Viral Video: ಪ್ಯಾಂಟ್ ಜಾರಿದ್ರೂ ನಿಲ್ಲದ ಹುಡುಗಿಯರ ಫೈಟಿಂಗ್ – ಪ್ಯಾಂಟಿಯಲ್ಲೇ ಮುಂದುವರಿತು ಡಿಶುಂ, ಡಿಶುಂ !!

Viral Video: ಇತ್ತೀಚಿನ ದಿನಗಳಲ್ಲಿ ಹಳ್ಳಿಯ ಬದಿ ಮಹಿಳೆಯರು, ಹೆಂಗಳೆಯರು ಕಿತ್ತಾಡುವಂತ ಆ ಕಲೆಯೇ ಮಾಯವಾಗಿದೆ ಎಂದು ಜನ ಮಾತನಾಡುತ್ತಿದ್ದರು. ಈ ಕುರಿತು ಟ್ರೋಲ್ ಕೂಡ ಆಗಿದ್ದವು. ಆದರೆ ಈ ನಡುವೆ ಕಾಲೇಜು ಹುಡುಗಿಯರು, ಯುವತಿಯರು ಬೀದಿಬದಿ ಹೊಡೆದಾಡಿಕೊಳ್ಳವುದು ಹೆಚ್ಚಾಗಿದೆ. ಈ ರೀತಿ ಬೀದಿಯಲ್ಲಿ ಹುಡುಗಿಯರು ಕಿತ್ತಾಡೋದನ್ನು ನೋಡೋದೇ ಚೆಂದ.

 

ಹೌದು, ಹುಡುಗಿಯರು ಜಡೆ ಜಡೆ ಹಿಡಿದು ಹೊಡೆದಾಡ್ತಿದ್ದರೆ ನೆರೆದವರು ನಿಂತು ನೋಡ್ತಾರೇ ವಿನಃ ಸಹವಾಸಕ್ಕೆ ಹೋಗಲ್ಲ. ಹೀಗೆ ಸೋಶಿಯಲ್ ಮೀಡಿಯಾ (social media) ದಲ್ಲಿ ಬೀದಿ ಬದಿ ಜಗಳಗಳ ಸಾಕಷ್ಟು ವಿಡಿಯೋ ವೈರಲ್ (video viral) ಆಗ್ತಾನೆ ಇರುತ್ತೆ. ಅಂತೆಯೇ ಇದೀಗ ಹುಡುಗಿಯರು ಹೊಡೆದಾಡೋ ವಿಡಿಯೋಯೊಂದು ಭಾರೀ ವೈರಲ್(Viral Video) ಆಗ್ತಿದೆ. ಆದರೇ ಈ ವಿಡಿಯೋ ಸ್ವಲ್ಪ ಸ್ಪೆಷಲ್ ಆಗಿದೆ. ಯಾಕೆಂದರೆ ಹುಡುಗಿಯ ಪ್ಯಾಂಟ್ ಜಾರಿದ್ರೂ ಲೆಕ್ಕಿಸದೆ ಫೈಟಿಂಗ್ ಮಾಡಿದ್ದಾರೆ.

ವಿಡಿಯೋದಲ್ಲೆ ಏನಿದೆ?
ನಾಗಾಲ್ಯಾಂಡ್‌(Nagaland) ನಡೆದ ಈ ಘಟನೆಯು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹುಡುಗಿಯರು ಬೀದಿಯಲ್ಲಿ ಅಟ್ಟಾಡಿಸಿಕೊಂಡು ಹೊಡೆದಾಡಿದ್ದಾರೆ. ಎಲ್ಲರೂ ಒಂದೇ ರೀತಿ ಡ್ರೆಸ್ ಹಾಕಿರೋದ್ರಿಂದ ಯಾವುದೋ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಇವರು ಎಂದು ಅಂದಾಜಿಸಲಾಗಿದೆ. ಆದ್ರೆ ಇದು ಸ್ಪಷ್ಟವಾಗಿಲ್ಲ. ಆರಂಭದಲ್ಲಿ ಜಗಳ ಹೇಗೆ ಶುರುವಾಯ್ತು ಎಂಬುದು ಗೊತ್ತಾಗಿಲ್ಲ. ಗಲಾಟೆ ಎಷ್ಟು ಭಯಾನಕ ತಿರುವು ಪಡೀತು ಅಂದ್ರೆ ಒಬ್ಬ ಹುಡುಗಿ ಮೂರ್ಛೆ ಹೋದ್ಲು. ಆಕೆಯನ್ನು ರಕ್ಷಿಸಲು ನಿಂತಿದ್ದವರೆಲ್ಲ ಓಡಿ ಬಂದ್ರು.

