾನ ರೀಲ್ಸ್ – ಯಾರು ಈ ಫ್ಯಾನ್ ಬಾಬಾ, ಈತನ ಅಸಲಿ ಕಥೆ ಏನು?

Laddu Mutya: ಸೋಷಿಯಲ್ ಮೀಡಿಯಾ ಅಥವಾ ಇನ್ಸ್ಟಾಗ್ರಾಮ್ ಏನಾದೂ ಓಪನ್ ಮಾಡಿದ್ರೆ ಸಾಕು ಇಂದು ಕೇಳಿಬರುವುದು ಒಂದೇ ಒಂದು ಹಾಡು, ಅದೇ ‘ಲಡ್ಡು ಮುತ್ಯಾನ ಅವತಾರ ಈಗಿನ ಸಂಚಾರಿ ದೇವರ’… ಯಪ್ಪಾ.. ಇದನ್ನು ಕೇಳಿ, ನೋಡಿ ಸಾಕಾಗಿ ಹೋಗಿದೆ ಎಂದು ಅಂದುಕೊಳ್ತಿದ್ದೀರಿ ಅಲ್ವಾ? ಹೀಗಂದ್ರೆ ಹೇಗೆ ಹೇಳಿ? ಫ್ಯಾನ್ ಬಾಬನ ಪವಾಡ ಏನೋ ನೋಡಿದ್ರಿ. ಆದರೆ ಈತನ ಹಿಂದಿನ ಕಥೆ ಏನು ಅನ್ನೋದು ಬೇಕಲ್ವಾ? ಈತ ಅಸಲಿ ಬಾಬನೋ? ನಕಲಿ ಬಾಬನೋ ತಿಳಿಯಬೇಕಲ್ವಾ? ಹಾಗಿದ್ರೆ ಇಲ್ಲಿದೆ ನೋಡಿ ಫ್ಯಾನ್ ನಿಲ್ಲಿಸೋ ಬಾಬನ ರೋಚಕ ಹಿಸ್ಟರಿ.

ಹೌದು, ಲಡ್ಡು ಮುತ್ಯಾ(Laddu Mutya)ನ ಅವತಾರ ಈಗಿನ ಸಂಚಾರಿ ದೇವರ’ ಎಂಬ ಹಾಡಿನ ಮೂಲಕ ಫ್ಯಾನ್ ನಿಲ್ಲಿಸಿ ಭಕ್ತರನ್ನು ಆಶೀರ್ವಾದ ಮಾಡುವ ವಿಕಲಚೇತನ ವ್ಯಕ್ತಿಯೊಬ್ಬ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಫೇಮಸ್ ಆಗಿದ್ದಾರೆ. ತಿರುಗುವ ಫ್ಯಾನ್ ನಿಲ್ಲಿಸಿ ಅದರ ಧೂಳನ್ನು ವಿಭೂತಿ ರೀತಿ ಭಕ್ತರ ಹಣೆಗೆ ಹಚ್ಚುವ ಲಡ್ಡು ಮುತ್ಯಾನ ರೀಲ್ಸ್​ಗಳು ಹರಿದಾಡುತ್ತಿವೆ. ವಿಕಲಚೇತನನೋರ್ವ ಮಾಡಿದ ಈ ರೀಲ್ಸ್ ಭಾರೀ ವೈರಲ್ ಆಗಿದ್ದು ಹತ್ತಾರು ಜನ ಅದನ್ನು ಅನುಕರಣೆ ಮಾಡಿ ರೀಲ್ಸ್ ಮಾಡ್ತಿದ್ದಾರೆ.

ರೀಲ್ಸ್ ನಲ್ಲಿ ಇಬ್ಬರು ವ್ಯಕ್ತಿಗಳು ಚೇರ್​ನಲ್ಲಿ ಕುಳಿತ ನಕಲಿ ಲಡ್ಡು‌ ಮುತ್ಯಾನ ಎತ್ತಿ ಹಿಡಿಯುತ್ತಾರೆ. ಆಗ ನಕಲಿ ಮುತ್ಯಾ ತಿರುಗುವ ಫ್ಯಾನ್ ನಿಲ್ಲಿಸಿ ಅದರ ಧೂಳನ್ನೆ ಭಸ್ಮದ ರೀತಿ ಲೇಪಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಟ್ರೆಂಡಿಂಗ್ ನಲ್ಲಿದೆ. ಕರ್ನಾಟಕ, ದೇಶಾದ್ಯಂತ ಯುವಕರು, ಹಿರಿಯರು, ಮಕ್ಕಳು ಸೇರಿದಂತೆ ಅನೇಕರು ನಕಲಿ ಲಡ್ಡು ಮುತ್ಯಾನ ಅನುಕರಣೆ ಮಾಡಿ ವಿಡಿಯೊ ಪೋಸ್ಟ್ ಮಾಡ್ತಿದ್ದಾರೆ.

