Renukaswamy Murder Case: ಜಾಮೀನು ಸಿಕ್ಕ 10 ದಿನಗಳ ನಂತರ ಮೂವರು ಜೈಲಿನಿಂದ ಇಂದು ಬಿಡುಗಡೆ

Renukaswamy Murder Case: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಕುರಿತಂತೆ ಜಾಮೀನು ಪಡೆದಿದ್ದ ಮೂವರು ಆರೋಪಿಗಳು ಇಂದು (ಬುಧವಾರ) ಜೈಲಿನಿಂದ ಬಿಡುಗಡೆಯಾಗಿದ್ದಾರೆ.

 

ಜಾಮೀನು ದೊರಕಿ 10 ದಿನಗಳ ಬಳಿಕ ಆರೋಪಿ ನಂ.15 ಕಾರ್ತಿಕ್‌, ಆರೋಪಿ ನಂ.16 ಕೇಶವ ಮೂರ್ತಿ, ಆರೋಪಿ ನಂ.17 ನಿಖಿಲ್‌ ನಾಯಕ್‌ ಇವರನ್ನು ಶ್ಯೂರಿಟಿ ಪಡೆದು ತುಮಕೂರು ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ.

ಸೆ.23 ರಂದು ಕೇಶವಮೂರ್ತಿಗೆ ಜಾಮೀನು ನೀಡಿದ್ದು, ಕಾರ್ತಿಕ್‌ ಮತ್ತು ನಿಖಿಲ್‌ಗೆ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿತ್ತು.

Leave A Reply

Your email address will not be published.