ಜಗಳದ ಮಧ್ಯೆ ಏಟು ತಿನ್ನುತ್ತಿರುವ ಹುಡುಗಿ, ಏಟು ನೀಡ್ತಿರೋ ಹುಡುಗಿ ಪ್ಯಾಂಟ್ ಹಿಡಿದು ಎಳೀತಾಳೆ. ಪ್ಯಾಂಟ್ ಕೆಳಗೆ ಬಿದ್ರೂ, ಹುಡುಗಿಗೆ ಪ್ರಜ್ಞೆ ಇರೋದಿಲ್ಲ. ಹೊಡೆಯೋದನ್ನು ಬಿಡದ ಹುಡುಗಿ, ನಾಲ್ಕೇಟು ಹಾಕಿದ್ಮೇಲೆ ಪ್ಯಾಂಟ್ ಮೇಲೆ ಏರಿಸಿಕೊಳ್ತಾಳೆ. ನಂತ್ರ ಆಕೆಯನ್ನು ಕೆಳಗೆ ಬೀಳಿಸಿ, ಮತ್ತೊಂದಿಷ್ಟು ಹೊಡೀತಾಳೆ. ಕೆಳಗೆ ಬೀಳುವ ಹುಡುಗಿ ಮೂರ್ಛೆ ಹೋಗ್ತಾಳೆ.

ಇತ್ತ ಇನ್ನಿಬ್ಬರು ಹುಡುಗಿಯರು ಕೂಡ ಕಬಡ್ಡಿ ಆಡೋದನ್ನು ನೀವು ನೋಡಬಹುದು. ಫಟ್ ಫಟ್ ಅಂತ ಕಪಾಳಮೋಕ್ಷ ಮಾಡುವ ಹುಡುಗಿ, ಬಾಲ್ ಎಸೆದಂತೆ ಇನ್ನೊಬ್ಬಳನ್ನು ಎತ್ತಿ ಬೀಸಾಕಿ ಆಕೆಗೆ ಒದೆಯುತ್ತಾಳೆ. ಹುಡುಗಿ ಮೂರ್ಛೆ ಹೋಗ್ತಿದ್ದಂತೆ ಪರಿಸ್ಥಿತಿ ಸ್ವಲ್ಪ ತಿಳಿಯಾಗುತ್ತೆ. ನೆರೆದಿದ್ದವರು ಆಕೆಯನ್ನು ಎತ್ತಿ, ರಕ್ಷಿಸುವ ಕೆಲಸ ಮಾಡಿದ್ರೆ, ಮತ್ತೊಂದಿಷ್ಟು ಮಂದಿ ಕೋಪದಲ್ಲಿ ಕುದಿಯುತ್ತಿರುವ ಹುಡುಗಿಯನ್ನು ಶಾಂತಗೊಳಿಸುವ ಪ್ರಯತ್ನ ಮಾಡ್ತಿದ್ದಾರೆ. ವಿಡಿಯೋದಲ್ಲಿ ಹುಡುಗಿಯರು ಕಿರುಚಾಡೋದನ್ನು ನೀವು ಕೇಳ್ಬಹುದು.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಪೊಲೀಸರು ಕ್ರಮಕೈಗೊಂಡಿದ್ದಾರೆ.

 

Leave A Reply

Your email address will not be published.