BBK- 11: ‘ನನ್ನ ಎದುರಾಕೊಂಡು ಬಿಗ್ ಬಾಸ್ ನಡೆಸ್ತೀರಾ..? ಬಿಗ್ ಬಾಸ್ ಗೋಡೆನೇ ಉಡಾಯಿಸ್ತಿನಿ’ – ಬಿಗ್ ಬಾಸ್ ಗೆ ಅವಾಸ್ ಹಾಕಿದ ಲಾಯರ್ ಜಗದೀಶ್ !!

BBK-11: ಬಿಗ್​ ಬಾಸ್​ ಸೀಸನ್​-11 ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದುಕೊಂಡಿದ್ದು, ಸ್ಪರ್ಧಿಗಳು ಮನೆಯಲ್ಲಿ ಸಖತ್ ಆಗಿಯೇ ಆಟವಾಡುತ್ತಿದ್ದಾರೆ. ಅಚ್ಚರಿಯ ಅಭ್ಯರ್ಥಿಗಳು ಮನೆಗೆ ಎಂಟ್ರಿಕೊಟ್ಟಿದ್ದಾರೆ. ಮೊದಲವಾರದಲ್ಲೇ ಗಲಾಟೆ, ಮನಸ್ತಾಪಗಳು ಭರ್ಜರಿಯಾಗಿ ಓಪನಿಂಗ್ ಪಡೆದಿದೆ. ಇದರ ಮಧ್ಯೆ ಲಾಯರ್ ಜಗದೀಶ್(Lawyer Jagadish) ಬಿಗ್ ಬಾಸ್​ಗೆ ಬಿಗ್ ಶಾಕ್ ಕೊಟ್ಟಿದ್ದಾರೆ

 

ಹೌದು, ಬಿಗ್​ಬಾಸ್​(Bigg Boss) ಶೋನ ವಿಡಿಯೋವೊಂದನ್ನ ರಿಲೀಸ್ ಮಾಡಲಾಗಿದ್ದು ವಿಡಿಯೋದಲ್ಲಿ ಎಕ್ಸ್​ನಲ್ಲಿ ‘ಯಾರು ತಿಳಿಯರು ಲಾಯರ್ ಜಗದೀಶ್ ಪರಾಕ್ರಮ! ಎಂದು ಟ್ಯಾಗ್ ಲೈನ್ ಕೊಟ್ಟಿದೆ. ಇದರಲ್ಲಿ ಲಾಯರ್ ಜಗದೀಶ್ ಅವರು ಕೆಂಡಕಾರಿದ್ದಾರೆ. ನಮ್ಮನ್ನ ಎದುರು ಹಾಕ್ಕೊಂಡು ಕರ್ನಾಟಕದಲ್ಲಿ ಬಿಗ್​ಬಾಸ್ ರನ್ ಮಾಡ್ತೀರಾ ಎಂದು ಕ್ಯಾಮೆರಾ ಮುಂದೆ ಬಂದು ಗದರಿದ್ದಾರೆ. ಅಲ್ಲದೇ ನನಗೆ ಇಲ್ಲಿ ಇರೋಕೆ ಇಷ್ಟ ಇಲ್ಲ. ಇಲ್ಲಿಂದ ಹೊರ ಹೋಗುತ್ತೇನೆ ಎಂದೂ ಅಬ್ಬರಿಸಿದ್ದಾರೆ.

ಇಷ್ಟಲ್ಲದೆ ‘ನಾ ಮನಸು ಮಾಡಿದರೆ ಹೆಲಿಕಾಪ್ಟರ್ ಇಲ್ಲಿಗೆ ತರಿಸುತ್ತೇನೆ. ಆ ಕೆಪಾಸಿಟಿ ನನ್ನಲ್ಲಿದೆ. ಒಳಗಡೆ ಏನೇನೂ ಮಾಫಿಗಳು ನಡೆಸುತ್ತೀರಾ ಅದೆಲ್ಲ ಎಕ್ಸ್​ಪೋಸ್ ಆಗುತ್ತೆ. ನಾನು ಸರ್ಕಾರಕ್ಕೆ ಇದನ್ನೆಲ್ಲ ಹೇಳುತ್ತೇನೆ. ಈ ಬಿಗ್​ಬಾಸ್​ ಗೋಡೆಯನ್ನ ಉಡಾಯಿಸಿ ಬಿಡುತ್ತೇನೆ. ಈ ಪ್ರೋಗ್ರಾಮ್ ಹಾಳು ಮಾಡಿಲ್ಲ ಎಂದರೆ ನನ್ನ ಹೆಸರು ಬೇರೆ ಇಡಿ. ಯಾವನು ಇಲ್ಲಿಗೆ ಕಾಲಿಡಬಾರದು ಎಂದ ಪೌರುಷ ತೋರಿದ್ದಾರೆ.

ಕೊನೆಗೆ ‘ಬಿಗ್​ ಬಾಸ್ ಐ ಆಮ್ ಗೋಯಿಂಗು ಟೂ ಯು ಎಕ್ಸ್​ ಪೋಸ್’. ನಮ್ಮನ್ನ ಎದುರು ಹಾಕ್ಕೊಂಡು ಕರ್ನಾಟಕದಲ್ಲಿ ಬಿಗ್​​ಬಾಸ್ ಓಡಿಸ್ತೀರಾ? ಎಂದು ದೊಡ್ಡ ಧ್ವನಿಯಲ್ಲೇ ಲಾಯರ್ ಜಗದೀಶ ಹೇಳಿದ್ದಾರೆ. ಆದರೆ ಜಗದೀಶ್ ಅವರು ಇದನ್ನೆಲ್ಲ ಹೇಳುವಾಗ ಕಂಟೆಸ್ಟೆಂಟ್​​ಗಳು ತಮಾಷೆಯಾಗಿ, ನಗುನಗುತ್ತ ಇರುತ್ತಾರೆ. ಒಳಗೆ ಏನೇನು ಆಗುತ್ತೋ ಎಂದು ಸದ್ಯ ಕುತೂಹಲ ಮೂಡಿದೆ.

 

Leave A Reply

Your email address will not be published.