Varanasi: ಸಾಯಿಬಾಬಾ ದೇವರಲ್ಲ ಅನ್ನೋ ವಾದ, ಉತ್ತರ ಪ್ರದೇಶದ ದೇವಾಲಯಗಳಿಂದ ಸಾಯಿಬಾಬಾ ವಿಗ್ರಹ ತೆರವು !

Share the Article

Varanasi: ವಾರಾಣಸಿ: ಉತ್ತರಪ್ರದೇಶದ ಹಲವು ದೇವಸ್ಥಾನಗಳಲ್ಲಿನ ಸಾಯಿಬಾಬಾ ಮೂರ್ತಿಗಳನ್ನು ತೆರವುಗೊಳಿಸಲಾಗಿದೆ. ‘ಸನಾತನ ರಕ್ಷಕ ದಳ’ ಎಂಬ ಸಂಘಟನೆ ನಡೆಸಿದ ಅಭಿಯಾನವಾಗಿ ಈ ಕಾರ್ಯಾಚರಣೆ ನಡೆಸುತ್ತಿದೆ. ದೇಶದಾದ್ಯಂತ ಎಷ್ಟೋ ಜನರು ಸಾಕ್ಷಾತ್ ದೇವರೆಂದು ನಂಬಿಕೊಂಡು ಬಂದಿರುವ ಸಾಯಿಬಾಬಾರ ವಿಗ್ರಹವನ್ನು ತೆರವುಗೊಳಿಸಿರುವುದು ಅಚ್ಚರಿ ಮೂಡಿಸಿದೆ.

ಉತ್ತರಪ್ರದೇಶದ ವಾರಣಾಸಿಯ ಹತ್ತು ದೇವಸ್ಥಾನಗಳಲ್ಲಿನ ಸಾಯಿಬಾಬಾ ಮೂರ್ತಿ ತೆರವುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಅಗಸ್ಟಕುಂಡ ಮತ್ತು ಭೂತೇಶ್ವರ ದೇವಸ್ಥಾನಗಳಲ್ಲೂ ಸಾಯಿಬಾಬಾ ಮೂರ್ತಿ ತೆರವುಗೊಳಿಸಲಾಗುವುದು. ವಾರಾಣಸಿಯಲ್ಲಿ ಕೇವಲ ಶಿವನ ಆರಾಧನೆ ಮಾತ್ರ ನಡೆಯಬೇಕು ಎನ್ನುವುದು ಸನಾತನ ರಕ್ಷಕ ದಳದ ಅಧ್ಯಕ್ಷ ಅಜಯ್ ಶರ್ಮಾ ಹೇಳಿಕೆ.

ವಾರಣಾಸಿಯ ಬಡಾ ಗಣೇಶ ದೇವಸ್ಥಾನದ ಸಾಯಿಬಾಬಾ ಮೂರ್ತಿಯನ್ನು ತೆಗೆದು ದೇವಸ್ಥಾನದ ಹೊರಗಿನ ಆವರಣದಲ್ಲಿ ಇಡಲಾಗಿದೆ. ಶಾಸ್ತ್ರಗಳ ಪ್ರಕಾರ ಸಾಯಿಬಾಬಾ ಪೂಜೆ ನಿಷೇಧಿಸಲಾಗಿದೆಯಾದರೂ ಸರಿಯಾದ ಜ್ಞಾನವಿಲ್ಲದೆ ಸಾಯಿಬಾಬಾರನ್ನು ಪೂಜಿಸಲಾಗುತ್ತಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ರಾಮುಗುರು ತಿಳಿಸಿದ್ದಾರೆ. ಅನ್ನಪೂರ್ಣ ದೇವಸ್ಥಾನದ ಮುಖ್ಯ ಅರ್ಚಕರಾಗಿರುವ ಶಂಕರ್ ಪುರಿಯಾವರು ಕೂಡ, ‘ಶಾಸ್ತ್ರಗಳಲ್ಲಿ ಸಾಯಿಬಾಬಾ ಪೂಜೆಯ ಉಲ್ಲೇಖವಿಲ್ಲ’ ಎಂದಿದ್ದಾರೆ.

ತಾವು ಸನಾತನಿ ಎಂದು ಹೇಳುವವರೇ ದೇವಸ್ಥಾನಗಳಲ್ಲಿ ಹಿಂದೆ ಸಾಯಿಬಾಬಾ ಮೂರ್ತಿಗಳನ್ನು ಸ್ಥಾಪಿಸಿದವರು. ಅವರೇ ಈಗ ಮೂರ್ತಿಗಳನ್ನು ತೆರವುಗೊಳಿಸುತ್ತಿದ್ದಾರೆ. ಎಲ್ಲ ದೇವರೂ ಒಂದೇ, ದೇವರು ಯಾವ ರೂಪದಲ್ಲೂ ಇರಬಹುದು, ಇಂಥಹಾ ಕೆಲಸಗಳು ಭಕ್ತರ ನಂಬಿಕೆಗಳನ್ನು ಘಾಸಿಗೊಳಿಸುತ್ತವೆ ಎಂಬುದಾಗಿ ವಾರಾಣಸಿಯ ಸಂತ ರಘುವರ್ ದಾಸ್ ಸಾಯಿ ಮಂದಿರದ ಅರ್ಚಕ ಸಮರ್ ಘೋಷ್ ನೋವು ವ್ಯಕ್ತಪಡಿಸಿದ್ದಾರೆ.

Leave A Reply