ಆದರೆ ಅವರು ನಿಜವಾದ ಪವಾಡ ಪುರುಷರಲ್ಲ!! ಯಸ್, ನಿಜ.. ಈ ವಿಕಲಚೇತನ ವ್ಯಕ್ತಿ ನಿಜವಾದ ಬಾಬಾ ಅಲ್ಲ. ಆದ್ರೆ ಜನ ಮರುಳೋ.. ಜಾತ್ರೆ ಮರುಳೋ ಎಂಬಂತೆ ಮಂದಿಯೆಲ್ಲಾ ಈತನ ಭಕ್ತರಾಗಿದ್ದಾರೆ. ಈ ವ್ಯಕ್ತಿ ಮಂದಿಗೆಲ್ಲ ಚಳ್ಳೆಹಣ್ಣು ತಿನ್ನಿಸಿ ಫೇಮಸ್ ಆಗ್ತಾನೇ ಇದ್ದಾರೆ. ಹೀಗಾಗಿ ನಿಜವಾದ ಲಡ್ಡು ಮುತ್ಯನಾ ಭಕ್ತರು ಈತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ನಿಜವಾದ ಲಡ್ಡು ಮುತ್ಯಾ ಯಾರು? ಅವರು ಮಾಡಿದ ಪವಾಡವೇನು? ಲಡ್ಡು ಮುತ್ಯಾನ ಹಾಡಿಗೆ ರೀಲ್ಸ್ ಮಾಡಿದ ವಿಕಲಚೇತನ ವ್ಯಕ್ತಿ ಯಾರು? ಅದರ ಸಂಪೂರ್ಣ ವಿವರ ಇಲ್ಲಿದೆ.

ಯಾರು ಈ ಪವಾಡ ಪುರುಷ ಲಡ್ಡು ಮುತ್ಯಾ?
ಬಾಗಲಕೋಟೆ ತಾಲೂಕಿನ ‌ಸೀಮಿಕೇರಿ ಬಳಿ ಲಡ್ಡು ಮುತ್ಯಾನ ನೈಜ ‌ಮಠವಿದೆ. ಲಡ್ಡು ಮುತ್ಯಾ ಅವರು 1993ರ ಆಗಸ್ಟ್ 2ರಂದು ಲಿಂಗೈಕ್ಯರಾದರು. ಇವರು ತಲೆಗೆ ಮೈಗೆ ಗೋಣಿ ಚೀಲದ ತಟ್ಟು ಸುತ್ತಿಕೊಳ್ತಿದ್ದರು. ತಟ್ಟಿಗೆ ಲಡ್ ಅಂತ ಕೂಡ ಇವರನ್ನು ಕರೆಯಲಾಗುತ್ತಿತ್ತು. ಈ‌ ಕಾರಣಕ್ಕೆ ಲಡ್ಡು ಮುತ್ಯಾ ಎಂಬ ಹೆಸರು ಬಂತು. ಲಡ್ಡು ಮುತ್ಯಾ ಅವರ ಮೂಲ ಹೆಸರು ಮಲ್ಲಯ್ಯ. 1970-1990ರ ದಶಕದಲ್ಲಿ ಬಾಗಲಕೋಟೆ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಲಡ್ಡು ಮುತ್ಯಾ ಅವರನ್ನು ಪವಾಡ ಪುರುಷ ಎಂದು ಪೂಜಿಸುತ್ತಿದ್ದರು. ಇವರು ಆಡಿದ ಮಾತುಗಳು ನಿಜವಾಗ್ತಿದ್ದವು. ಅವರು ಯಾವ ಅಂಗಡಿಗೆ ಬಂದು ಹೋಗ್ತಾರೆ ಅವರಿಗೆ ಭಾರಿ ಲಾಭವಾಗ್ತಿತ್ತು. ಅವರ ಭಾಗ್ಯದ ಬಾಗಿಲು ತೆರೆಯುತ್ತಿತ್ತು. ಅವರು ಯಾರ ಮನೆಗೆ ಕಾಲಿಡ್ತಾರೆ ಅವರಿಗೆ ಅದೃಷ್ಟ ದೇವತೆ ಒಲಿಯುತ್ತಿದ್ದಳು. ಅವರ ಕುಟುಂಬ ಅಭಿವೃದ್ಧಿ ಆಗ್ತಿತ್ತು ಎಂಬ ನಂಬಿಕೆ ಇತ್ತು.

ಅಲ್ಲದೆ ಲಡ್ಡು‌ ಮುತ್ಯಾ ಮಠ ಇರೋದು ಸೀಮಿಕೇರಿಯಲ್ಲಿ ಮಾತ್ರ. ಬೇರೆ ಎಲ್ಲೂ ಇಲ್ಲ. ಯಾವುದೇ ಶಾಖಾ ಮಠವಿಲ್ಲ. ಇತರೆ ಮಠದಿಂದ ಯಾವ ಸ್ವಾಮೀಜಿಗಳನ್ನು ನೇಮಕ ಮಾಡಿಲ್ಲ. ಸೀಮಿಕೇರಿಯಲ್ಲಿ ಲಡ್ಡು ಮುತ್ಯಾ ಗದ್ದುಗೆ ಇದೆ. ಅಲ್ಲಿ ಅವರ ಮೂರ್ತಿ ಕೂಡ ಇದೆ. ಅಲ್ಲೇ ಬಂದು ಭಕ್ತರು ದರ್ಶನ ಪಡೆಯಬಹುದು. ಪ್ರತಿ ಹುಣ್ಣಿಮೆ, ಅಮಾವಾಸ್ಯೆಯಂದು ಇಲ್ಲಿ ಪ್ರಸಾದ ಹಂಚಲಾಗುತ್ತದೆ.

ಫ್ಯಾನ್ ನಿಲ್ಲಿಸೋ ಲಡ್ಡು ಮುತ್ಯಾಗೂ ಮೂಲ ಲಡ್ಡು‌ ಮುತ್ಯಾಗೂ ಸಂಬಂಧವಿಲ್ಲ:
ಇದ್ದಕ್ಕಿದ್ದಂತೆ ಈಗ ಈ ವಿಕಲಚೇತನ ವ್ಯಕ್ತಿ ಲಡ್ಡು ಮುತ್ಯಾ ಎಂದು ಹುಟ್ಟಿಕೊಂಡು, ಫ್ಯಾನ್ ನಿಲ್ಲಿಸಿ ನಿಜವಾದ ಮುತ್ಯರ ಮರ್ಯಾದೆ ತೆಗೆಯುತ್ತಿದ್ದಾನೆ. ರೀಲ್ಸ್ ನಲ್ಲಿ ಬರುವ ನಕಲಿ ಲಡ್ಡು‌ ಮುತ್ಯಾನಿಂದ ಯಾರೂ ಮೋಸ ಹೋಗಬಾರದು. ನಕಲಿ‌ ಲಡ್ಡು ಮುತ್ಯಾ ಹಾಗೂ ಸಹಚರರು ಹಣ ಪಡೆದು ವಂಚನೆ ಮಾಡುತ್ತಿದ್ದಾರೆ. ಅವರಿದ ಲಡ್ಡು‌ ಮುತ್ಯಾನ ಭಕ್ತರಿಗೆ ಬೇಸರವಾಗಿದೆ. ಇದು ಲಿಂಗೈಕ್ಯ ಲಡ್ಡು ಮುತ್ಯಾರಿಗೆ ಮಾಡುತ್ತಿರುವ ಅವಮಾನ ಅಂತ ಭಕ್ತರು, ಲಡ್ಡು ಮುತ್ಯಾ ಮಠದ ಆಡಳಿತ ‌ಮಂಡಳಿ ಆಕ್ರೋಶ ಹೊರ ಹಾಕಿದೆ.

2 Comments
  1. jacktoto says

    selamat datang di situs slot online, slot online daftar

  2. kvadratnomer_ksOa says

    Лучшие идеи по изготовлению квадратных номеров, Как сделать оригинальные квадратные номера

Leave A Reply

Your email address will not be published.